Advertisement
ಸೆ.17ರ ಸಂಜೆ 4 ಗಂಟೆಗೆ ಕಲಬುರಗಿ ನಗರದ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಂಪುಟ ಸಭೆ ನಿಗದಿಗೊಳಿಸಲಾಗಿದೆ.
Related Articles
Advertisement
ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ 2ನೇ ಸಂಪುಟ ಸಭೆ ಇದಾಗಲಿದೆ. 2010ರಲ್ಲಿ ಖಮರುಲ್ ಇಸ್ಲಾಂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಯಡಿಯೂರಪ್ಪ ನೇತೃತ್ವದಲ್ಲಿ ಸತತವಾಗಿ 2008ರ ಸೆ.26, 2009ರ ಆ.27 ಹಾಗೂ 2010ರ ಅ.10ರಂದು ಕಲಬುರಗಿಯಲ್ಲಿ ಸಂಪುಟದ ಸಭೆಗಳು ನಡೆದಿವೆ.
ಇದಕ್ಕೂ ಮುಂಚೆ 1982ರಲ್ಲಿ ಗುಂಡೂರಾವ್ ಸಿಎಂ ಆಗಿದ್ದಾಗ ಕಲಬುರಗಿಯಲ್ಲಿ, ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ 2012ರ ಅ.18ರಂದು ಸಂಪುಟ ಸಭೆ ನಡೆದಿವೆ.
ಹಿಂದಿನ ಸಂಪುಟ ಸಭೆಗಳ ಮೇಲೆ ಒಂದು ನೋಟ: ಈ ಹಿಂದೆ ನಡೆದ ಸಚಿವ ಸಂಪುಟ ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳಲ್ಲಿ ಶೇ.50ರಷ್ಟು ಮಾತ್ರ ಅನುಷ್ಠಾನಗೊಂಡಿವೆ. ಯಾದಗಿರಿ ಜಿಲ್ಲಾ ಘೋಷಣೆ, ರಾಯಚೂರಲ್ಲಿ ಕೃಷಿ ವಿವಿ ಸ್ಥಾಪನೆ, ಹುಬ್ಬಳ್ಳಿ- ಧಾರವಾಡದಲ್ಲಿ ಕಾನೂನು ವಿವಿ ಸ್ಥಾಪನೆ, ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ ಸ್ಥಾಪನೆ, ಮರ್ತೂರಿನಲ್ಲಿ ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆ, ಸರ್ಕಾರದ ವತಿಯಿಂದಲೇ ವಾಲ್ಮೀಕಿ ಜಯಂತಿ ಆಚರಣೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂ ಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು.
–ಹಣಮಂತರಾವ ಭೈರಾಮಡಗಿ