Advertisement

Kiran Raj; ಕೋಲೆ ಕೋಲೆ ಎಂದ ರಾನಿ

05:51 PM Mar 14, 2024 | Team Udayavani |

ಕಿರಣ್‌ ರಾಜ್‌ ನಟನೆಯ “ರಾನಿ’ ಚಿತ್ರದ ಹಾಡೊಂದು ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದ್ದು, ಚಿತ್ರತಂಡದ ಮೊಗದಲ್ಲಿ ನಗು ಮೂಡಿಸಿದೆ. ಮಹಾಶಿವರಾತ್ರಿಯ ದಿನದಂದು ರಾನಿ ಚಿತ್ರದ “ಕೋಲೆ ಕೋಲೆ…’ ಎನ್ನುವ ಜಾನಪದ ಶೈಲಿಯ ಮಾಸ್‌ ಹಾಡು ಟಿ ಸಿರೀಸ್‌ ಯೂಟ್ಯೂಬ್‌ ಚಾನಲ್‌ ಮೂಲಕ ಬಿಡುಗಡೆಯಾಗಿ ಪಡ್ಡೆ ಹುಡುಗರ ಮನಸ್ಸು ಗೆದ್ದಿದೆ. ಈಗಾಗಲೇ ಒಂದು ಮಿಲಿಯನ್‌ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ.

Advertisement

ಪ್ರಾರಂಭದಿಂದಲೂ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ ರಾನಿ ತಂಡ ಈ ಬಾರಿ ಶಿವರಾತ್ರಿ ಹಬ್ಬದ ಪ್ರಯುಕ್ತ ಚಿತ್ರದ ನಾಯಕ ನಟ ಕಿರಣ್‌ ರಾಜ್‌ ಪ್ರಪಂಚದಲ್ಲಿ ಅತೀ ಎತ್ತರದಲ್ಲಿರುವ ಶಿವನ ಮಂದಿರ ಉತ್ತರಕಾಂಡದ ತುಂಗ್‌ ನಾಥ್‌ ದೇವಸ್ಥಾನಕ್ಕೆ ಹೋಗಿ ಅಭಿಮಾನಿಗಳಿಗೆ ಶುಭಕೋರಿದ್ದರು.

“ನಾನು ನಿರ್ದೇಶಕರ ನಟನಾಗಬೇಕು , ನಿರ್ದೇಶಕ ಬರೆಯುವ ಪಾತ್ರಕ್ಕೆ ನ್ಯಾಯ ಕೊಡುವುದು ಪ್ರತಿಯೊಬ್ಬ ನಟನ ಕರ್ತವ್ಯ. ಆ ಕಾರಣದಿಂದ ನಾನು ಸದಾ ಕಲಿಯುತ್ತಿರುತ್ತೆನೆ. ರಾನಿ ಒಂದು ಕ್ಲಾಸಿಕ್‌ ಸಿನಿಮಾ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next