Advertisement

ಪಾರ್ಟಿಗೆ ಬಂದಿದ್ದ ಅಪ್ರಾಪ್ತ ಬಾಲಕಿ ಮೇಲೆ ಟಿಎಂಸಿ ನಾಯಕನ ಮಗನಿಂದ ರೇಪ್‌?

01:19 AM Apr 12, 2022 | Team Udayavani |

ಕೋಲ್ಕತಾ: ಪಂಚಾಯತ್‌ ಮಟ್ಟದ ಟಿಎಂಸಿ ನಾಯಕನ ಮಗ ಏರ್ಪಡಿಸಿದ್ದ ಪಾರ್ಟಿಗೆ ಬಂದಿದ್ದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಆಗಿರುವ ಆರೋಪ ಕೇಳಿಬಂದಿದೆ.

Advertisement

ಬಾಲಕಿ ಮೃತಪಟ್ಟಿದ್ದು, ಪೋಷಕರು ಈ ಬಗ್ಗೆ ದೂರು ದಾಖಲಿಸಿದ್ದಾರೆ. ಪಶ್ಚಿಮ ಬಂಗಾಲದ ನಾದಿಯಾ ಜಿಲ್ಲೆಯ ಹಂಸ್ಖಲೀ ಪ್ರದೇಶದಲ್ಲಿ ಟಿಎಂಸಿ ನಾಯಕನ ಮಗ‌ ಬ್ರಜಗೋಪಾಲ್‌ ಅಲಿಯಾಸ್‌ ಸೊಹೈಲ್‌ ಗಯಾಲಿ ಎ. 4 ರಂದು ಪಾರ್ಟಿ ಇಟ್ಟುಕೊಂಡಿದ್ದ.

ಪಾರ್ಟಿಗೆ ಬಂದಿದ್ದ 14 ವರ್ಷದ ಬಾಲಕಿ ಮೇಲೆ ಆತ ಮತ್ತು ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ. ಅಸ್ವಸ್ಥಳಾಗಿ ಮನೆಗೆ ಬಂದ ಬಾಲಕಿ ಕೆಲವು ಸಮಯದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಕುಟುಂಬ ದೂರಿದೆ.

ಒತ್ತಾಯಪೂರ್ವಕವಾಗಿ ಬಾಲಕಿ ದೇಹವನ್ನು ಅಂತ್ಯಸಂಸ್ಕಾರ ಮಾಡಿಸಿದ್ದಾಗಿ ದೂರಲಾಗಿದೆ. ಪೊಲೀಸರು ಬ್ರಜಗೋಪಾಲ್‌ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಉಡುಪಿಯಲ್ಲಿ ಡಿಜಿಟಲ್‌ ಗ್ರಂಥಾಲಯ ಉದ್ಘಾಟಿಸಿದ ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next