Advertisement

KKR-RR ಹೈವೋಲ್ಟೇಜ್ ಫೈಟ್: ಟಾಸ್ ಗೆದ್ದ ಸ್ಮಿತ್ ಬಳಗ ಬೌಲಿಂಗ್ ಆಯ್ಕೆ

07:04 PM Nov 01, 2020 | Mithun PG |

ದುಬೈ:  ಐಪಿಎಲ್ 2020ರ 54ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್  ರೈಡರ್ಸ್ ಮುಖಾಮುಖಿಯಾಗುತ್ತಿದ್ದು ಟಾಸ್ ಗೆದ್ದ  ಸ್ಮಿತ್ ಬಳಗ ಬೌಲಿಂಗ್ ಆಯ್ದುಕೊಂಡಿದೆ.

Advertisement

ಪ್ಲೇ ಆಫ್ ಗೇರುವ ತವಕದಲ್ಲಿ ಎರಡೂ ತಂಡಗಳಿದ್ದು, ಇಂದಿನ ಪಂದ್ಯ ಹೈವೋಲ್ಟೇಜ್ ಫೈಟ್ ಎನಿಸಿಕೊಂಡಿದೆ. ಇಂದು ಸೋಲುವ ತಂಡ ಟೂರ್ನಿಯಿಂದಲೇ ಹೊರಬೀಳಲಿದ್ದು, ಗೆಲ್ಲುವ ತಂಡದ ಫ್ಲೇ ಆಫ್ ಕನಸು ಉಳಿದ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರ ಮೇಲೆ ಅವಲಂಬಿತವಾಗಿರಲಿದೆ.

ರಾಜಸ್ಥಾನ್ ರಾಯಲ್ಸ್ ನ ಸ್ಟ್ರೋಕ್ಸ್, ಸ್ಮಿತ್, ಸ್ಯಾಮ್ಸನ್ ಆರ್ಭಟಿಸಿದರೆ ಪಂದ್ಯ ಗೆಲ್ಲುವುದು ಖಚಿತ. ಮತ್ತೊಂದೆಡೆ ಇಯಾನ್ ಮಾರ್ಗನ್ ಮುನ್ನಡೆಸುತ್ತಿರುವ ಕೆಕೆಆರ್ ಕೂಡ ಗೆಲುವಿನ ಲೆಕ್ಕಾಚಾರದದಲ್ಲಿದೆ.

ಇತ್ತಂಡಗಳು 21 ಬಾರಿ ಮುಖಾಮುಖಿಯಾಗಿದ್ದು, 11ರಲ್ಲಿ ಕೆಕೆಆರ್ ಮತ್ತು 10 ರಲ್ಲಿ ರಾಜಸ್ಥಾನ ಜಯಗಳಿಸಿದೆ.

ಆಡುವ ಹನ್ನೊಂದರ ಬಳಗ

Advertisement

ರಾಜಸ್ಥಾನ್ ರಾಯಲ್ಸ್: ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್ (ನಾಯಕ), ಜೋಸ್ ಬಟ್ಲರ್, ರಿಯಾನ್ ಪರಾಗ್, ರಾಹುಲ್ ತಿವಾಟಿಯಾ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ವರುಣ್ ಆರನ್, ಕಾರ್ತಿಕ್ ತ್ಯಾಗಿ

ಕೋಲ್ಕತಾ ನೈಟ್ ರೈಡರ್ಸ್: ಶುಭ್ ಮನ್ ಗಿಲ್, ನಿತೀಶ್ ರಾಣಾ, ಸುನಿಲ್ ನರೈನ್, ಇಯೊನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ , ಆಂಡ್ರೆ ರಸ್ಸೆಲ್, ರಾಹುಲ್ ತ್ರಿಪಾಠಿ, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ಶಿವಂ ಮಾವಿ, ವರುಣ್ ಚಕ್ರವರ್ತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next