Advertisement
ಕೆಕೆಆರ್ ಪ್ರಾಬಲ್ಯ ಮೆರೆದು 12 ನೇ ಪಂದ್ಯದಲ್ಲಿ 9 ನೇ ಜಯ ತನ್ನದಾಗಿಸಿಕೊಂಡಿತು. ಈಗಾಗಲೇ ಹೊರ ಬಿದ್ದಿರುವ ಮುಂಬೈ ಹೋರಾಟ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ.
Related Articles
Advertisement
ಕೆಕೆಆರ್ ಪರ ವೆಂಕಟೇಶ್ ಅಯ್ಯರ್ 42, ನಿತೀಶ್ ರಾಣಾ 33, ಆ್ಯಂಡ್ರೆ ರಸೆಲ್ 24 ರನ್ ಮಾಡಿದರು. ಫಿಲಿಪ್ ಸಾಲ್ಟ್ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿದರೂ 5ನೇ ಎಸೆತದಲ್ಲಿ ಪೆವಿಲಿಯನ್ ಸೇರಿಕೊಂಡರು. ಮತ್ತೋರ್ವ ಬಿಗ್ ಹಿಟ್ಟರ್ ಸುನೀಲ್ ನಾರಾಯಣ್ ಅವರದು ಗೋಲ್ಡನ್ ಡಕ್ ಸಂಕಟ; ಬುಮ್ರಾ ಎಸೆತದಲ್ಲಿ ಕ್ಲೀನ್‌ಬೌಲ್ಡ್. ಇದು ಐಪಿಎಲ್‌ನಲ್ಲಿ ಸುನೀಲ್ ನಾರಾಯಣ್ ಸುತ್ತಿದ 16ನೇ ಸೊನ್ನೆ. ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ರೋಹಿತ್ ಶರ್ಮ 17 ಸೊನ್ನೆಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ 44 ಸಲ ಸೊನ್ನೆಗೆ ಔಟಾದ ದಾಖಲೆ ಸುನೀಲ್ ನಾರಾಯಣ್ ಹೆಸರಿಗೆ ಬರೆಯಲ್ಪಟ್ಟಿತು. ಅಲೆಕ್ಸ್ ಹೇಲ್ಸ್ 2ನೇ ಸ್ಥಾನಕ್ಕೆ ಇಳಿದರು (43).
ನಾಯಕ ಶ್ರೇಯಸ್ ಅಯ್ಯರ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 7 ರನ್ ಮಾಡಿ ಅಂಶುಲ್ ಎಸೆತದಲ್ಲಿ ಬೌಲ್ಡ್ ಆದರು. ಆದರೆ ಒನ್‌ಡೌನ್‌ನಲ್ಲಿ ಆಡಲಿಳಿದ ವೆಂಕಟೇಶ್ ಅಯ್ಯರ್ ಮುಂಬೈ ದಾಳಿಯನ್ನು ತಡೆದು ನಿಂತು ಆಕ್ರಮಣಕಾರಿ ಆಟವಾಡಿದರು. ಇವರ ಗಳಿಕೆ 21 ಎಸೆತಗಳಿಂದ 42 ರನ್ (6 ಬೌಂಡರಿ, 2 ಸಿಕ್ಸರ್). ಪೀಯೂಷ್ ಚಾವ್ಲಾ ತಮ್ಮ ಮೊದಲ ಎಸೆತದಲ್ಲೇ ವೆಂಕಟೇಶ್ ಅಯ್ಯರ್ ವಿಕೆಟ್ ಹಾರಿಸಿದರು.ನಿತೀಶ್ ರಾಣಾ 23 ಎಸೆತಗಳಿಂದ 33 ರನ್ ಕೊಡುಗೆ ಸಲ್ಲಿಸಿದರು (4 ಬೌಂಡರಿ, 1 ಸಿಕ್ಸರ್). ಅಂತಿಮವಾಗಿ ರನೌಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು. ಮುಂಬೈ ಬೌಲಿಂಗ್ ಜತೆಗೆ ಫೀಲ್ಡಿಂಗ್‌ನಲ್ಲೂ ಮಿಂಚಿತು.