Advertisement

ಔಷಧಿ ಖರೀದಿ ಹಗರಣ ವಿರುದ್ಧ ಧರಣಿ

05:05 PM Aug 22, 2019 | Naveen |

ಕೋಲಾರ: ಮಾಜಿ ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಔಷಧಿ ಖರೀದಿಯಲ್ಲಿ 535 ಕೋಟಿ ವಂಚಿಸಿದ್ದಾರೆ, ವೈದ್ಯಕೀಯ ಕೋರ್ಸ್‌ ಗಳಿಗೆ ಅಕ್ರಮ ಪ್ರವೇಶ ಅವಕಾಶ ಕೊಟ್ಟಿದ್ದಾರೆ ಎಂದು ಭಾರತೀಯ ದಲಿತಸೇನೆಯು ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

Advertisement

ಬಳಿಕ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ಸಲ್ಲಿಸಿ, ರಾಜ್ಯ ಸರ್ಕಾರವು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿತು.

ವೈದ್ಯಕೀಯ ಕೋರ್ಸ್‌ಗಳಿಗೆ ಅಕ್ರಮ ಪ್ರವೇಶ: ರಾಜ್ಯ ರಾಜಕಾರಣದಲ್ಲಿ ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರುವ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಶಾಸಕ ಮಾಜಿ ಸಭಾಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ 2013-14ನೇ ನಕಲಿ ಅಂಕಪಟ್ಟಿ, ನಕಲಿ ಹಾಜ ರಾತಿ ಸೃಷ್ಟಿಸಿ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಬೆಂಗಳೂರು ಸರ್ಕಾರಿ ಯುನಾನಿ ವೈದ್ಯಕೀಯ ವಿದ್ಯಾಲಯದಲ್ಲಿ ವೈದ್ಯಕೀಯ ಕೋರ್ಸುಗಳಿಗೆ ಅಕ್ರಮವಾಗಿ ಪ್ರವೇಶ ನೀಡಿದ್ದರು. ಇದರ ಬಗ್ಗೆ ಸಿಐಡಿ ತನಿಖೆ ನಡೆಸಲು ಮುಂದಾಗಿದ್ದ ಸಮಯದಲ್ಲಿ (2017)ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ರಮೇಶ್‌ ಕುಮಾರ್‌ ಅಕ್ರಮದ ಸಿಐಡಿ ತನಿಖೆಯನ್ನು ಕೈಬಿಡುವಂತೆ ಒಳಾಡಳಿತ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು. ಈ ವಂಚನೆ ಪ್ರಕರಣವನ್ನು ಮರು ತನಿಖೆ ಮಾಡಬೇಕೆಂದು ಭಾರತೀಯ ದಲಿತ ಸೇನೆ ರಾಜ್ಯಧ್ಯಕ್ಷ ದಲಿತ ನಾರಾಯಣಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಒತ್ತಾಯಿಸಿದರು.

ಲೋಕಯುಕ್ತದಲ್ಲಿ ದೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯೊಳಗಿರುವ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ನಿಂದ ಕಳಪೆ ಗುಣಮಟ್ಟದ ಔಷಧಿ ಖರೀದಿ ಕುರಿತು ಸಿಎಜಿ ನೀಡಿದ್ದ ವರದಿ ಆಧರಿಸಿ ರಮೇಶ್‌ ಕುಮಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ಇದು ಬಹುಕೋಟಿ ಹಗರಣದ ಆರೋಪವಾ ಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ವೈದ್ಯಕೀಯ ಕೋರ್ಸುಗಳಿಗೆ ಸಂಬಂಧಿಸಿದಂತೆ ನಕಲಿ ಅಂಕಪಟ್ಟಿ, ನಕಲಿ ಹಾಜರಾತಿ ಸೃಷ್ಟಿಸಿ ದಾಖಲಾತಿ ಪ್ರಕರಣ ಕುರಿತು 2016ರಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಇದು ಕ್ರಿಮಿನಲ್ ಮೊಕದ್ದಮೆಯಾಗಿದೆ ಎಂದು ಸ್ಪಷ್ಟಪಡಿಸಿತು.

Advertisement

ಸಿಐಡಿಗೆ ತಡೆ: ಈ ಪ್ರಕರಣ ಇಡೀ ರಾಜ್ಯಾದ್ಯಂತ ವ್ಯಾಪಿಸಿರಬಹುದು ಎಂದು ಶಂಕಿಸಿ, ಉನ್ನತ ಮಟ್ಟದ ತನಿಖೆಗೆ ಸಿಐಡಿ ಮುಂದಾದಾಗ ತನಿಖೆಯನ್ನು ಕೈಬಿಡಲು ಸೂಚಿಸಿರುವುದರ ಹಿಂದೆ ಹಲವು ಅನುಮಾನಗಳು ಸಾರ್ವಜನಿಕರಲ್ಲಿ ಹುಟ್ಟು ಹಾಕಿರುವುದು ಸತ್ಯ.

ಪ್ರತಿಭಟನೆಯಲ್ಲಿ ಎಂ.ಆರ್‌. ಚೇತನ್‌ ಬಾಬು, ದಿಂಬಚಾಮನಹಳ್ಳಿ ಅಂಬರೀಶ್‌, ಖಾದ್ರಿಪುರ ಬಾಬು, ಸುರೇಶ್‌ ಕುಮಾರ್‌, ನಾಗೇಶ್‌, ಮಾಹಿತಿ ಮಂಜುನಾಥ್‌, ಸಂಜಯ್‌, ಅನಿಲ್ ಕುಮಾರ್‌, ಕಲ್ಯಾಣ್‌ ಕುಮಾರ್‌, ರವಿಕುಮಾರ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next