Advertisement

ಮುನಿದ ನಾರಾಯಣ: ಆರ್‌ಸಿಬಿಗೆ ಸೋಲು; 4 ವಿಕೆಟ್‌ನಿಂದ ಗೆದ್ದ ಕೆಕೆಆರ್‌

07:00 AM Apr 10, 2018 | Team Udayavani |

ಕೋಲ್ಕತಾ: ಪ್ರಸಕ್ತ ಋತುವಿನ ತನ್ನ ಮೊದಲ ಐಪಿಎಲ್‌ ಪಂದ್ಯದಲ್ಲಿ ರಾಯಲ್ಸ್‌ ಚಾಲೆಂಜರ್ ಬೆಂಗಳೂರು ತಂಡ 4 ವಿಕೆಟ್‌ಗಳಿಂದ ಕೋಲ್ಕತಾ ನೈಟ್‌ ರೈಡರ್ ತಂಡದ ವಿರುದ್ಧ ಸೋಲು ಅನುಭವಿಸಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಬ್ರೆಂಡನ್‌ ಮೆಕಲಂ (43 ರನ್‌), ಎಬಡಿ ವಿಲಿಯರ್ (44 ರನ್‌) ಹಾಗೂ ವಿರಾಟ್‌ ಕೊಹ್ಲಿ (31 ರನ್‌) ನೆರವಿನಿಂದ 20 ಓವರ್‌ಗೆ 7 ವಿಕೆಟ್‌ ಗೆ 176 ರನ್‌ಗಳಿಸಿತು. 

ಈ ಗುರಿ ಬೆನ್ನಟ್ಟಿದ ಕೋಲ್ಕತಾ ನೈಟ್‌ ರೈಡರ್ ಸ್ಪಿನ್ನರ್‌ ಸುನೀಲ್‌ ನಾರಾಯಣ್‌ (50 ರನ್‌, 19 ಎಸೆತ), ದಿನೇಶ್‌ ಕಾರ್ತಿಕ್‌ (ಅಜೇಯ 35 ರನ್‌) ನೆರವಿನಿಂದ 18.5 ಓವರ್‌ಗಳಲ್ಲಿ 6 ವಿಕೆಟ್‌ಗೆ 177 ರನ್‌ಗಳಿಸಿ ಗೆಲುವುಗಳಿಸಿತು. ಸ್ಪಿನ್ನರ್‌ಗಳು ಕೈಕೊಟ್ಟಿದ್ದು ಕೊಹ್ಲಿ ಪಡೆಗೆ ದುಭಾರಿಯಾಯಿತು.

ಮೆಕಲಂ ಅಬ್ಬರ: ಇದಕ್ಕೂ ಮೊದಲು ಭಾನುವಾರ ರಾತ್ರಿ ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ ನಲ್ಲಿ ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್‌ಸಿಬಿಗೆ ಈ ಬಾರಿ ಕ್ರಿಸ್‌ ಗೇಲ್‌ ನೆರವು ಇರಲಿಲ್ಲ. ಆದರೆ ಬ್ರೆಂಡನ್‌ ಮೆಕಲಂ-ಕ್ವಿಂಟನ್‌ ಡಿ ಕಾಕ್‌ ರೂಪದಲ್ಲಿ ಸಿಡಿಲಬ್ಬರದ ಆರಂಭಿಕ ಜೋಡಿ ಹೋರಾಟಕ್ಕೆ ಅಣಿಯಾಗಿತ್ತು. ಇವರಲ್ಲಿ ಡಿ ಕಾಕ್‌ (4 ರನ್‌) ಅಗ್ಗಕ್ಕೆ ಔಟಾದರು. ಮೆಕಲಂ ಎಂದಿನ ಅಬ್ಬರ ಆಟ ಪ್ರದರ್ಶಿಸಿ 27 ಎಸೆತಗಳಿಂದ 43 ರನ್‌ ಸಿಡಿಸಿ ದರು (27 ಎಸೆತ, 6 ಬೌಂಡರಿ, 2 ಸಿಕ್ಸರ್‌).

ಕೊಹ್ಲಿ ನಿಧಾನಗತಿ ಬ್ಯಾಟಿಂಗ್‌: ನಾಯಕ ವಿರಾಟ್‌ ಕೊಹ್ಲಿ ಆಟ ನಿಧಾನ ಗತಿಯಿಂದ ಕೂಡಿತ್ತು. 31 ರನ್ನಿಗಾಗಿ ಅವರು 33 ಎಸೆತ ತೆಗೆದುಕೊಂಡರು (1 ಬೌಂಡರಿ, 1 ಸಿಕ್ಸರ್‌). 44 ರನ್‌ ಹೊಡೆದ ಎಬಿ ಡಿ ವಿಲಿಯರ್ ಆರ್‌ಸಿಬಿ ಸರದಿಯ ಸರ್ವಾಧಿಕ ಸ್ಕೋರರ್‌. ಎಬಿಡಿ 5 ಸಿಕ್ಸರ್‌ ಹಾಗೂ ಒಂದು ಬೌಂಡರಿ ಬಾರಿಸಿ ಅಬ್ಬರಿಸಿದರು. 6ನೇ ಕ್ರಮಾಂಕದಲ್ಲಿ ಬಂದ ಮನ್‌ದೀಪ್‌ ಸಿಂಗ್‌ ಕೂಡ ಬಿರುಸಿನ ಆಟಕ್ಕಿಳಿದರು. ಮನ್‌ದೀಪ್‌ ಗಳಿಕೆ 37 ರನ್‌.18 ಎಸೆತಗಳ ಈ ಆಕರ್ಷಕ ಇನಿಂಗ್ಸ್‌ ನಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು.

Advertisement

ಸಂಕ್ಷಿಪ್ತ ಸ್ಕೋರ್‌: ಆರ್‌ಸಿಬಿ 20 ಓವರ್‌ಗೆ 176/7 ( ಬ್ರೆಂಡನ್‌ ಮೆಕಲಂ 43, ಎಬಡಿ ವಿಲಿಯರ್ 44, ರಾಣಾ 11ಕ್ಕೆ2), ಕೆಕೆಆರ್‌ 18.5 ಓವರ್‌ ಗೆ 177/6 ( ಸುನೀಲ್‌ ನಾರಾಯಣ್‌ 50, ದಿನೇಶ್‌ ಕಾರ್ತಿಕ್‌ ಅಜೇಯ 35, ವೋಕ್ಸ್‌ 36ಕ್ಕೆ3)

Advertisement

Udayavani is now on Telegram. Click here to join our channel and stay updated with the latest news.

Next