Advertisement

ಕೋವಿಡ್ ಸ್ವೀಟ್ ತಿನ್ನೋಕೆ ನೀವು ರೆಡೀನಾ?

10:22 PM Apr 07, 2020 | Hari Prasad |

ಲಾಕ್‌ ಡೌನ್‌ ಅವಧಿಯಲ್ಲಿ ಜನಿಸಿದ ಮಕ್ಕಳಿಗೆ ಕೆಲವೆಡೆ ಹೆತ್ತವರು ಕೊರೊನಾ, ಕೋವಿಡ್‌ ಎಂದೆಲ್ಲಾ ಹೆಸರಿಟ್ಟರು. ಇನ್ನೂ ಕೆಲವರು ಮನೆಯಲ್ಲಿನ ಮುದ್ದಿನ ಶ್ವಾನ, ಬೆಕ್ಕಿಗೂ ಮಾರಕ ಸೋಂಕಿನ ಹೆಸರಿಟ್ಟು ಸುದ್ದಿಯಾದರು.

Advertisement

ಆದರೆ ಈ ಪಶ್ಚಿಮ ಬಂಗಾಲದ  ಜನ ಸ್ವಲ್ಪ ವಿಭಿನ್ನವಾಗಿ ಆಲೋಚಿಸಿದ್ದಾರೆ. ಕೋಲ್ಕತಾದ ಸಿಹಿ ತಿನಿಸುಗಳ ಅಂಗಡಿ ಒಂದರಲ್ಲಿ ಕೋವಿಡ್ ವೈರಸ್‌ ಆಕಾರದ ಸಿಹಿ ತಿನಿಸು ತಯಾರಿಸಿ, ಅದಕ್ಕೆ ‘*** ಸಂದೇಶ್‌’ ಎಂದು ನಾಮಕರಣ ಮಾಡಿ ಮಾರಾಟಕ್ಕಿಡಲಾಗಿದೆ.

ಪ್ರೀತಿ ಭಟ್ಟಾಚಾರ್ಯ ಎಂಬುವರು ಈ ಸ್ವೀಟಿನ ಫೋಟೋ ತೆಗೆದು ಟ್ವೀಟ್‌ ಮಾಡಿದ್ದಾರೆ. ವಿಷಯ ಏನೆಂದರೆ ಸಿಹಿ ತಿನಿಸುಗಳ ಪ್ರಿಯರಾಗಿರುವ ಬೆಂಗಾಲಿಗರು, ಈ ಸ್ವೀಟನ್ನು ಕೊಂಡು ತಿನ್ನೋದೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next