Advertisement

Bharjari Gandu: ಭರ್ಜರಿ ಮೇಲೆ ಭರವಸೆಯ ಕಿರಣ

03:11 PM Apr 03, 2024 | Team Udayavani |

ಕಿರುತೆರೆ ಲೋಕದಲ್ಲಿ ತಮ್ಮದೇ ಅದ ಛಾಪು ಮೂಡಿಸಿರುವ ಕಿರಣ್‌ ರಾಜ್‌ ನಾಯಕನಾಗಿ ನಟಿಸಿರುವ ‘ಭರ್ಜರಿ ಗಂಡು’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Advertisement

ಪ್ರಸಿದ್ಧ್ ಸಿನಿಮಾಸ್‌, ಮದನ್‌ ಗೌಡ ಹಾಗೂ ಅನಿಲ್‌ ಕುರ್ಮಾ ನಿರ್ಮಿಸಿರುವ ಈ ಚಿತ್ರವನ್ನು ಪ್ರಸಿದ್ಧ್ ನಿರ್ದೇಶಿಸಿದ್ದಾರೆ.

ಗುಮ್ಮಿನೇನಿ ವಿಜಯ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಟ್ಟಿ ಕೌಶಿಕ್‌ ಛಾಯಾಗ್ರಹಣ ಹಾಗೂ ವೆಂಕಿ ಯುಡಿವಿ ಸಂಕಲನವಿರುವ ಈ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ.

“ಚಾಕಲೇಟ್‌ ಬಾಯ್‌ ಆಗಿದ್ದ ಕಿರಣ್‌ ರಾಜ್, ಈ ಚಿತ್ರದ ಮೂಲಕ ಆಕ್ಷನ್‌ ಹೀರೋ ಆಗುವುದಂತು ಖಚಿತ. ಅಷ್ಟು ಅದ್ಭುತವಾಗಿ ಸಾಹಸವನ್ನು ಮಾಡಿದ್ದಾರೆ. ಭರ್ಜರಿ ಗಂಡು ಗ್ರಾಮೀಣ ಸೊಗಡಿನ ಕಥೆ. ಬರೀ ಪ್ರೀತಿಗಷ್ಟೇ ಸೀಮಿತವಾಗದ ನಾಯಕ, ತನ್ನ ಊರಿಗೆ ಹಾಗೂ ಊರ ಜನರಿಗೆ ಏನೆಲ್ಲಾ ಮಾಡುತ್ತಾನೆ ಎಂಬುದೆ ಕಥಾಹಂದರ. ಏಪ್ರಿಲ್‌ 5 ಚಿತ್ರ ಬಿಡುಗಡೆಯಾಗುತ್ತಿದೆ’ ಎನ್ನುವುದು ನಿರ್ದೇಶಕರ ಮಾತು.

ಕಿರಣ್‌ ರಾಜ್‌ ಅವರಿಗೆ ನಾಯಕಿಯಾಗಿ ಯಶಾ ಶಿವಕುಮಾರ್‌ ಇದ್ದಾರೆ. ರಮೇಶ್‌ ಭಟ್‌ , ರಾಕೇಶ್‌ ರಾಜ್, ಸುರೇಖ, ವೀಣಾ ಸುಂದರ್‌, ಜಯಶ್ರೀ, ನಾಗೇಶ್‌ ರೋಹಿತ್‌, ಸೌರಭ್‌ ಕುಲಕರ್ಣಿ, ಮಡೆನೂರು ಮನು, ಗೋವಿಂದೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next