Advertisement

ಧರಣಿ ಹಿಂಪಡೆದ ಅನ್ನದಾತರು

04:12 PM Mar 18, 2020 | Naveen |

ಕೊಲ್ಹಾರ: ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಬೇಕು ಮತ್ತು ಕೂಡಗಿ ಬಳಿಯ ಬಾಕ್ಸ್‌ ಪುಸ್ಸಿಂಗ್‌ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಕಳೆದ ಆರು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮಂಗಳವಾರ ತಾತ್ಕಾಲಿಕ ಹಿಂಪಡೆಯಲಾಗಿದೆ.

Advertisement

ತಾಲೂಕಿನ ಕೂಡಗಿ ಗ್ರಾಮದ ರೈಲ್ವೆ ಸ್ಟೇಷನ್‌ ಹತ್ತಿರ ಮುಳವಾಡ ಆಲಮಟ್ಟಿ ರಸ್ತೆ ಪಕ್ಕದಲ್ಲಿ ಧರಣಿ ಕುಳಿತಿದ್ದ ಸ್ಥಳಕ್ಕೆ ರೈಲ್ವೆ ಇಲಾಖೆ ಜನರಲ್‌ ಮ್ಯಾನೇಜರ್‌ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ಕೊಟ್ಟು ರೈತರೊಂದಿಗೆ ಚಚರ್ಚಿಸಿದರು.

ನಿಮ್ಮ ಬೇಡಿಕೆಗಳಾದ ಬಾಕ್ಸ್‌ ಪುಸ್ಸಿಂಗ್‌ ಕಾಮಗಾರಿಗೆ ಅಡಚಣೆಯಾಗಿರುವ ಒಂದು ರೈಲ್ವೆ ಹಳಿಯನ್ನು ಸಸ್ಪೆಂಡ್‌ ಮಾಡಲು ಕ್ರಮ ಕೈಗೊಳ್ಳಲಾಗಿದ್ದು ಅದರ ಪ್ರಕಾರ ಆದಷ್ಟು ಶೀಘ್ರದಲ್ಲಿ ಬಾಕ್ಸ್‌ ಪುಸ್ಸಿಂಗ್‌ ಕಾಮಗಾರಿ ಪೂರ್ಣಗೊಳಿಸಲಾಗುವದು ಎಂದು ಅಧಿಕಾರಿಗಳು ಭರವಸೆ ಕೊಟ್ಟರು.

ಕೊರೊನಾ ವೈರಸ್‌ ಹರಡುತ್ತಿರುವುದರಿಂದ ರಾಜ್ಯದಲ್ಲಿ ಜಾರಿ ಇರುವ ಆರೋಗ್ಯ ಎಮರ್ಜೆನ್ಸಿ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಬಾರದು ಎಂದು ಅಧಿಕಾರಿಗಳು ಎಲ್ಲ ರೈತರಿಗೆ ತಿಳಿ ಹೇಳಿದ ನಂತರ ತಾತ್ಕಾಲಿಕವಾಗಿ ಅಹೋರಾತ್ರಿ ಧರಣಿ ಹಿಂಪಡೆಯಲಾಗಿದೆ. ಅವರು ಹೇಳಿದ ಪ್ರಕಾರ ನಡೆದುಕೊಳ್ಳದಿದ್ದರೆ ಮುಂದಿನ ದಿನಮಾನಗಳಲ್ಲಿ ಮತ್ತೂಮ್ಮೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಅಂಥ ಪರಿಸ್ಥಿತಿಗೆ ಅ ಧಿಕಾರಿಗಳು ಅವಕಾಶ ಕೊಡದೇ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿಕೊಡಬೇಕೆಂದು ಒಕ್ಕೊರಲಿನಿಂದ ರೈತರು ಅಧಿ ಕಾರಿಗಳಿಗೆ ವಿನಂತಿಸಿದರು.

ಬಸವನಬಾಗೇವಾಡಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ನಾವು ಕೂಡ ಧರಣಿಯನ್ನು ಹಿಂಪಡೆಯಲು ರೈತರಿಗೆ ಮನವರಿಕೆ ಮಾಡಿದ್ದೇವೆ. ಆದಷ್ಟು ಬೇಗ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕು. ಇಲ್ಲದಿದ್ದರೆ ನಾಡಿನ ಎಲ್ಲ ಮಠಾಧೀಶರನ್ನು ಕರೆದುಕೊಂಡು ಬಂದು ರೈತರೊಂದಿಗೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಜಿಲ್ಲಾ ಹೆಚ್ಚುವರಿ ಎಸ್‌ಪಿ ರಾಮ್‌ ಅರಸಿದ್ದಿ, ರೈಲ್ವೆ ಇಲಾಖೆಯ ಲಲನಕುಮಾರ, ಡಿವೈಎಸ್‌ಪಿ ಈ.ಶಾಂತವೀರ, ಕಂದಾಯ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಧರಣಿ ಸ್ಥಳಕ್ಕೆ ಆಗಮಿಸಿದ್ದರು.

ಧರಣಿಯಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ, ಬಿ.ಎಲ್‌. ಪಾಟೀಲ, ಕೃಷ್ಣಾ ಭೋಸಲೆ, ಸಿದ್ರಾಮ ಅಂಗಡಗೇರಿ, ಸದಾಶಿವ ಬರಟಗಿ, ಪಾಂಡು ಹ್ಯಾಟಿ, ಕೃಷ್ಣಪ್ಪ ಭೂಮರಡ್ಡಿ, ವಿಠ್ಠಲ  ಬಿರಾದಾರ, ಗಿರಿಯಪ್ಪಸ ಸಾಹುಕಾರ, ರಾಯಪ್ಪ ಚಲವಾದಿ, ಸುರೇಶ ಅವಧಿ, ಹೊನಕೇರೆಪ್ಪ ತೆಲಗಿ, ಕಲ್ಲಪ್ಪ ಮಟ್ಯಾಳ, ಶಿವಪ್ಪ ಮುರನಾಳ, ಸೋಮನಿಂಗ ಹಡಪದ, ಗುರಪ್ಪ ನಾಗೋಡ, ಸಾಹೇಬಗೌಡ ಬಿರಾದಾರ, ಹೊನ್ನಪ್ಪ ತೋಟದ, ಗಣೇಶ ರಾಠೊಡ, ಎಚ್‌ .ಜಿ.ಮಕಾನದಾರ, ಖಾಜೇಸಾಬ ಕೊಲ್ಹಾರ, ವಿಠೊಭಾ ಸಾಳುಂಕೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next