Advertisement

ಕಾಂಗ್ರೆಸ್‌ ಶಾಸಕರ ದೌರ್ಜನ್ಯ, ದಬ್ಬಾಳಿಕೆಗೆ ಅಂತ್ಯ ಆಡಲು ಸಿದ್ದರಾಗಿರಿ

08:44 PM Jul 11, 2021 | Team Udayavani |

ಬಂಗಾರಪೇಟೆ: ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರದೌರ್ಜನ್ಯ ದಬ್ಟಾಳಿಕೆ ಅಂತ್ಯ ಹಾಡಲು ಹಾಗೂಅಭಿವೃದ್ಧಿ ಹಿತದೃಷ್ಟಿಯಿಂದ ಈ ಬಾರಿ ನಡೆಯುವಜಿಪಂ, ತಾಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಜಿಲ್ಲಾಬಿಜೆಪಿ ಉಪಾಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯಬಿ.ವಿ.ಮಹೇಶ್‌ ಹೇಳಿದರು.

Advertisement

ತಾಲೂಕಿನ ಕಾಮಸಮುದ್ರ ಜಿಪಂ ಕ್ಷೇತ್ರದವ್ಯಾಪ್ತಿಯ ತೊಪ್ಪನಹಳ್ಳಿ ಗ್ರಾಮದಲ್ಲಿ ಮುಂಬರುವಜಿಪಂ ಹಾಗೂ ತಾಪಂ ಚುನಾವಣೆಗೆ ಕ್ಷೇತ್ರದಕಾರ್ಯಕರ್ತರನ್ನು ಸಜ್ಜುಗೊಳಿಸಲು ಹಾಗೂಮುಖಂಡರ ಅಭಿಪ್ರಾಯ ಪಡೆಯಲು ಕರೆದಿದ್ದಸಭೆಯಲ್ಲಿ ಮಾತನಾಡಿದರು.

ದಬ್ಟಾಳಿಕೆ ಕೊನೆಗಾಣಿಸಿ: ಕಳೆದ 8 ವರ್ಷಗಳಿಂದಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರ ಮತ್ತು ಅವರಬೆಂಬಲಿಗರಿಂದ ನಡೆಯುತ್ತಿರುವ ದೌರ್ಜನ್ಯ, ದಬ್ಟಾಳಿಕೆಗೆ ಕಡಿವಾಣ ಹಾಕಲು ಈ ಚುನಾವಣೆ ನಾಂದಿಯಾಗಬೇಕು. ಇದನ್ನು ಸಮರ್ಪಕವಾಗಿ ಬಳಸಿಕೊಂಡರೆ ಕಾಂಗ್ರೆಸ್‌ ಪಕ್ಷವನ್ನು ಕ್ಷೇತ್ರದಲ್ಲಿ ಹೆಸರಿಲ್ಲದಂತೆ ಮಾಡಬಹುದು ಎಂದು ವಿವರಿಸಿದರು.ಅಭಿವೃದ್ಧಿ ಕಾರ್ಯ ಪ್ರತಿಮನೆಗೆ ತಲುಪಿಸಿ: ಕೇಂದ್ರಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದು, ಬಿಜೆಪಿಸರ್ಕಾರಗಳ ಸಾಧನೆಯನ್ನು ಕಾರ್ಯಕರ್ತರುಮನೆಮನೆಗೂ ಮುಟ್ಟುವಂತೆ ಮಾಡಬೇಕು. ಸಂಸದಎಸ್‌.ಮುನಿಸ್ವಾಮಿ ಸಹ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ.

ನಮಗೆಏನೇ ಸಮಸ್ಯೆಗಳಿದ್ದರೂ ಸಂಸದರ ಬಳಿ ಚರ್ಚಿಸಿಬಗೆಹರಿಸಿಕೊಳ್ಳಬಹುದು ಎಂದು ಹೇಳಿ¨ರು‌ .ಕಾರ್ಯಕರ್ತರು ಸಂಘಟಿತರಾಗಲಿ:ಕಾಂಗ್ರೆಸ್‌ನ ಹಾಲಿಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಕ್ಷೇತ್ರದಲ್ಲಿಅಭಿವೃದ್ಧಿ ಮಾಡದಿದ್ದರೂ ಬಿಟ್ಟಿ ಪ್ರಚಾರದಲ್ಲಿತೊಡಗಿ, ಪ್ರಧಾನಿ ಹಾಗೂ Ê ‌ ‌ುುಖ್ಯಮಂತ್ರಿಯನ್ನುಟೀಕಿಸುವಲ್ಲಿ ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ.

ಇಂತಹವರನ್ನು ಮತದಾರರುಕ್ಷಮಿಸದೆ ದೂರವಿಡುವ ಕಾಲ ಹತ್ತಿರವಾಗುತ್ತಿದೆ.ಇದಕ್ಕೆ  ಕಾರ್ಯಕರ್ತರು ಸಂಘಟಿತರಾಗಿ ಶ್ರಮಿಸಬೇಕಿದೆಎಂದು ಹೇಳಿದರು.ಕಳೆದ ತಾಪಂ ಚುನಾವಣೆಯಲ್ಲಿ ಬಿಜೆಪಿಬಹುಮತ ಪಡೆದಿದ್ದರೂ ಕಾಂಗ್ರೆಸ್‌ ಶಾÓಕ ‌ ಎಸ್‌.ಎನ್‌.ನಾರಾಯಣಸ್ವಾಮಿ ಹಣ ಬಲದಿಂದ ನಮ್ಮಬಿಜೆಪಿ ಸದಸ್ಯರನ್ನು ಖರೀದಿಸಿ ಆಡಳಿತಮಂಡಳಿಯನ್ನು ವಶಪಡಿಸಿಕೊಂಡರು ಎಂದುಟೀಕಿಸಿದ ಅವರು, ಇದಕ್ಕೆ ಮತ್ತೆ ಅವಕಾಶ ನೀಡಬಾರದೆಂದುಹೇಳಿ,Êುು‌ ಂದಿನವಾರಅಭ್ಯರ್ಥಿಗಳನ್ನುಆಯ್ಕೆ ಮಾಡಲು ಸಂಸದ ಎಸ್‌.ಮುನಿಸ್ವಾಮಿ,ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ, ಬಿಜೆಪಿಜಿಲ್ಲಾಧ್ಯಕ್ಷ ಡಾ.ವೆಣುಗೋಪಾಲರೆಡ್ಡಿ ನೇತೃñದಲಿ‌Ì Éಪ್ರತಿ ಹೋಬಳಿವಾರು ಸಭೆ ನಡೆಸಲಾಗುವುದೆಂದರು.

Advertisement

ಈ ಸಂದರ್ಭ¨ಲ್ಲಿ ‌ ಜಿಲ್ಲಾ ಬಿಜೆಪಿ ಉಪಾಧ್ಯಕ್ಷಚಂಗಲರಾಯರೆಡ್ಡಿ, ಮುಖಂಡರಾದ ಚಲಪತಿ,ಸೋಮಶೇಖರರೆಡ್ಡಿ, ಮಂಜುನಾಥ್‌,ಮುಖಂಡರಾದ ಮಹಾದೇವ್‌, ಪಾರ್ಥಸಾರಥಿ,ಎಂ.ಪಿ.ಶ್ರೀನಿವಾಸಗೌಡ, ಕಾಮ ಸಮುದ್ರ ತಿಪ್ಪಾರೆಡ್ಡಿ,ಗುಲ್ಲೇಟಿ, ವೆಂಕಟೇಶ್‌, ಕೇತಗಾನಹಳ್ಳಿ ಶ್ರೀರಾಮ್‌,ಶ್ರೀಧರ್‌, ಸೀತಾರಾಮಪ್ಪ ಸೇರಿದಂತೆ ಕಾರ್ಯಕರ್ತರುಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next