Advertisement

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

12:02 AM Sep 17, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲ ಟ್ರೈನಿ ವೈದ್ಯೆ ಅತ್ಯಾಚಾರ-ಹತ್ಯೆ ಘಟನೆ ನಡೆದ ದಿನ ಬೆ.10 ಗಂಟೆಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಘಟನ ಸ್ಥಳದಿಂದ ಕೇವಲ 1 ಕಿ.ಮೀ. ದೂರದಲ್ಲಿರುವ ಪೊಲೀಸ್‌ ಠಾಣೆ ಯಿಂದ ಬರಲು ಪೊಲೀಸ್‌ ಅಧಿಕಾರಿ ಅಭಿಜಿತ್‌ ಮಂಡಲ್‌ ಬರೋಬ್ಬರಿ 1 ಗಂಟೆ ತೆಗೆದುಕೊಂಡಿದ್ದರು. ತನ್ಮೂಲಕ ಉದ್ದೇಶಪೂರ್ವಕ ವಿಳಂಬ ಮಾಡಿ, ತನಿಖೆಯ ಹಾದಿ ತಪ್ಪಿಸಲು ಯತ್ನಿಸಿ ದ್ದಾರೆಂದು ಸಿಬಿಐ ಆರೋಪಿಸಿದೆ.
ಎಫ್ಐಆರ್‌ ವಿಳಂಬ ಆರೋಪದ ಮೇರೆಗೆ ಅಭಿಜಿತ್‌ರನ್ನು ಬಂಧಿಸಲಾ ಗಿತ್ತು. ಅವರನ್ನು ಕೋರ್ಟ್‌ಗೆ ಹಾಜರುಪ ಡಿಸಿದ ವೇಳೆಯಲ್ಲಿ ಈ ಮೇಲ್ಕಂಡ ಆರೋಪಗಳನ್ನು ಅಧಿಕಾರಿಗಳು ಮಾಡಿ ದ್ದಾರೆ. 2ನೇ ಬಾರಿಗೆ ಶವ ಪರೀಕ್ಷೆಗೆ ಮನವಿ ಮಾಡಿದರೂ ಅಭಿಜಿತ್‌ ತರಾ ತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿದ್ದರೆಂದು ಸಿಬಿಐ ಆರೋಪಿಸಿದೆ.

Advertisement

ಸಿಎಂ ಮನೆಯಲ್ಲಿ ಅಂತಿಮ ಮಾತುಕತೆ
ಪ್ರತಿಭಟನನಿರತ ವೈದ್ಯರೊಂದಿಗೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕಡೆಯ ಸುತ್ತಿನ ಮಾತುಕತೆ ನಡೆ ಸಿದ್ದಾರೆ. ಈಗ ವೈದ್ಯರು ನೇರ ಪ್ರಸಾ ರದ ಬದಲಿಗೆ ಮಾತುಕತೆ ರೆಕಾರ್ಡ್‌ ಮಾಡುವುದರ ಜತೆಗೆ ಸಭೆಯ ಟಿಪ್ಪಣಿ ಸಿದ್ಧಪಡಿಸಿ ಸಹಿ ಹಾಕಿಕೊಡ ಬೇಕೆಂದು ಕೇಳಿದ್ದು, ಅದಕ್ಕೆ ಸಿಎಂ ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಭೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next