Advertisement

IPL; ರೋಚಕ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ 4 ರನ್ ಜಯ ಸಾಧಿಸಿದ ಕೆಕೆಆರ್

11:29 PM Mar 23, 2024 | Team Udayavani |

ಕೋಲ್ಕತಾ : ಈಡನ್ ಗಾರ್ಡನ್ಸ್ ನಲ್ಲಿ ಶನಿವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 4 ರನ್ ಗಳ ರೋಚಕ ಜಯ ಸಾಧಿಸಿದೆ.

Advertisement

ಸನ್ ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ 7 ವಿಕೆಟ್ ನಷ್ಟಕ್ಕೆ 208 ರನ್ ಕಲೆ ಹಾಕಿತ್ತು. ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ 54 ರನ್ ಗಳಿಸಿದರೆ ಉಳಿದ ಆಟಗಾರರು ರನ್ ಗಳಿಸಲು ವಿಫಲರಾದರು. ಆ ಬಳಿಕ ರಮಣದೀಪ್ ಸಿಂಗ್ 17 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ರಿಂಕು ಸಿಂಗ್ 23(15 ಎಸೆತ) ರನ್ ಗಳಿಸಿ ಔಟಾದರು. ಆ ಬಳಿಕ ಅಬ್ಬರಿಸಿದ ರಸೆಲ್ 25 ಎಸೆತಗಳಲ್ಲಿ 64 ರನ್ ಗಳಿಸಿ ಔಟಾಗದೆ ಉಳಿದರು.

ಗುರಿ ಬೆನ್ನಟ್ಟಿದ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಹರ್ಷಿತ್ ರಾಣಾ ಎಸೆದ ಕೊನೆಯ ಓವರ್ ನಲ್ಲಿ 13 ರನ್ ಅಗತ್ಯವಿತ್ತು. ಕೊನೆಯ ಎಸೆತದಲ್ಲಿ 5 ರನ್ ಅಗತ್ಯವಿತ್ತು. ಆದರೆ ಗೆಲುವು ಕಾಣಲು ಸನ್ ರೈಸರ್ಸ್ ಗೆ ಸಾಧ್ಯವಾಗಲಿಲ್ಲ. ಹೆನ್ರಿಕ್ ಕ್ಲಾಸೆನ್ ಕೊನೆಯ ಎಸೆತ ಬಾಕಿ ಇರುವಾಗ ಕ್ಯಾಚಿತ್ತು ನಿರ್ಗಮಿಸಿದರು.ಅವರು 29 ಎಸೆತದಲ್ಲಿ 63 ರನ್ ಗಳಿಸಿದ್ದರು. ಬರೋಬ್ಬರಿ 8 ಸಿಕ್ಸರ್ ಸಿಡಿಸಿದ್ದರು.
ಅಭಿಷೇಕ್ ಶರ್ಮ 32 ಮತ್ತು ಮಯಾಂಕ್ ಅಗರ್ವಾಲ್ 32 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದ್ದರು. ರಾಹುಲ್ ತ್ರಿಪಾಠಿ 20, ಐಡೆನ್ ಮಾರ್ಕ್ರಾಮ್ 18 ರನ್ ಗಳಿಸಿ ಔಟಾದರು. ಕೆಕೆಆರ್ ನ ಹರ್ಷಿತ್ ರಾಣಾ 33 ಕ್ಕೆ 3 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next