ಕೋಲಾರ: ವಿದ್ಯುತ್ ಖಾಸಗೀಕರಣವಿರೋಧಿಸಿ ರೈತರ ಪಂಪ್‌ಸೆಟ್‌ಗೆಬಿತ್ತಿಪತ್ರ ಅಂಟಿಸುವ ಮುಖಾಂತರಕೇಂದ್ರ ಸರ್ಕಾರದ ರೈತ ವಿರೋಧಿಧೋರಣೆಯನ್ನು ಖಂಡಿಸುವ ಮೂಲಕ41ನೇ ರೈತ ಹುತಾತ್ಮ ದಿನಾಚರಣೆಯನ್ನುರೈತ ಮಹಿಳೆಯರೊಂದಿಗೆ ಆಚರಣೆ ಮಾಡಲಾಯಿತು.
ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿತಾಲೂಕಿನಹೊಸಮಟ್ನಹಳ್ಳಿಯತಮ್ಮ ಕೊಳವೆ ಬಾವಿಗೆ ಭಿತ್ತಿಪತ್ರ ಅಂಟಿಸುವ ಮೂಲಕ ನರಗುಂದ ಹೋರಾಟದಲ್ಲಿಹುತಾತ್ಮರಾದ ರೈತರ ಸ್ಮರಿಸಿಕೊಂಡರು.ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಜನಾಭಿಪ್ರಾಯವಿಲ್ಲದೆ ಏಕಾಏಕಿ ನಾನೇರಾಜ ನಾನೇ ಮಂತ್ರಿ ಎಂಬಂತೆ ಹಿಂದಿನಬ್ರಿಟಿಷ್ ಆಳ್ವಿಕೆ ಮರುಕಳಿಸುವಂತೆತಮಗೆ ಇಷ್ಟ ಬಂದ ರೀತಿ ದೇಶದಲ್ಲಿಆಡಳಿತ ಮಾಡುವ ಮುಖಾಂತರಅರಾಜಕತೆ ಸೃಷ್ಟಿ ಮಾಡುತ್ತಿದೆಯೆಂದು ಆಕ್ರೋಶ ವ್ಯಕ್ತಪಡಿಸಿದರು.
ಅತಿವೃಷ್ಟಿ ಅನಾವೃಷ್ಟಿ, ಪ್ರಕೃತಿವಿ ಕೋಪಗಳಿಂದ ರೈತರು ಬೆಳೆಗಳುನಾಶವಾಗುತ್ತಿರುವುದು ಒಂದುಕಡೆಯಾದರೆ ಮತ್ತೂಂದು ಕಡೆಮಾರುಕಟ್ಟೆಯ ಸೂಕ್ತ ವ್ಯವಸ್ಥೆಯಿಲ್ಲದೆಬೆಲೆ ಕುಸಿತದಿಂದ ಬೆಳೆದ ಬೆಳೆಗಳನ್ನುರಸ್ತೆಗೆ ಚೆಲ್ಲ ಬೇಕಾದ ಪರಿಸ್ಥಿತಿಯಿದೆ.ಇಂತ ಸಮಯದಲ್ಲಿ ವಿದ್ಯುತ್‌ಅನ್ನುಖಾಸಗೀಕರಣ ಮಾಡಿ ರೈತರ ಪಂಪ್‌ಸೆಟ್‌ಗಳಿಗೆ ಮೀ. ಅಳವಡಿಸುವಮೂಲಕ ರೈತರ ಮರಣ ಶಾಸನಬರೆಯುತ್ತಿದ್ದಾರೆಂದು ಸರ್ಕಾರಗಳವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಪ್ರಗತಿಪರ ರೈತ ವಕ್ಕಲೇರಿಹನುಮಯ್ಯ ಮಾತನಾಡಿ, ದೇಶಕ್ಕೆಸ್ವಾತಂತ್ರ್ಯಬಂದು7ದಶಕಗಳುಕಳೆದರೂಈ ದೇಶಕ್ಕೆ ಅನ್ನ ಹಾಕುವ ಅನ್ನದಾತನಿಗೆಸ್ವಾತಂತ್ರ್ಯ ಸಿಕ್ಕಿಲ್ಲ. ಭೂಮಿ ಉಳುಮೆಮಾಡುವುದರಿಂದ ಹಿಡಿದುಮಾರುಕಟ್ಟೆಯವರೆಗೂ ದಲ್ಲಾಳಿಗಳಹಿಡಿತದಲ್ಲಿ ರೈತನ ಬದುಕು ಸಾಗುತ್ತಿದೆ.ವ್ಯವಸಾಯಮನೆಮಕ್ಕಳೆಲ್ಲಾಉಪವಾಸಸಾಯ ಎಂಬ ಗಾದೆಯಂತೆ ರಸ ಬೆಳೆದುಕಸ ತಿನ್ನುವ ಮಟ್ಟಕ್ಕೆ ರೈತನ ಬದುಕುಬಂದು ನಿಂತಿದೆ ಎಂದು ವಿಷಾದಿಸಿದರು.
ಇದರ ಮಧ್ಯೆ ವಿದ್ಯುತ್‌ಖಾಸಗೀಕರಣಮಾಡುವ ಮುಖಾಂತರಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಾಶಮಾಡುವ ಜೊತೆಗೆ ಆಹಾರ ಭದ್ರತೆ ಸೃಷ್ಠಿಮಾಡಿ ಬಡವರ ಜೀವನದ ಜೊತೆಚೆಲ್ಲಾಟವಾಡುವ ಕೇಂದ್ರ ಸರ್ಕಾರವಿದ್ಯುತ್ ಖಾಸಗೀಕರಣ ಕೈಬಿಡದೇಇದ್ದರೆ ಪ್ರಪಂಚದ 3ನೇ ಮಹಾಯುದ್ಧಇಲ್ಲಿಂದಲೇ ಶುರುವಾಗುತ್ತದೆ ಎಂದುಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.ಮುದುವಾಡಿ ಚಂದ್ರಪ್ಪ, ರೈತಕೂಲಿಕಾರ್ಮಿಕರು ಭಾಗವಹಿಸಿದ್ದರು.