Advertisement
ಚುನಾವಣಾ ಅಧಿಸೂಚನೆ ಮಾ.19ರಂದು ಹೊರಡಿಸುತ್ತಿದ್ದು, 26 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ, 27ರಂದು ಪರಿಶೀಲನೆ, 29 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆದಿನ, ಏ.18ರಂದು ಮತದಾನವಾಗಲಿದ್ದು, ಮೇ 23ಕ್ಕೆ ಮತ ಏಣಿಕೆ ನಡೆಯಲಿದೆ. 27ಕ್ಕೆ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುತ್ತದೆ ಎಂದು ತಿಳಿಸಿದರು.
Related Articles
Advertisement
ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ವಿವಿಧ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ. ಜಾಹೀರಾತು, ಸಾಮಾಜಿಕ ಜಾಲತಾಣ ಮೇಲೂ ಎಂಸಿಎಂಸಿ ಟೀಂ ನಿಗಾವಹಿಸಬೇಕು. ಅಭ್ಯರ್ಥಿಗಳು ಚುನಾವಣಾ ಪ್ರಚಾರ ಅಥವಾ ಸಭೆ ನಡೆಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಲ್ಲವಾದರೆ ಆಯೋಜಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಯಾವುದೇ ರಾಜಕೀಯ ಪಕ್ಷ ಚುನಾವಣೆ ಸಂಬಂಧ ಸಭೆ, ಕಾರ್ಯಕ್ರಮ ನಡೆಸಿದರೆ ಮುಂಚೆಯೇ ಚುನಾವಣಾ ಕಚೇರಿಯಿಂದ ಅನುಮತಿ ಪಡೆದುಕೊಂಡಿರಬೇಕು. ವೀಡಿಯೋ ಸರ್ವಲೆನ್ಸ್ ತಂಡದವರು ಇಡೀ ಕಾರ್ಯಕ್ರಮವನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿರುವ ವೀಡಿಯೋ ವ್ಯೂವಿಂಗ್ ಟೀಂ ಎಲ್ಲಾ ಕ್ಲಿಪ್‌ಗ್ಳನ್ನು ವೀಕ್ಷಿಸಿ ಚುನಾವಣಾ ಅಕ್ರಮಗಳ ಬಗ್ಗೆ ನಿಗಾವಹಿಸುತ್ತಾರೆ. ಅಕ್ರಮ ಕಂಡುಬಂದರೆ ದೂರು ದಾಖಲಿಸಲಾಗುವುದು ಎಂದು ಹೇಳಿದರು.
ಚುನಾವಣಾ ಕಾರ್ಯ ನಡೆಸಲು ಅಗತ್ಯವಿರುವ 10,079 ಸಿಬ್ಬಂದಿಯನ್ನೂ ನಿಯೋಜಿಸಲಾಗಿದ್ದು, ಸದಾಚಾರ ಸಂಹಿತೆ ನಿಗಾವಹಿಸಲು ತಂಡಗಳ ರಚನೆ, ಫ್ಲೈಯಿಂಗ್ ತನಿಖಾ ತಂಡ, ಸ್ಟ್ಯಾಟಿಕ್ ಸರ್ವೇಯಲನ್ಸ್, ವಿಎಸ್‌ಟಿ, ವಿವಿಟಿ, ಎಟಿ ತಂಡಗಳನ್ನು ರಚಿಸಲಾಗಿದೆ. ಹಣ ಪಾವತಿ ಸುದ್ದಿ ಬಂದರೆ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಕೋರಿದರು.
ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ಜಿ.ಜಗದೀಶ್ ಮಾತನಾಡಿ, ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು ವಾಹನಗಳ ತನಿಖೆ ನಡೆಸುವಾಗ ಸಾರ್ವಜನಿಕರು ಸಹಕರಿಸಬೇಕು. ಯಾವುದೇ ಅಕ್ರಮಗಳು ಗಮನಕ್ಕೆ ಬಂದು ನಮಗೆ ತಿಳಿಸಿದರೆ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.
ರಚಿಸಲಾದ ತಂಡಗಳು: 186 ಸೆಕ್ಟರ್ ಅಧಿಕಾರಿಗಳು ಹಾಗೂ 120 ಇವಿಎಂ ಮಾಸ್ಟರ್ ಟ್ರೈನರ್‌ಗಳನ್ನು ನೇಮಿಸಲಾಗಿದೆ. ಲೋಕಸಭಾ ಕ್ಷೇತ್ರಕ್ಕೆ ಒಟ್ಟು 42 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ. 64 ಸ್ಟಾಟಿಕ್ ಸವೈಲನ್ಸ್ ತಂಡಗಳನ್ನು, 22 ವೀಡಿಯೋ ಸವೈìಲನ್ಸ್ ಟೀಮ್‌ಗಳನ್ನು 8 ವೀಡಿಯೋ ವೀವಿಂಗ್ ಟೀಮ್‌ಗಳು ಹಾಗೂ 8 ಅಕೌಂಟಿಂಗ್ ಟೀಮ್‌ಗಳನ್ನು ರಚಿಸಲಾಗಿದೆ.
ಈ ತಂಡಗಳು ಮಾದರಿ ನೀತಿ ಸಂಹಿತಿ ಉಲ್ಲಂಘನೆ ಕುರಿತು ನಿಗಾ ವಹಿಸಲಿವೆ ಎಂದು ತಿಳಿಸಿದರು. ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋಲಾರ ಡಾ.ರೋಹಿಣಿ ಕಟೋಚ್ ಸಪೆಟ್, ಕೆಜಿಎಫ್ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಸಹಾಯಕ ಚುನಾವಣಾಧಿಕಾರಿ ಮಂಜುಳಾ ಹಾಜರಿದ್ದರು.
ಚುನಾವಣಾ ಸಂಬಂಧಿತ ದೂರುಗಳಿಗಾಗಿಕಂಟ್ರೋಲ್ ರೂಂ.ನ ಟ್ರೋಲ್ ಫ್ರೀ ಸಂಖ್ಯೆ
-ಜಿಲ್ಲಾಧಿಕಾರಿ ಕಚೇರಿ 1950, 08152-243668
-ಶಿಡ್ಲಘಟ್ಟ 08158-256275
-ಚಿಂತಾಮಣಿ 08154-252164
-ಶ್ರೀನಿವಾಸಪುರ 9964726608
-ಮುಳಬಾಗಿಲು 9964797877
-ಕೆ.ಜಿ.ಎಫ್ 831012294
-ಬಂಗಾರಪೇಟೆ 98444182902
-ಕೋಲಾರ 7676496447
-ಮಾಲೂರು 8123020297 ವಿಧಾನಸಭಾ ಕ್ಷೇತ್ರ ಪುರುಷ ಮಹಿಳಾ ಒಟ್ಟು ಮತದಾರ
ಕೋಲಾರ 112391 112316 224707
ಶ್ರೀನಿವಾಸಪುರ 103071 101818 204889
ಬಂಗಾರಪೇಟೆ 96989 95584 192573
ಮಾಲೂರು 91415 89998 181413
ಕೆಜಿಎಫ್ 95347 94892 190239
ಮುಳಬಾಗಿಲು 103093 102274 205367
ಚಿಂತಾಮಣಿ 107185 107665 214850
ಶಿಡ್ಲಘಟ್ಟ 99840 98349 198189
ಒಟ್ಟು 809331 802869 1612227