Advertisement
ಕೂಟದ ಮಧ್ಯದಲ್ಲಿಯೇ ಗಂಭೀರ್ ನಾಯಕತ್ವ ತೊರೆದಿರುವುದು ಡೆಲ್ಲಿಗೆ ದೊಡ್ಡ ಹೊಡೆತವಾಗಿದೆ. ಇದರಿಂದ ಡೆಲ್ಲಿ ತಂಡ ಚೇತರಿಸಿಕೊಳ್ಳಲು ತಂಡ ವ್ಯವಸ್ಥಾಪಕರು ಹೊಸ ಯೋಚನೆ, ಯೋಜನೆಗಳನ್ನು ರೂಪಿಸಬೇಕಾಗಿದೆ. ಶ್ರೇಯಸ್ ನಾಯಕತ್ವದಲ್ಲಿ ತಂಡ ತಿರುಗೇಟು ನೀಡಿದರೆ ತನ್ನ ಅಭಿಯಾನಕ್ಕೆ ಜೀವ ನೀಡಬಹುದು.
Related Articles
Advertisement
ಮ್ಯಾಕ್ಸ್‌ವೆಲ್ ವೈಫಲ್ಯವಿದೇಶಿ ಆಟಗಾರರಾದ ಜಾಸನ್ ರಾಯ್ ಮತ್ತು ಕ್ರಿಸ್ ಮಾರಿಸ್ ಗಾಯದಿಂದ ಬಳಲುತ್ತಿದ್ದರೆ ಮ್ಯಾಕ್ಸ್‌ವೆಲ್ ಸಿಡಿಯದಿರುವುದು ಡೆಲ್ಲಿಯ ವೈಫಲ್ಯಕ್ಕೆ ಕಾರಣವಾಗಿದೆ. ಇಷ್ಟರವರೆಗಿನ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ 17, 13, 57, 4 ಮತ್ತು 12 ರನ್ ಗಳಿಸಿದ್ದರು. ಬೌಲಿಂಗ್‌ದಲ್ಲಿ ಒದ್ದಾಟ
ಕೆಕೆಆರ್ ಕೂಡ ಬೌಲಿಂಗ್‌ನಲ್ಲಿ ಒದ್ದಾಡುತ್ತಿದೆ. ಆದರೆ ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡುತ್ತಿದೆ. ಆಟಗಾರರ ಉತ್ತಮ ನಿರ್ವಹಣೆಯಿಂದ ಕೆಕೆಆರ್ ಎರಡು ಬಾರಿ 200ರ ಮೊತ್ತ ಪೇರಿಸಿತ್ತು. ಕೆಕೆಆರ್ ಆಡಿದ ಆರು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿ ನಾಲ್ಕನೇ ಸ್ಥಾನದಲ್ಲಿದೆ. ಈ ಹಿಂದೆ ಈ ಎರಡು ತಂಡಗಳು ಪರಸ್ಪರ ಮುಖಾಮುಖೀಯಾದಾಗ ಕೆಕೆಆರ್ 200 ರನ್ ಪೇರಿಸಿತ್ತು ಮತ್ತು 71 ರನ್ನುಗಳಿಂದ ಜಯಭೇರಿ ಬಾರಿಸಿತ್ತು.