ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ದರೋಡೆಕೋರರ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ಇದು 7 ರಿಂದ 8 ಮಂದಿ ಮುಸುಕು ಧಾರಿಗಳು ನಡೆಸಿರುವ ಕೃತ್ಯವಾಗಿದ್ದು ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದರು.
ದರೋಡೆ ಸಂದರ್ಭ ಚೂರಿ ಇರಿತಕ್ಕೊಳಗಾದ ಗೀತಾ ಶೆಟ್ಟಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಉಪ್ಪಿನಂಗಡಿ ಠಾಣೆಯ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ 2ತಂಡಗಳ ರಚನೆ ಮಾಡಲಾಗಿದೆ ಎಂದಿದ್ದಾರೆ.
ಕೊಕ್ಕಡದಲ್ಲಿ ನಡೆದಿರುವ ದರೋಡೆ ಪ್ರಕರಣ ಜೈಪುರ ಹಾಗು ಕಾರ್ಕಳದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಾಮ್ಯತೆ ಹೊಂದಿದ್ದು ಅದೇ ತಂಡ ನಡೆಸಿರುವ ಶಂಕೆ ಇದೆ ಎನ್ನಲಾಗಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಹೇಳಿದ್ದಾರೆ
ಇದನ್ನೂ ಓದಿ:ಕೋವಿಡ್ ಹೊಸ ಪ್ರಭೇದ..ಎಚ್ಚರ ಅಗತ್ಯ; ರಾಜ್ಯದಲ್ಲಿ ಸದ್ಯ ಲಾಕ್ ಡೌನ್ ಇಲ್ಲ: ಸಚಿವ ಸುಧಾಕರ್