ಕೋಲಾರ: ತೆರೆಮರೆಯಲ್ಲಿ ಕನಿಷ್ಠ ಸಂಬಳ ಹಾಗೂ ಸೌಕರ್ಯಗಳೊಂದಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಪ್ರವಾಸಿ ಮಾರ್ಗದರ್ಶಿಗಳು ಅಹಿರ್ನಿಷಿ ದುಡಿಯುತ್ತಿದ್ದು, ಫೆ.21 ಪ್ರತಿವರ್ಷ ವಿಶ್ವ ಪ್ರವಾಸಿ ಮಾರ್ಗದರ್ಶಿಗಳ ದಿನವನ್ನು ಆಚರಿಸುತ್ತಿದ್ದು, ಜಿಲ್ಲೆಯ ಪ್ರವಾಸಿ ಮಾರ್ಗದರ್ಶಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಾಗರಿಕರ ಜವಾಬ್ದಾರಿಯಾಗಬೇಕಿದೆ.
Advertisement
ದಿನಾಚರಣೆ ಆರಂಭ: ಪ್ರವಾಸಿ ಮಾರ್ಗದರ್ಶಿ ಸಂಘಗಳ ವಿಶ್ವ ಒಕ್ಕೂಟ 1985ರಲ್ಲಿ ಲಾಭರಹಿತ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದಿತು. 1989ರಲ್ಲಿ ಸೈಪ್ರಸ್‌ನ ನಿಕೋಸಿಯಾದಲ್ಲಿ ನಡೆದ ಒಕ್ಕೂಟದ ಮೂರನೇ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಪ್ರವಾಸಿ ಮಾರ್ಗದರ್ಶಿ ದಿನವನ್ನು ಆರಂಭಿಸಲಾಯಿತು. ವಿಶ್ವಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಪ್ರವಾಸಿ ಮಾರ್ಗದರ್ಶಿಗಳನ್ನು ಪ್ರತಿನಿಧಿ ಸುವ 70ಕ್ಕೂ ಹೆಚ್ಚು ದೇಶಗಳ ಸದಸ್ಯರನ್ನು ಹೊಂದಿದೆ.
Related Articles
ಗುರುತಿಸಿಕೊಂಡಿದ್ದು, ಇಡೀ ರಾಜ್ಯದಲ್ಲಿ ಪ್ರವಾಸಿ ಸಂಪನ್ಮೂಲ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರವಾಸದ ಅಧಿಕೃತ ಮಾರ್ಗದರ್ಶಿ ಇವರೇ ಆಗಿರುತ್ತಾರೆ.
Advertisement
ಜಿಲ್ಲೆಯಲ್ಲಿ ಮಾರ್ಗದರ್ಶಿಗಳು ಎಷ್ಟು ಸಂಖ್ಯೆಯಲ್ಲಿರಬೇಕಿತ್ತು?:ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಕನಿಷ್ಠ ಇಬ್ಬರಾ ದರೂ ಪ್ರವಾಸಿ ಮಾರ್ಗದರ್ಶಿಗಳು ಇರಬೇಕಿತ್ತು. ಪೂರ್ಣ ಪ್ರಮಾಣದಲ್ಲಿ ಅಂದರೆ, ಗರಿಷ್ಠ 40 ಮಂದಿ ಪ್ರವಾಸಿ ಮಾರ್ಗದರ್ಶಿಗಳಾಗಲು ಅವಕಾಶ ಇದೆ. ಸದ್ಯಕ್ಕೆ ಕೋಲಾರ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಿಸಲು ಪ್ರತಿನಿತ್ಯ ಕನಿಷ್ಠ 3 ಸಾವಿರ ಮಂದಿ ಆಗಮಿಸುತ್ತಿದ್ದಾರೆ. ಈ ಪೈಕಿ ಹೆಚ್ಚು ಮಂದಿ ಕೋಟಿಲಿಂಗೇಶ್ವರ ದೇವಾಲಯಕ್ಕೆ ಭೇಟಿ ಕೊಟ್ಟರೆ, ಬಹಳಷ್ಟು ಮಂದಿ ಕೋಲಾರ ಜಿಲ್ಲೆಯಲ್ಲಿ ಸಿಗುವ ವೈಶಿಷ್ಟ್ಯಪೂರ್ಣ ಮುಳಬಾಗಿಲು ದೋಸೆ, ಬಂಗಾರಪೇಟೆ
ಚಾಟ್ಸ್ ಹಾಗೂ ವೈವಿಧ್ಯಮಯ ಮಾಂಸಾಹಾರವನ್ನುಸೇವಿಸಲು ಆಗಮಿಸುತ್ತಿದ್ದಾರೆ ಎನ್ನುವುದು ಅಚ್ಚರಿಯ ಸಂಗತಿಯೇ. ಕೋಲಾರ ಜಿಲ್ಲೆಗೆ ಆಂಧ್ರಪ್ರದೇಶ, ಕೇರಳ, ತಮಿಳುನಾಡು ಹಾಗೂ ಮಾಹಾರಾಷ್ಟ್ರದಿಂದ ಹೆಚ್ಚು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಪ್ರವಾಸೋದ್ಯಮಕ್ಕೆ ಕೋಲಾರ ಜಿಲ್ಲೆಯಲ್ಲಿ ವಿಫುಲ ಅವಕಾಶವಿದೆ. ಹಾಗೆಯೇ ಪ್ರವಾಸೋದ್ಯಮ ವಿಸ್ತರಣೆಯಾದರೆ, ಪ್ರತಿ
ಪ್ರವಾಸಿ ತಾಣಕ್ಕೂ ಒಬ್ಬ ಪ್ರವಾಸಿ ಮಾರ್ಗದರ್ಶಿ ನೇಮಕಗೊಂಡು ಉದ್ಯೋಗಾವಕಾಶಗಳು ಹೆಚ್ಚುತ್ತದೆ. ಆದರೆ, ಸೌಲಭ್ಯ ಹಾಗೂ ಗೌರವ ಧನ ಕಡಿಮೆ ಎಂಬ ಕಾರಣಕ್ಕಾಗಿ ಮಾರ್ಗದ ರ್ಶಿಗಳಾಗಲು ಹೆಚ್ಚಿನ ಯುವ ಪೀಳಿಗೆ ಇಷ್ಟ ಪಡುತ್ತಿಲ್ಲ. ಸರ್ಕಾರ ಮತ್ತು ಜಿಲ್ಲಾಡಳಿತ ಪ್ರವಾಸೋದ್ಯಮವನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿ ಪ್ರವಾಸಿ ಮಾರ್ಗದರ್ಶಿಗಳನ್ನು ನೇಮಕ ಮಾಡಿಕೊಂಡು ಅವರಿಗೆ ಸೌಲಭ್ಯ ಸಂಭಾವನೆ ಯನ್ನು ಹೆಚ್ಚಿಸಲು ಮುಂದಾಗಬೇಕಿದೆ. ರೇಟಿಂಗ್ಸ್ ಆಧಾರದ ಮೇಲೆ ಮಾರ್ಗದರ್ಶಿಗಳ ಸೇವೆ ವಿಸ್ತರಣೆ
ಪ್ರವಾಸಿ ಮಾರ್ಗದರ್ಶಿಗಳಿಗೆ ಆ ರಂಭದಲ್ಲಿ ಕೇವಲ 2 ಸಾವಿರ, ಆ ನಂತರ 3 ಸಾವಿರ ಈಗ 5 ಸಾವಿರ ರೂ . ಗೌರವಧನ ನೀಡು ತ್ತಾರೆ. ಈ ಬಜೆಟ್‌ನಲ್ಲಿ ಇದು 7 ಸಾವಿರಕ್ಕೇರಬ ಹುದು ಎಂಬ ನಿರೀಕ್ಷೆ ಇದೆ. ಪ್ರತ್ಯೇಕ ಸಮವಸ್ತ್ರ, ಗುರುತಿನ ಚೀಟಿ, ಶೂ ಮ ತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇವರ ಮೊಬೈಲ್ ಸಂಖ್ಯೆಯನ್ನು ಪ್ರವಾಸೋದ್ಯಮ ಇ ಲಾಖೆ ವೆಬ್ ಸೈಟ್‌ನಲ್ಲಿ ಅಳವಡಿಸಲಾಗುತ್ತದೆ. ಪ್ರವಾಸಿಗರು ನೇರವಾಗಿ ಇವರನ್ನು ಸಂಪರ್ಕಿಸಿ ಮಾರ್ಗದರ್ಶಿ ಸೇವೆಯನ್ನು ಪಡೆದುಕೊಳ್ಳಬ ಹುದು. ಪ್ರವಾಸಿ ತಾಣಗಳು ಮಾತ್ರವಲ್ಲದೆ, ಕೈ ಗಾರಿಕೋದ್ಯಮ, ಫುಡ್ ಟೂರಿಸಂ, ರಿಯಲ್ ಎ ಸ್ಟೇಟ್ ಟೂರಿಸಂ ಇತ್ಯಾದಿಗಳ ಬಗ್ಗೆಯೂ ಇವ ರಿಗೆ ಮಾಹಿತಿ ಇರುತ್ತದೆ. ಸೇವೆ ಪಡೆದ ಪ್ರವಾಸಿ ಗರು ನೀಡುವ ವೆಬ್ ರೇಟಿಂಗ್ಸ್ ಆಧಾರದ ಮೇಲೆ ಇವರ ಸೇವೆ ವಿಸ್ತರಣೆಯಾಗುತ್ತದೆ. ಹಾಗೆಯೇ ಪ್ರ ವಾಸಿಗರು ನೀಡುವ ಸಂಭಾವನೆಯೂ ಹೆಚ್ಚಾ ಗುತ್ತದೆ. ಮಾ ರ್ಗದರ್ಶಿಗಳ ಆದಾಯವೂ ಹೆಚ್ಚುತ್ತದೆ. ಜಿಲ್ಲೆಯಲ್ಲಿ ನಾನು ಸೇರಿದಂತೆ ಮೂವರು ಪ್ರ ವಾಸಿ ಮಾರ್ಗದರ್ಶಿಗಳಿದ್ದೇವೆ. ಹೊರ ಜಿಲ್ಲೆಗಳಲ್ಲಿ ಹೆಚ್ಚು ಅವಕಾಶ ಆದಾಯ
ಇದ್ದರೂ ತವರು ಕೋಲಾರ ಜಿಲ್ಲೆ ಮೇಲಿನ ಪ್ರೀತಿಯಿಂದ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಕೋಲಾರ ಜಿಲ್ಲೆಯ ಪ್ರವಾಸಿ ತಾಣಗಳಿಗೂ ಹೆ ಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಶ್ರಮಿಸು ತ್ತಿದ್ದೇವೆ.
●ಆರ್. ಚಂದ್ರಶೇಖರ್, ಜಿಲ್ಲಾ ಪ್ರವಾಸಿ
ಮಾರ್ಗದರ್ಶಿ, ರಾಜ್ಯ ಪ್ರವಾಸಿ ಸಂಪನ್ಮೂಲ ವ್ಯಕ್ತಿ ಕೋಲಾರ ■ ಕೆ.ಎಸ್.ಗಣೇಶ್