Advertisement

ಐಪಿಎಲ್‌: ಡೆಲ್ಲಿ ಮೇಲೆ ಕೋಲ್ಕತಾ ರೈಡ್‌

10:32 PM Sep 28, 2021 | Team Udayavani |

ಶಾರ್ಜಾ: ಪ್ರಬಲ ಡೆಲ್ಲಿಯನ್ನು ತನ್ನ ಕರಾರುವಾಕ್‌ ಬೌಲಿಂಗ್‌ ದಾಳಿಯಿಂದ ಕಟ್ಟಿಹಾಕು ವಲ್ಲಿ ಯಶಸ್ವಿಯಾದ ಕೋಲ್ಕತಾ ನೈಟ್‌ರೈಡರ್ ಐಪಿಎಲ್‌ನಲ್ಲಿ 5ನೇ ಜಯ ದಾಖಲಿಸಿದೆ. ತನ್ನ 4ನೇ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದೆ.

Advertisement

ಮಂಗಳವಾರದ ಮೊದಲ ಮುಖಾಮುಖೀ ಯಲ್ಲಿ ಮಾರ್ಗನ್‌ ಬಳಗ 3 ವಿಕೆಟ್‌ಗಳಿಂದ ಡೆಲ್ಲಿಯನ್ನು ಮಣಿಸಿತು. ಡೆಲ್ಲಿ ಗಳಿಸಿದ್ದು 9 ವಿಕೆಟಿಗೆ ಕೇವಲ 127 ರನ್‌. ಇದನ್ನು ಬೆನ್ನಟ್ಟುವ ವೇಳೆ ಆಗಾಗ ಆತಂಕದ ಕ್ಷಣವನ್ನು ಎದುರಿಸಿದ ಕೋಲ್ಕತಾ ಕೊನೆಗೂ 18.2 ಓವರ್‌ಗಳಲ್ಲಿ 7 ವಿಕೆಟಿಗೆ 130 ರನ್‌ ಬಾರಿಸಿತು.

ಚೇಸಿಂಗ್‌ ಹಾದಿಯಲ್ಲಿ ಶುಭಮನ್‌ ಗಿಲ್‌ (30), ನಿತೀಶ್‌ ರಾಣಾ (ಔಟಾಗದೆ 36), ಸುನೀಲ್‌ ನಾರಾಯಣ್‌ (21) ಬಿರುಸಿನ ಆಟವಾಡಿದರು. ವೆಂಕಟೇಶ್‌ ಅಯ್ಯರ್‌ (14) ಮತ್ತು ರಾಹುಲ್‌ ತ್ರಿಪಾಠಿ (9) ವಿಕೆಟ್‌ ಬೇಗನೆ ಉರುಳಿತು. ನಾಯಕ ಇಯಾನ್‌ ಮಾರ್ಗನ್‌ ಸೊನ್ನೆ ಸುತ್ತಿದರು.

ಡೆಲ್ಲಿ ತನ್ನ ಬೌಲರ್‌ಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳದಿದ್ದುದು ಅಚ್ಚರಿ ಮೂಡಿಸಿತು. ಸ್ಟ್ರೈಕ್‌ ಬೌಲರ್‌ ಅನ್ರಿಚ್‌ ನೋರ್ಜೆ ಮೊದಲ ಓವರ್‌ ಎಸೆದ ಬಳಿಕ ಪುನಃ ದಾಳಿಗಿಳಿದದ್ದು 17ನೇ ಓವರ್‌ನಲ್ಲಿ. ವೇಗಿ ಕಾಗಿಸೊ ರಬಾಡ ಅವರನ್ನು 6ನೇ ಬೌಲರ್‌ ರೂಪದಲ್ಲಿ ಬೌಲಿಂಗಿಗೆ ಇಳಿಸಲಾಗಿತ್ತು. ಅಕ್ಷರ್‌ ಪಟೇಲ್‌, ಆವೇಶ್‌ ಖಾನ್‌ ಅವರನ್ನೂ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಆವೇಶ್‌ 3 ಓವರ್‌ಗಳಲ್ಲಿ 13 ರನ್ನಿಗೆ 3 ವಿಕೆಟ್‌ ಕಿತ್ತು ಮಿಂಚಿದರು.

ಇದನ್ನೂ ಓದಿ:ಮತ್ತೆ ಗಡಿ ಅತಿಕ್ರಮಿಸಿದ ಚೀನಾ; ಉತ್ತರಾಖಂಡದ ಬಾರಾಹೋತಿಗೆ ಬಂದಿದ್ದ ಸೇನೆ

Advertisement

ಮಾರ್ಗನ್‌ ನಿರ್ಧಾರ ಯಶಸ್ವಿ
ಡೆಲ್ಲಿಯನ್ನು ಬ್ಯಾಟಿಂಗಿಗೆ ಇಳಿಸುವ ಇಯಾನ್‌ ಮಾರ್ಗನ್‌ ನಿರ್ಧಾರವನ್ನು ಕೆಕೆಆರ್‌ ಬೌಲರ್ ಭರ್ಜರಿಯಾಗಿ ಸಮರ್ಥಿಸಿಕೊಳ್ಳತೊಡಗಿದರು. ಸ್ಲೋ ಟ್ರ್ಯಾಕ್‌ನಲ್ಲಿ ಡೆಲ್ಲಿ ಪರದಾಡತೊಡಗಿತು. ಮೂವತ್ತರ ಗಡಿ ದಾಟಲು ಸಾಧ್ಯವಾದದ್ದು ಸ್ಟೀವನ್‌ ಸ್ಮಿತ್‌ ಮತ್ತು ರಿಷಭ್‌ ಪಂತ್‌ ಅವರಿಂದ ಮಾತ್ರ. ಇಬ್ಬರೂ ತಲಾ 39 ರನ್‌ ಹೊಡೆದರು. ಕೊನೆಗಿದು ಪಂದ್ಯದ ಗರಿಷ್ಠ ವೈಯಕ್ತಿಕ ಮೊತ್ತವೆನಿಸಿತು. ಶಿಖರ್‌ ಧವನ್‌ 24 ರನ್‌ ಮಾಡಿದರು.

ಪೃಥ್ವಿ ಶಾ ಗೈರಲ್ಲಿ ಸ್ಟೀವನ್‌ ಸ್ಮಿತ್‌ ಇನ್ನಿಂಗ್ಸ್‌ ಆರಂಭಿಸಿದರು. ಮೊದಲ ವಿಕೆಟಿಗೆ 5 ಓವರ್‌ಗಳಿಂದ 35 ರನ್‌ ಒಟ್ಟುಗೂಡಿತು. ಆದರೆ ಶ್ರೇಯಸ್‌ ಅಯ್ಯರ್‌ ಕೇವಲ ಒಂದು ರನ್‌ ಮಾಡಿ ನಿರ್ಗಮಿಸಿದರು. ಹೆಟ್‌ಮೈರ್‌ ಆಟ ನಾಲ್ಕೇ ರನ್ನಿಗೆ ಮುಗಿಯಿತು. ಲಲಿತ್‌ ಯಾದವ್‌, ಅಕ್ಷರ್‌ ಪಟೇಲ್‌ ಖಾತೆಯನ್ನೇ ತೆರೆಯಲಿಲ್ಲ.

ಕೆಕೆಆರ್‌ ಪರ ಲಾಕಿ ಫ‌ರ್ಗ್ಯುಸನ್‌, ಸುನೀಲ್‌ ನಾರಾಯಣ್‌ ಮತ್ತು ಆಲ್‌ರೌಂಡರ್‌ ಆಗುವ ಸೂಚನೆ ನೀಡಿದ ವೆಂಕಟೇಶ್‌ ಅಯ್ಯರ್‌ ತಲಾ 2 ವಿಕೆಟ್‌ ಉರುಳಿಸಿದರು.

ಸಿಕ್ಸರ್‌ ಸಿಡಿಸದ ಡೆಲ್ಲಿ
ಡೆಲ್ಲಿ ಸರದಿಯಲ್ಲಿ ಒಂದೂ ಸಿಕ್ಸರ್‌ ಸಿಡಿಯಲಿಲ್ಲ. ಐಪಿಎಲ್‌ನಲ್ಲಿ ಪೂರ್ತಿ 20 ಓವರ್‌ ಆಡಿದ ವೇಳೆ ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಸಿಕ್ಸರ್‌ ದಾಖಲಾಗದ ಕೇವಲ 2ನೇ ನಿದರ್ಶನ ಇದಾಗಿದೆ. ಎರಡೂ ದೃಷ್ಟಾಂತ ಇದೇ ಋತುವಿನಲ್ಲಿ ಕಂಡುಬಂದದ್ದು ವಿಶೇಷ. ರಾಜಸ್ಥಾನ್‌ ವಿರುದ್ಧ ಮುಂಬಯಿಯಲ್ಲಿ ಆಡಲಾದ ಪಂದ್ಯದಲ್ಲೂ ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಸಿಕ್ಸರ್‌ ಕಂಡುಬಂದಿರಲಿಲ್ಲ.

ಈ ಇನ್ನಿಂಗ್ಸ್‌ ವೇಳೆ ರಿಷಭ್‌ ಪಂತ್‌ ಡೆಲ್ಲಿ ಪರ ಸರ್ವಾಧಿಕ ರನ್‌ ಬಾರಿಸಿದ ದಾಖಲೆ ನಿರ್ಮಿಸಿದರು (2,390). ಈ ಸಂದರ್ಭದಲ್ಲಿ ವೀರೇಂದ್ರ ಸೆಹವಾಗ್‌ ದಾಖಲೆ ಪತನಗೊಂಡಿತು.

ಸ್ಕೋರ್‌ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್‌
ಸ್ಟೀವನ್‌ ಸ್ಮಿತ್‌ ಬಿ ಫ‌ರ್ಗ್ಯುಸನ್‌ 39
ಧವನ್‌ ಸಿ ವೆಂಕಟೇಶ್‌ ಬಿ ಫ‌ರ್ಗ್ಯುಸನ್‌ 24
ಶ್ರೇಯಸ್‌ ಅಯ್ಯರ್‌ ಬಿ ನಾರಾಯಣ್‌ 1
ರಿಷಭ್‌ ಪಂತ್‌ ರನೌಟ್‌ 39
ಹೆಟ್‌ಮೈರ್‌ ಸಿ ಸೌಥಿ ಬಿ ವೆಂಕಟೇಶ್‌ 4
ಲಲಿತ್‌ ಯಾದವ್‌ ಎಲ್‌ಬಿಡಬ್ಲ್ಯು ನಾರಾಯಣ್‌ 0
ಅಕ್ಷರ್‌ ಪಟೇಲ್‌ ಸಿ ಫ‌ರ್ಗ್ಯುಸನ್‌ ಬಿ ವೆಂಕಟೇಶ್‌ 0
ಆರ್‌. ಅಶ್ವಿ‌ನ್‌ ಸಿ ರಾಣಾ ಬಿ ಸೌಥಿ 9
ಕಾಗಿಸೊ ರಬಾಡ ಔಟಾಗದೆ 0
ಅವೇಶ್‌ ಖಾನ್‌ ರನೌಟ್‌ 5
ಇತರ 6
ಒಟ್ಟು(9 ವಿಕೆಟಿಗೆ) 127
ವಿಕೆಟ್‌ ಪತನ:1-35, 2-40, 3-77, 4-88, 5-89, 6-92, 7-120, 8-122, 9-127.
ಬೌಲಿಂಗ್‌; ಸಂದೀಪ್‌ ವಾರಿಯರ್‌ 2-0-15-0
ಟಿಮ್‌ ಸೌಥಿ 4-0-29-1
ಲಾಕಿ ಫ‌ರ್ಗ್ಯುಸನ್‌ 2-0-10-2
ವರುಣ್‌ ಚಕ್ರವರ್ತಿ 4-0-24-0
ಸುನೀಲ್‌ ನಾರಾಯಣ್‌ 4-0-18-2
ವೆಂಕಟೇಶ್‌ ಅಯ್ಯರ್‌ 4-0-29-2

ಕೋಲ್ಕತಾ ನೈಡ್‌ರೈಡರ್
ಶುಭಮನ್‌ ಗಿಲ್‌ ಸಿ ಶ್ರೇಯಸ್‌ ಬಿ ರಬಾಡ 30
ವಿ. ಅಯ್ಯರ್‌ ಬಿ ಲಲಿತ್‌ 14
ರಾಹುಲ್‌ ತ್ರಿಪಾಠಿ ಸಿ ಸ್ಮಿತ್‌ ಬಿ ಅವೇಶ್‌ 9
ನಿತೀಶ್‌ ರಾಣಾ ಔಟಾಗದೆ 36
ಇಯಾನ್‌ ಮಾರ್ಗನ್‌ ಸಿ ಲಲಿತ್‌ ಬಿ ಅಶ್ವಿ‌ನ್‌ 0
ದಿನೇಶ್‌ ಕಾರ್ತಿಕ್‌ ಬಿ ಅವೇಶ್‌ 12
ನಾರಾಯಣ್‌ ಸಿ ಅಕ್ಷರ್‌ ಬಿ ನೋರ್ಜೆ 21
ಟಿಮ್‌ ಸೌಥಿ ಬಿ ಅವೇಶ್‌ 3
ಲಾಕಿ ಫ‌ರ್ಗ್ಯುಸನ್‌ ಔಟಾಗದೆ 0
ಇತರ 5
ಒಟ್ಟು(18.2 ಓವರ್‌ಗಳಲ್ಲಿ 7 ವಿಕೆಟಿಗೆ) 130
ವಿಕೆಟ್‌ ಪತನ:1-28, 2-43, 3-67, 4-67, 5-96, 6-122, 7-126.
ಬೌಲಿಂಗ್‌; ಆನ್ರಿಚ್‌ ನೋರ್ಜೆ 2.2-0-15-1
ಅಕ್ಷರ್‌ ಪಟೇಲ್‌ 3-0-13-0
ಆರ್‌. ಅಶ್ವಿ‌ನ್‌ 4-0-24-1
ಲಲಿತ್‌ ಯಾದವ್‌ 3-0-35-1
ಅವೇಶ್‌ ಖಾನ್‌ 3-0-13-3
ಕಾಗಿಸೊ ರಬಾಡ 3-1-28-1
ಪಂದ್ಯಶ್ರೇಷ್ಠ: ಸುನೀಲ್‌ ನಾರಾಯಣ್‌

Advertisement

Udayavani is now on Telegram. Click here to join our channel and stay updated with the latest news.

Next