Advertisement

ಶಾಸಕರ ದತ್ತು ಶಾಲೆಗೆ ಕಟ್ಟಡವೇ ಸುಭದ್ರವಾಗಿಲ್ಲ! ನೂತನ ಸರ್ಕಾರಿ ಪ್ರೌಢಶಾಲೆಯ ಅವ್ಯವಸ್ಥೆ

12:51 PM Dec 10, 2020 | sudhir |

ಕೋಲಾರ: ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ತಾವು ದತ್ತು ಪಡೆದ 3 ಶಾಲೆ ಪೈಕಿ ಜಿಲ್ಲಾ ಕೇಂದ್ರದ ನೂತನ ಸರ್ಕಾರಿ ಪ್ರೌಢಶಾಲೆಗೆ ಕಟ್ಟಡವೇ ಸುಭದ್ರವಾಗಿಲ್ಲ. ಸುಮಾರು 40 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಶಾಲಾಕಟ್ಟಡಕ್ಕೆಈಗಲೂ
ಮೂಲಭೂತ ಸೌಕರ್ಯಗಳಿಲ್ಲ. ವಿಶ್ವೇಶ್ವರಯ್ಯ ಕ್ರೀಡಾಂಗಣ ಹಾಗೂ ಬಸ್‌ ನಿಲ್ದಾಣಕ್ಕೆ ಹತ್ತಿರದಲ್ಲಿಯೇ ಶಾಲೆ ಇದ್ದರೂ, ದುರಸ್ತಿಗೆ ಯಾರೂ ಗಮನಹರಿಸಿಲ್ಲ. ಉಸ್ತುವಾರಿ ಸಚಿವರು ಇದೇ ಶಾಲೆ ಮುಂದೆಯೇ ರಾಷ್ಟ್ರೀಯ ಹಬ್ಬಗಳಿಗೆ ಧ್ವಜ ಹಾರಿಸಲು ಹೋದರೂ ಶಾಲೆಯ ಅಧ್ವಾನದ ಪರಿಸ್ಥಿತಿ ಅವಲೋಕಿಸಿಲ್ಲ.

Advertisement

ಕೊಠಡಿ ಶಿಥಿಲ: ಸುಮಾರು 30 ವರ್ಷಗಳಿಂದಲೂ ಶಾಲಾ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದಿಲ್ಲ. ಇದೇ ಶಿಥಿಲಗೊಂಡಿರುವ ಕಟ್ಟಡದಲ್ಲಿ ಪದವಿ ಪೂರ್ವ ಕಾಲೇಜು ನಡೆಯುತ್ತಿದ್ದು, ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಪ್ರೌಢ ಶಾಲೆಯಲ್ಲಿ 262 ಮಂದಿ ವ್ಯಾಸಂಗ ಮಾಡುತ್ತಿದ್ದು, 4 ಕೊಠಡಿ ಸಂಪೂರ್ಣ ಶಿಥಿಲಗೊಂಡಿದೆ. ನೆಲಹಾಸು ಕಿತ್ತು ಬಂದಿದ್ದು,
ತೇಪೆಗಳನ್ನು ತಾತ್ಕಾಲಿಕವಾಗಿ ಹಾಕಲಾಗಿದೆ. ಮಳೆ ಬಂದರೆ ಸೋರುತ್ತದೆ. ಆಗಾಗ್ಗೆಚಾವಣಿ ಸಿಮೆಂಟ್‌ ಕುಸಿಯುತ್ತಿರುತ್ತದೆ.
ಕಾರಿಡಾರ್‌ ಚಾವಣಿಯೂ ಕುಸಿಯುತ್ತಾ ಸಿಮೆಂಟ್‌ ಕಬ್ಬಿಣದ ಅಸ್ಥಿಪಂಜರ ಕಾಣುವಂತಾಗಿದೆ.

ಇದನ್ನೂ ಓದಿ:ಮತದಾರರಿಗೆ ಆಮಿಷವೊಡ್ಡಿದರೆ ನಿರ್ದಾಕ್ಷಿಣ್ಯಕ್ರಮ : ಜಿಲ್ಲಾಧಿಕಾರಿ ಎಚ್ಚರಿಕೆ

ತಾರಸಿ ಕುಸಿತ ಭೀತಿ: ಕೆಲವೊಮ್ಮೆ ಶಿಕ್ಷಕರ ವಿಶ್ರಾಂತಿ ಕೊಠಡಿಯಲ್ಲಿಯೇ ತಾರಸಿ ಸಿಮೆಂಟ್‌ ಕುಸಿದು ಬಿದ್ದು, ಶಿಕ್ಷಕಿಯೊಬ್ಬರು ಗಾಯಗೊಂಡ ಘಟನೆಯೂ ಜರುಗಿದೆ. ತರಗತಿಗಳಲ್ಲಿ ಇದೇ ಪರಿಸ್ಥಿತಿ ಇದ್ದು ವಿದ್ಯಾರ್ಥಿಗಳು ಯಾವಾಗ ತಾರಸಿ ಕುಸಿಯುತ್ತದೋ
ಎಂದು ಭೀತಿಯಿಂದಲೇ ಎಚ್ಚರ ವಹಿಸಬೇಕಾಗಿದೆ. ಈ ಕಟ್ಟಡದಲ್ಲಿ ನಡೆಯುವ ಶಾಲಾಕಾಲೇಜಿಗೆವಿದ್ಯಾರ್ಥಿಗಳು ಸುತ್ತಮುತ್ತಲ ಗ್ರಾಮಗಳಿಂದ ಬರು ತ್ತಿದ್ದು, ಬಹುತೇಕಸಾರಿಗೆಸಂಸ್ಥೆಬಸ್‌ಗಳನ್ನೇಅವಲಂಬಿಸಿದ್ದಾರೆ.

Advertisement

ಶಾಲೆಯಲ್ಲಿ ಇಬ್ಬರು ದೈಹಿಕ ಶಿಕಣ ಶಿಕ್ಷಕರಿದ್ದಾರೆ. ಸಿಬ್ಬಂದಿ ವರ್ಗಕ್ಕೆ ಇಬ್ಬರು ಶಿಕ್ಷಕರ ಕೊರತೆ ಇದೆಯಾದರೂ ಸಮಸ್ಯೆ ಇಲ್ಲದಂತೆ ನೋಡಿ ಕೊಳ್ಳಲಾಗುತ್ತಿದೆ.

– ಕೆ.ಎಸ್.ಗಣೇಶ್

Advertisement

Udayavani is now on Telegram. Click here to join our channel and stay updated with the latest news.

Next