Advertisement
ಮಾರಣಾಂತಿಕವಲ್ಲದ ಕೊರೊನಾ 3ನೇ ಅಲೆ ಎದುರಿಸಲು ಜಿಲ್ಲಾಡಳಿತ ಮನೆಗಳಿಗೆ ಔಷಧಿ ವಿತರಿಸಲು, ರೋಗಿಗಳ ಮಾಹಿತಿ ಸಂಗ್ರಹಿಸಲು ಮತ್ತು ಕೋವಿಡ್ ಮಾರ್ಗಸೂಚಿ ಪಾಲನೆ ನಿಗಾವಹಿಸಲು ವ್ಯವಸ್ಥೆ ಮಾಡಿದೆ.
ಜನರ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ನಿತ್ಯ ವರದಿ ನೀಡಲು ಸೂಚನೆ: ಆರೋಗ್ಯ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಂರಕ್ಷಣಾಧಿಕಾರಿ, ಆರೋಗ್ಯ ನಿರೀಕ್ಷಕರಿಗೆ ಅಗತ್ಯ ಸೂಚನೆ ನೀಡಿದ್ದು, ಆಯಾ ಆರೋಗ್ಯ ಕೇಂದ್ರ ವ್ಯಾಪ್ತಿಯ ಸೋಂಕಿತರ ಸ್ಥಿತಿಗತಿ ಕುರಿತಂತೆ ನಿತ್ಯವೂ ಮಾಹಿತಿ ಸಂಗ್ರಹಿಸಿ ಆರೋಗ್ಯಾಧಿಕಾರಿಗಳ ಕಚೇರಿಗೆ ಕಳುಹಿಸಲು ಆದೇಶ
ಹೊರಡಿಸಲಾಗಿದೆ.
Related Articles
Advertisement
ಸಂಪರ್ಕಿತರ ಪತ್ತೆಗೆ ಕ್ರಮ : ಆರೋಗ್ಯಸಿಬ್ಬಂದಿ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚಿ ಆರೋಗ್ಯ ಸ್ಥಿತಿಗತಿ ಕುರಿತಂತೆ ನಿಗಾವಹಿಸಲಾಗುತ್ತಿದೆ. ಅಗತ್ಯವಿದ್ದರೆ ಅಂತವರ ಗಂಟಲ ಮೂಗಿನ ದ್ರವ ಪರೀಕ್ಷೆಗೆ ಕಳುಹಿಸಿ 24 ಗಂಟೆಯೊಳಗಾಗಿ ಫಲಿತಾಂಶ ಸಿಗುವಂತೆ ಮಾಡಲು ಸೂಚಿಸಲಾಗಿದೆ.
ಕೊರೊನಾ ಚಿಕಿತ್ಸೆಗೆ ಬಳಸುವ ಔಷಧಿಗಳು ಏನೇನು?ಆಯುಕ್ತಾಲಯ ಹೊರಡಿಸಿರುವ ಸುತ್ತೋಲೆ ಪ್ರಕಾರ ಕೋವಿಡ್ 19 ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ನೀಡಬೇಕಾದ ಕಿಟ್‌ನಲ್ಲಿ ವಿಟಮಿನ್ ಸಿ, ಜಿಂಕ್, ಪ್ಯಾರಸೆಟಮಾಲ್, ಸಿಟ್ರಿಜನ್, ಪಾಂಟೋಪ್ರೋಜಲ್, ಕೆಮ್ಮಿನ ಔಷಧಿಗಳು ಕಡ್ಡಾಯವಾಗಿ ಇರುವಂತೆ ಸೂಚಿಸಲಾಗಿದೆ. ಜತೆಗೆ ಕಿಟ್‌ನಲ್ಲಿ ಮೂರು ಪದರದ 10ಮಾಸ್ಕ್ ಮತ್ತು ಕೈ ಸ್ವತ್ಛತೆಗೆ ಸ್ಯಾನಿಟೈಜರ್ ಬಾಟಲ್ ಇಡಲು ನಿರ್ದೇಶಿಸಲಾಗಿದೆ. ಮನೆಯಲ್ಲಿ ಪ್ರತ್ಯೇಕವಾಗಿರುವ ಕೋವಿಡ್ ದೃಢಪಟ್ಟ ವ್ಯಕ್ತಿ ಪಾಲಿಸಬೇಕಾದ ಸೂಚನೆಗಳನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ರವಾನಿಸಿ ಪಾಲಿಸುವಂತೆ ಸೋಂಕಿತರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. – ಕೆ.ಎಸ್.ಗಣೇಶ್