Advertisement

ಚಕ್ರವರ್ತಿ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್: 59 ರನ್ ಗಳಿಂದ ಗೆದ್ದ ಕೋಲ್ಕತ್ತಾ

07:28 PM Oct 24, 2020 | Mithun PG |

ಅಬುಧಾಬಿ: ವರುಣ್ ಚಕ್ರವರ್ತಿ ಹಾಗೂ ಪ್ಯಾಟ್ ಕಮಿನ್ಸ್ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಗ್ಗರಿಸಿದೆ.

Advertisement

ಕೊಲ್ಕತ್ತಾ ನೀಡಿದ 195 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ  9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಲಷ್ಟೇ ಶಕ್ತವಾಯಿತು.

ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿಸಿದ ಅಜಿಂಕ್ಯಾ ರಹಾನೆ ಮತ್ತು ಶಿಖರ್ ಧವನ್  ಒಂದಂಕಿ ದಾಟುವ ಮೊದಲೇ ಪೆವಿಲಿಯನ್ ಸೇರಿದರು. ರಹಾನೆ, ಪ್ಯಾಟ್ ಕಮಿನ್ಸ್ ಎಸೆದ ಮೊದಲ ಬಾಲ್ ನಲ್ಲೆ ಎಲ್ ಬಿ ಬಲೆಗೆ ಬಿದ್ದು ಶೂನ್ಯಕ್ಕೆ ನಿರ್ಗಮಿಸಿದರು. ಧವನ್ ಕೂಡ 6ರನ್ ಗಳಿಸಿದ್ದಾಗ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಡೆಲ್ಲಿ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. 38 ಎಸೆತಗಳನ್ನು ಎದುರಿಸಿದ ಅಯ್ಯರ್ 47 ರನ್ ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್ ನಲ್ಲಿ ನಾಗರ್ ಕೋಟಿಗೆ ಕ್ಯಾಚ್  ನೀಡಿದರು.  2 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ ಉತ್ತಮವಾಗಿ ಆಡುತ್ತಿದ್ದ ಪಂತ್ ಕೂಡ ಚಕ್ರವರ್ತಿ ಬೌಲಿಂಗ್ ನಲ್ಲಿ ಶುಭ್ ಮನ್ ಗಿಲ್ ಗೆ ಕ್ಯಾಚ್ ನೀಡಿದರು.

ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ್ ಹೆಟ್ಮೆಯರ್ (10) ಹಾಗೂ ರವಿಚಂದ್ರನ್ ಅಶ್ವಿನ್(14) ಹೊರತುಪಡಿಸಿದರೆ ಉಳಿದವರಾರು ಒಂದಂಕಿ ದಾಟಲಿಲ್ಲ. ಮಾರ್ಕಸ್ ಸ್ಟೋಯ್ನಿಸ್ 6, ಅಕ್ಷರ್ ಪಟೇಲ್ 9, ಕಗಿಸೋ ರಬಾಡ 9, ತುಷಾರ್ ದೇಶ್ ಪಾಂಡೆ 1 ರನ್ ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಡೆಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ 59 ರನ್ ಗಳ ಭಾರೀ ಅಂತರದಿಂದ ಸೋಲೋಪ್ಪಿಕೊಂಡಿತು.

Advertisement

ಕೋಲ್ಕತ್ತಾ ಪರ ಮಾರಕ ಬೌಲಿಂಗ್ ನಡೆಸಿದ ವರುಣ್ ಚಕ್ರವರ್ತಿ 20 ರನ್ ನೀಡಿ 5 ವಿಕೆಟ್ ಕಬಳಿಸಿದರು. ಪ್ಯಾಟ್ ಕಮಿನ್ಸ್ ಕೂಡ ಉತ್ತಮ ದಾಳಿ ಸಂಘಟಿಸಿದ್ದು 17 ರನ್ ನೀಡಿ 3 ವಿಕೆಟ್ ಪಡೆದರು. ಲಾಕಿ ಫರ್ಗ್ಯೂಸನ್ 1 ವಿಕೆಟ್ ಉರುಳಿಸಿ ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next