Advertisement

ಅಂಗನವಾಡಿಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ

04:12 PM Jul 11, 2019 | Naveen |

ಕೋಲಾರ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭ, ಕೇಂದ್ರದ ಹಾಗೂ ಐದು ತಿಂಗಳಿನಿಂದ ಬಾಕಿ ಇರುವ ಗೌರವಧನ ಕೂಡಲೇ ಬಿಡುಗಡೆ ಮಾಡಲು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿತು.

Advertisement

ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಲು 1975ರಲ್ಲಿ ಆರಂಭವಾದ ಐಸಿಡಿಎಸ್‌ ಯೋಜನೆಯು ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಪ್ರಾಯಪೂರ್ವ ಬಾಲಕಿಯರ ಸರ್ವತೋಮುಖ ಬೆಳವಣಿಗೆಗೆ ಬಹಳ ಪ್ರಮುಖ ಪಾತ್ರ ವಹಿಸಿದೆ.

ಈ ಯೋಜನೆಯಿಂದ ರಾಜ್ಯದ ಮಾನವ ಸಂಪನ್ಮೂಲಗಳ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಯೋಜನೆಯನ್ನು ಸಬಲೀಕರಿಸುವ ಬದಲಿಗೆ ಸರ್ಕಾರಿ ಶಾಲೆಗಳಲ್ಲಿ ದಾಖ ಲಾತಿ ಹೆಚ್ಚಿಸಲು ಅಂಗನವಾಡಿ ಕೇಂದ್ರ ಗಳಲ್ಲಿಯೇ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಸೌಲಭ್ಯವಿಲ್ಲದಿದ್ದರೂ ಕಾರ್ಯ ನಿರ್ವಹಣೆ: ರಾಜ್ಯದ ಹಲವು ಜಿಲ್ಲೆಗಳಲ್ಲಿ 3-4 ತಿಂಗಳ ಗೌರವಧನ ಬಂದಿಲ್ಲ, ಕೋಳಿ ಮೊಟ್ಟೆ, ತರಕಾರಿ ಹಣ 4-5 ತಿಂಗಳಿಂದ ಬಂದಿಲ್ಲ, ಸರಿಯಾಗಿ ಗ್ಯಾಸ್‌ ವಿತರಣೆಯಿಲ್ಲ, ಅಂಗನವಾಡಿ ನೌಕರರು ಕಾಯಿಲೆ ಬಿದ್ದಾಗ ಮತ್ತು ಮರಣ ಹೊಂದಿದಾಗ ಬರುವ ಹಣ ಬರುತ್ತಿಲ್ಲ. ಮಾತ್ರವಲ್ಲದೆ ನಿವೃತ್ತಿಯಾದ ನೌಕರರಿಗೆ ಏನೊಂದೂ ಸೌಲಭ್ಯವಿಲ್ಲ. ಇಂತಹ ಸಂದರ್ಭದಲ್ಲಿಯೂ ಅಂಗನ ವಾಡಿ ನೌಕರರು ದುಡಿಯುತ್ತಿದ್ದಾರೆ ಎಂದರು.

ಏನನ್ನು ಸಕಾಲಕ್ಕೆ ಪೂರೈಸದೇ ಅಂಗನವಾಡಿ ನೌಕರರ ಮೇಲೆ ಶಿಸ್ತು ಕ್ರಮ ಮಾತ್ರ ಜರುಗುತ್ತಲೇ ಇದೆ ಎಂದು ಅಂಗನವಾಡಿ ನೌಕರರು ಆಕ್ರೋಷ ವ್ಯಕ್ತಪಡಿಸಿದರು.

Advertisement

ಪಿಂಚಣಿ ನೀಡಿ: ನಿವೃತ್ತ ಕಾರ್ಯಕರ್ತೆ ಸಹಾಯಕಿಗೆ ಇಡುಗಂಡು ತಕ್ಷಣ ಬಿಡುಗಡೆ ಆಗಬೇಕು, ಇಲಾ ಖೆಯ ಲೋಪದೋಷಗಳಿಂದ ಪಾನ್‌ಕಾರ್ಡ್‌ ನೀಡದವರಿಗೆ – ಹಣ ಕಡಿತ ಆಗದವರಿಗೂ ನಿವೃತ್ತಿ ಸೌಲಭ್ಯ ಬಿಡುಗಡೆ ಮಾಡಬೇಕು, ಕಾರ್ಯಕರ್ತೆ- ಸಹಾಯಕಿ ಯರಿಗೆ ಪ್ರಾನ್‌ ಕಾರ್ಡ್‌ ನೀಡದವರಿಗೆ ತಕ್ಷಣ ನೀಡಬೇಕು, 2016 ಏಪ್ರಿಲ್ನಿಂದ ಆಯ್ಕೆ ಆದ ಕಾರ್ಯಕರ್ತೆ ಸಹಾಯಕಿಯರಿಗೆ ಕಾಯಂ ನಿವೃತ್ತಿ ಸೌಲಭ್ಯದಡಿ ತರಬೇಕು. ಈಗಾಗಲೇ ನಿವೃತ್ತಿ ಆದವರಿಗೆ ಕನಿಷ್ಠ 3000 ರೂ. ಪಿಂಚಣಿ ನೀಡಬೇಕೆಂದು ಆಗ್ರಹಿಸಿದರು.

ಅಂಗನವಾಡಿ ಸಹಾಯಕಿ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಅನುಕಂಪದ ಆಧಾರದಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಮದುವೆ ಯಾಗದ ಹೆಣ್ಣು ಮಕ್ಕಳಿಗೆ ಎಂಬ ಷರತ್ತನ್ನು ತೆಗೆದು ಕುಟುಂಬ ದವರಿಗೆ ಎಂದು ತಿದ್ದುಪಡಿಯಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮುನಿರಾಜಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ನಾಗರತ್ನ, ಮುಖಂಡ ರಾದ ಜಿ.ಈಶ್ವರಮ್ಮ, ಕಲ್ಪನಾ, ಮಂಜುಳಾ, ಲಕ್ಷ್ಮೀ ದೇವಮ್ಮ, ಎಂ.ಲಕ್ಷ್ಮ್ಮಮ್ಮ, ಸುಜಾತ, ಪಿ.ಸಿ.ಜಯಮ್ಮ, ಆಂಜಿಲಮ್ಮ, ನೇತ್ರಾವತಿ, ಶೈಲಾ, ಅಮುದಾ, ರತ್ನಾ, ಇಂದ್ರಾಣಿಯಮ್ಮ, ಸುಶೀಲಮ್ಮ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next