ಕೋಲಾರ: ಜಿಲ್ಲೆಯಲ್ಲಿ ಮತ್ತೆ ಮೂರು ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಈವರೆಗೂ ಪತ್ತೆಯಾದ ಪ್ರಕರಣಗಳ ಸಂಖ್ಯೆ 23ಕ್ಕೇರಿದೆ.ಈಗಾಗಲೇ ಮುಳಬಾಗಿಲು ತಾಲೂಕಿನ ಐವರು ಪಾಸಿಟಿವ್ ವ್ಯಕ್ತಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯೊಂದಿದ್ದು, ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 19 ಆಗಿದೆ.
ಕೋಲಾರದ ಗೌರಿಪೇಟೆಯಲ್ಲಿ 45 ವರ್ಷದ ವ್ಯಕ್ತಿಗೆ ಪಿ.3007 ಸೋಂಕು ಕಾಣಿಸಿಕೊಂಡಿದೆ. ಈತ ಅತಿಯಾದ ತಂಬಾಕು ಸೇವನೆಯಿಂದಾಗಿ ಚಿಕಿತ್ಸೆಗೆ ಒಳಗಾಗಿದ್ದ ಎನ್ನಲಾಗಿದೆ. ¤ ಬೆಂಗಳೂರಿನಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಅಲ್ಲಿ ಶಸ್ತ್ರಚಿಕಿತ್ಸೆಗೂ ಮುನ್ನಾ ಕೋವಿಡ್ 19 ಪರೀಕ್ಷೆ ಕಡ್ಡಾಯ ವೆಂದು ವೈದ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಈತ ಪರೀಕ್ಷೆಗೆ ಒಳಗಾಗಿದ್ದು, ಕೋವಿಡ್ 19 ಪತ್ತೆಯಾಗಿದೆ.
ಈತನ ಪ್ರವಾಸ ಇತಿಹಾಸವನ್ನು ಆರೋಗ್ಯ ಸಿಬ್ಬಂದಿ ಜಾಲಾಡುತ್ತಿದ್ದಾರೆ. ಮಾಹಿತಿ ಸಿಕ್ಕ ಕೂಡಲೇ ನಗರಸಭೆ ಆಯುಕ್ತ ಶ್ರೀಕಾಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ ಕುಮರ್ ಮತ್ತಿತರರು ಭೇಟಿ ನೀಡಿದ್ದರು.ನಗರದ ಗೌರಿಪೇಟೆ, ಕುರುಬರಪೇಟೆ ವ್ಯಾಪ್ತಿಯ ಆತನ ನಿವಾಸದ ಸುತ್ತ 100 ಮೀಟರ್ ವ್ಯಾಪ್ತಿಯನ್ನು ಕಂಟೇನ್‌ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದ್ದು, ಬ್ಯಾರಿಕೇಡ್ ಹಾಕಿ ವಾಹನ, ಜನಸಂಚಾರ ತಡೆಯಲಾಗಿದೆ.
ಸೋಂಕಿತ ವ್ಯಕ್ತಿಯನ್ನು ಕೊವಿಡ್ ಜಿಲ್ಲಾ ಸ್ಪತ್ರೆ ಯಲ್ಲಿ ದಾಖಲಿಸಲಾಗಿದ್ದು, ಈತ ನೊಂದಿಗೆ 50ಕ್ಕೂ ಹೆಚ್ಚು ಮಂದಿ ಪ್ರಾಥ ಮಿಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಸೋಂಕಿತನ ಕುಟುಂಬ ಸದಸ್ಯರು, ಕುರುಬರಪೇಟೆಯ ಇಬ್ಬರು ಸ್ನೇಹಿತರು, ಈತನನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದ ಕಾರು ಚಾಲಕನನ್ನು ಕ್ವಾರಂಟೆ„ನ್‌ಗೆ ಕಳುಹಿಸಲಾಗಿದೆ.
ಈ ಪೈಕಿ ಯಾರಿಗೆ ಪಾಸಿಟಿವ್ ಬರಬಹುದು ಎಂಬುದು ಆತಂಕವನ್ನುಂಟು ಮಾಡಿದೆ. ಬಂಗಾರಪೇಟೆಯಲ್ಲಿ ಭಾನುವಾರ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಜಿಲ್ಲಾ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಬೇಕಾಗಿದೆ.