ಕೋಲಾರ: ಕೋವಿಡ್, ಲಾಕ್‌ಡೌನ್ ಹಿನ್ನೆಲೆಯಲ್ಲಿಕಳೆದೆರಡು ತಿಂಗಳಿಂದ ಬ್ಯಾಂಕ್ ನಿಷ್ಕ್ರಿಯವಾಗಿತ್ತು.ಇನ್ನಾದರೂ ಬದ್ಧತೆಯಿಂದ ಕೆಲಸ ಮಾಡಿ ಬ್ಯಾಂಕ್‌ಉಳಿಸಿ, ಇಲ್ಲ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ ಬ್ಯಾಂಕ್ ಅಧಿಕಾರಿ, ಸಿಬ್ಬಂದಿಗೆತಾಕೀತು ಮಾಡಿದರು.
ಉಭಯ ಜಿಲ್ಲೆಯ ಎಲ್ಲಾ ಶಾಖೆಗಳ ಬ್ಯಾಂಕ್‌ಸಿಬ್ಬಂದಿಯೊಂದಿಗೆ ನಡೆದ ಆನ್‌ಲೈನ್ ಸಭೆಯಲ್ಲಿಮಾತನಾಡಿ, ಏಪ್ರಿಲ್‌ನಿಂದ ಕೋವಿಡ್ ಕಾಡುತ್ತಿದೆ.ಬ್ಯಾಂಕ್ ಸಿಬ್ಬಂದಿಗೂ ಕಷ್ಟ ತಂದೊಡ್ಡಿದೆ. ಆದರೆ, ಈಗಎಲ್ಲವೂ ತಿಳಿಯಾಗುತ್ತಿದೆ. ಬ್ಯಾಂಕಿನ ಕೆಲಸಗಳ ಕಡೆಗಮನಹರಿಸಿ ಎಂದು ಸೂಚಿಸಿದರು.ಬ್ಯಾಂಕ್ ಉಳಿಸಲೇಬೇಕಾದ ಜವಾಬ್ದಾರಿ ಇದೆ.ಇಷ್ಟು ದಿನ ರಜೆ ಅನುಭವಿಸಿದ್ದು ಸಾಕು, ಇನ್ನು ರಜೆದಿನಗಳಲ್ಲೂ ಬ್ಯಾಂಕ್ ಕೆಲಸ ಮಾಡಿ, ನಿಮಗೆನೀಡಿರುವ ಗುರಿ ಸಾಧಿಸಬೇಕು, ತಪ್ಪಿದಲ್ಲಿ ವರ್ಗಾವಣೆಶಿಕ್ಷೆ ಖಚಿತ ಎಂದು ಎಚ್ಚರಿಸಿದರು.
10 ಕೋಟಿ ರೂ. ಠೇವಣಿ ಸಂಗ್ರಹ ಗುರಿ: ಅವಿಭಜಿತಜಿಲ್ಲೆಯ ಎಲ್ಲಾ ಶಾಖೆಗಳಿಗೂ ತಲಾ 10 ಕೋಟಿ ರೂ.ಠೇವಣಿ ಸಂಗ್ರಹದ ಗುರಿ ನೀಡಿದ ಅವರು, ಬ್ಯಾಂಕನ್ನುಸಂಕಷ್ಟದಿಂದ ಪಾರು ಮಾಡಲು ಠೇವಣಿ ಸಂಗ್ರಹಕ್ಕೆಒತ್ತು ನೀಡಿ, ಜುಲೈ ಅಂತ್ಯದೊಳಗೆ ಪ್ರತಿ ಶಾಖೆಯಿಂದ10 ಕೋಟಿ ರೂ. ಠೇವಣಿ ಸಂಗ್ರಹಿಸಬೇಕು ಎಂದುಸೂಚಿಸಿದರು.ಆಡಿಟ್ ಮುಗಿಸಿ: ಜೂ.18 ರಂದು ಲೆಕ್ಕಪರಿಶೋಧಕರು ಬರಲಿದ್ದಾರೆ. ಎಲ್ಲಾ ಶಾಖೆ, ಸೊಸೈಟಿಗಳಆಡಿಟ್ ಮುಗಿಸಿರಬೇಕು, ಯಾವುದೇ ಗೊಂದಲಗಳಿದ್ದರೆ ಕೂಡಲೇ ಬ್ಯಾಂಕಿನ ಅಧಿಕಾರಿಗಳಾದ ನಾಗೇಶ್,ಶಿವಕುಮಾರ್, ಖಲೀಮುಲ್ಲಾ, ಅರುಣ್ ಅವರ ಜತೆಮಾತನಾಡಿ ಪರಿಹರಿಸಿಕೊಳ್ಳಿ ಎಂದು ಸೂಚಿಸಿದರು.
ಎತ್ತಂಗಡಿ ಅನಿವಾರ್ಯ: ಸಾಲ ವಸೂಲಿಗೆ ಆದ್ಯತೆನೀಡಿ, ದಾಖಲೆಗಳ ಸಮರ್ಪಕ ನಿರ್ವಹಣೆ ಮಾಡಿಎಂದ ಅವರು, ಸರಿಯಾಗಿ ಕೆಲಸ ಮಾಡಿ ಇಲ್ಲವೇಕೆಲಸ ಬಿಡಿ ಎಂದು ಎಚ್ಚರಿಕೆ ನೀಡಿ, ಆಡಿಟರ್‌ಗಳುಬಂದು ಯಾವ ಶಾಖೆಯಲ್ಲಿ ಸಮರ್ಪಕ ದಾಖಲೆಗಳನಿರ್ವಹಣೆ ಇಲ್ಲ ಎಂದು ತಿಳಿಸಿದರೆ ಅಂತಹಶಾಖೆಯ ಸಿಬ್ಬಂದಿಯನ್ನು ಎತ್ತಂಗಡಿ ಮಾಡುವುದುಅನಿವಾರ್ಯ ಎಂದು ಹೇಳಿದರು.ಆನ್‌ಲೈನ್ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದಬ್ಯಾಂಕ್ ನಿರ್ದೇಶಕ ಹನುಮಂತರೆಡ್ಡಿ, ಕೋವಿಡ್‌ನಿಂದಾಗಿ ಬ್ಯಾಂಕಿಂಗ್ ಕೆಲಸಗಳಿಗೆ ಹಿನ್ನಡೆಯಾಗಿದೆ.ಈಗ ಲಾಕ್‌ಡೌನ್ ತೆರವಾಗುತ್ತಿರುವುದರಿಂದಚುರುಕು ಮುಟ್ಟಿಸಬೇಕಾಗಿದೆ. ಶಾಖಾವಾರುಪ್ರಗತಿಪರಿಶೀಲನೆ ಮಾಡಲು ಸಲಹೆ ನೀಡಿದರು.
ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡಎರಡೂ ಜಿಲ್ಲೆಗಳ ಶಾಖಾವಾರು ಸಿಬ್ಬಂದಿ,ಅಧಿಕಾರಿಗಳ ಜತೆಗೆ ಆನ್‌ಲೈನ್‌ನಲ್ಲಿ ಪ್ರಗತಿಯಕುರಿತು ಮಾಹಿತಿ ಪಡೆದರಲ್ಲದೇ, ಆಡಿಟ್,ಗಣಕೀಕರಣ ಕಾರ್ಯ, ಠೇವಣಿ ಸಂಗ್ರಹದ ಗುರಿಸಾಧನೆಗೆ ಇಚ್ಛಾಶಕ್ತಿಯಿಂದ ಕೆಲಸ ಮಾಡಿ ಎಂದುತಾಕೀತು ಮಾಡಿದರು.ಆನ್‌ಲೈನ್ ಸಭೆಯಲ್ಲಿ ಬ್ಯಾಂಕಿನ ಅಧಿಕಾರಿಗಳಾದಖಲೀಮುಲ್ಲಾ, ನಾಗೇಶ್, ಶಿವಕುಮಾರ್,ದೊಡ್ಡಮುನಿ, ಅರುಣ್‌ಕುಮಾರ್, ಪದ್ಮಮ್ಮ, ಶುಭಾ,ತಿಮ್ಮಯ್ಯ, ಹ್ಯಾರೀಸ್, ಜಬ್ಟಾರ್, ಬಾಲಾಜಿ,ಕೋಲಾರ ಶಾಖೆಯ ವ್ಯವಸ್ಥಾಪಕ ಅಂಬರೀಶ್,ಅಮೀನಾ ಪಾಲ್ಗೊಂಡಿದ್ದರು.