Advertisement

ಮಧ್ಯವರ್ತಿಗಳ ಹಾವಳಿ ತಡೆಗೆ ಆಗ್ರಹ

08:24 PM Jul 10, 2021 | Team Udayavani |

ಬಂಗಾರಪೇಟೆ: ತಾಲೂಕು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಇಸಿ,ಕ್ರಯಪತ್ರದ ನಕಲು ಪಡೆಯಲು ಹಣನೀಡಬೇಕಿದೆ. ಇದೇನು ಸರ್ಕಾರಿ ಕಚೇರಿನಾ,ಮಧ್ಯವರ್ತಿಗಳ ಕಚೇರಿನಾ ಎಂದು ರಾಜ್ಯರೈತಸಂಘಜಿಲ್ಲಾಧ್ಯಕ್ಷಮರಗಲ್‌ ಶ್ರೀನಿವಾಸ್‌ಪ್ರಶ್ನಿಸಿದರು.

Advertisement

ತಾಲೂಕು ಕಚೇರಿ ಮುಂದೆ ಪ್ರತಿಭಟನೆಮಾಡಿ ಮಾತನಾಡಿದ ಅವರು,ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿನಡೆಯುತ್ತಿರುವಭ್ರಷ್ಟಾಚಾರತಡೆಯಬೇಕು.ಮಧ್ಯವರ್ತಿಗಳು ಇಲ್ಲದಿದ್ದರೆ ಯಾವುದೇಕೆಲಸಗಳು ಆಗುತ್ತಿಲ್ಲ. ಬಿ-ಖರಾಬ್‌,ಗೋಮಾಳ, ಗುಂಡುತೋಪುಗಳಿಗೆ ನಕಲಿದಾಖಲೆ ಸೃಷ್ಟಿಸಿ ಕ್ರಯಗಳು ಹೇಗೆಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿರುವ ಮಧ್ಯವರ್ತಿಗಳಹಾವಳಿ, ಭ್ರಷ್ಟಾಚಾರ ವಿರುದ್ಧ ತಹಶೀಲ್ದಾರ್‌ಅವರುಕೂಡಲೇಕಾನೂನುಕ್ರಮ ಜರುಗಿಸಿರೈತರ, ಬಡವರ ಹಿತದೃಷ್ಟಿಯಿಂದಸರ್ಕಾರದ ನಿಗದಿ ಮಾಡಿರುವ ನಿರ್ದಿಷ್ಟಶುಲ್ಕವನ್ನುಕೂಡಲೇಕಚೇರಿಮುಂಭಾಗದಲ್ಲಿಬರೆಯಿಸಬೇಕು ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಪ್ರಕಾಶ್‌, ಜಿಲ್ಲಾ ಉಪಾಧ್ಯಕ್ಷ ಸ್ವಸ್ತಿಕ್‌ಶಿವು,ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಬಮ್ರಹಾನ್‌, ತಾಲೂಕು ಅಧ್ಯಕ್ಷ ಐತಾಂಡಹಳ್ಳಿಅಮರೇಶ್‌,ನಾಯಕರಹಳ್ಳಿ ವೆಂಕಟರಾಮಪ್ಪ,ಮಂಜುನಾಥ, ಹರೀಶ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next