ಕೆಜಿಎಫ್: ಗೌಡನಕೆರೆ, ಪಾರಾಂಡಹಳ್ಳಿ ಕೆರೆ, ಚಿನ್ನದ ಗಣಿಯ ಜಾಗಗಳನ್ನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮಕೈಗೊಂಡು, ಕೆರೆ ಅಭಿವೃದ್ಧಿಪಡಿಸಬೇಕು ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು. ನಗರಸಭೆಯ ಪ್ರಥಮ ಅಧಿವೇಶನದಲ್ಲಿ ಮಾತನಾಡಿ, ಕೆರೆ ಅಭಿವೃದ್ಧಿಗೆ ಯಾರ ಮುಲಾಜು ಬೇಡ. ಕೆರೆಯಲ್ಲಿ ರಸ್ತೆ, ಒತ್ತುವರಿ ಮಾಡಿರುವವರ ವಿರುದ್ಧಕ್ರಮಕೈಗೊಳ್ಳಬೇಕು. ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಾಣ ಮಾಡಿಕೊಂಡು ಸರ್ಕಾರದ ನಿಯಮಾವಳಿ ಪ್ರಕಾರ ಲೇಔಟ್ ಮಾಡದೇ ರಿಯಲ್ ಎಸ್ಟೇಟ್ ನವರು ದುಡ್ಡು ಮಾಡಿಕೊಂಡು ಹೋಗುತ್ತಾರೆ.
ನಂತರ ಅಭಿವೃದ್ಧಿಯಾಗದ ಈ ಪ್ರದೇಶಗಳ ಅಭಿವೃದ್ಧಿ ನಗರಸಭೆ ತಲೆ ಮೇಲೆ ಬೀಳುತ್ತದೆ. ಇಂತಹವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ತಹಶೀಲ್ದಾರ್ ಸುಜಾತ ಮತ್ತು ಆಯುಕ್ತೆ ಸರ್ವರ್ ಮರ್ಚೆಂಟ್ ಅವರಿಗೆ ಹೇಳಿದರು.
ಕ್ರಮಕ್ಕೆ ಸೂಚನೆ: ಬೇರೆ ಬೇರೆ ಸರ್ವೆ ನಂಬರ್ ಗಳನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ಬಿಜಿಎಂಎಲ್ ಜಮೀನು ಮಾಡಿಕೊಂಡವರ ವಿರುದ್ಧ ಹಾಗೂ ರಾಜಕಾಲುವೆ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ಸಭೆ ಶೀಘ್ರ: ಅಮೃತ ಸಿಟಿ ಯೋಜನೆಯಲ್ಲಿ ಯೋಜಿತವಾಗಿ ಕೆಲಸ ಆಗಿಲ್ಲ. ಕೇಂದ್ರ ಸರ್ಕಾರ ಅಮೃತ ಸಿಟಿಗೆ 135 ಕೋಟಿ ರೂ.ಬಿಡುಗಡೆ ಮಾಡಿದೆ. ಆದರೆ ಇಲ್ಲಿ ನೋಡಿದರೆ ಕೆಲಸವೇ ಆಗಿಲ್ಲ ಎಂಬ ರೀತಿಯಲ್ಲಿದೆ. ಜಿಲ್ಲಾಧಿಕಾರಿಗಳು ಮತ್ತು ಅಮೃತಸಿಟಿ ಯೋಜನೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಒಳಗೊಂಡ ಸಭೆ ಶೀಘ್ರದಲ್ಲಿಯೇ ಕರೆಯಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಶಿಡ್ಲಘಟ್ಟ: ಕಂದಾಯ ಇಲಾಖೆಯಲ್ಲಿಸಿಬ್ಬಂದಿ ಕೊರತೆ : ಕೆಲಸಕಾರ್ಯಗಳಿಗೆ ಜನಸಾಮಾನ್ಯರ ಪರದಾಟ
ಎಂ.ಜಿ.ಮಾರುಕಟ್ಟೆ ಮರು ಟೆಂಡರ್ ಪ್ರಕ್ರಿಯೆ ಕೊರೊನಾದಿಂದ ಸ್ಥಗಿತಗೊಳಿಸಲಾಗಿತ್ತು. ಆದರೆ ಎಲ್ಲಾ ಸದಸ್ಯರು ಒಪ್ಪಿದರೆ
ಟೆಂಡರ್ ಮಾಡಬೇಕು. ಕಾರ್ಪೊರೇಟ್ ಕಂಪನಿಗಳು ಸಹ ಈ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ
ಪ್ರೇರೇಪಿಸಬೇಕು. ನಗರಸಭೆ ಆಯುಕ್ತೆ ಕೋಲಾರದ ಆಯುಕ್ತ ಶ್ರೀಕಾಂತ್ ಅವರನ್ನು ನೋಡಿ ಕಲಿಯಬೇಕು ಎಂದರು.
ಮಳೆ ನೀರಿಗಾಗಿ ನಡೆಸುತ್ತಿರುವ ಬೃಹತ್ ಚರಂಡಿ ಪಕ್ಕದಲ್ಲಿ ಲಾರಿ ಹೋಗುವಷ್ಟು ಜಾಗ ಬಿಡಬೇಕು. ಅಲ್ಲಲ್ಲಿ ಮಧ್ಯೆ ಸ್ಲಾಬ್ ಹಾಕಬೇಕು. ಫುಟ್‌ಪಾತ್ ಪಕ್ಕದಲ್ಲಿ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಬೇಕು. ಇವನ್ನೆಲ್ಲಾಮಾಡದಿದ್ದರೆ ನಗರಸಭೆಆಯುಕ್ತರು ವರದಿ ನೀಡಬೇಕು ಎಂದರು.
ಸದಸ್ಯ ತಂಗರಾಜ್‌ಮಾತನಾಡಿದರು.ಉಪಾಧ್ಯಕ್ಷೆ ಸರ್ವರ್ ಮರ್ಚೆಂಟ್, ತಹಶೀಲ್ದಾರ್ ಕೆ.ಎನ್.ಸುಜಾತ, ಉಪಾಧ್ಯಕ್ಷೆ ದೇವಿ ಗಣೇಶ್, ಪರಿಸರ ಅಭಿಯಂತರ ರವೀಂದ್ರ, ಜಯರಾಂ, ಶಶಿಕುಮಾರ್ ಇದ್ದರು.