ಉಪ್ಪಿನಂಗಡಿ: ಕೊಕ್ಕಡದಿಂದ ಗೋಳಿತೊಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಾರ್ವಜನಿಕರ ದೂರಿನ ಮೇರೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ರಾಜಾರಾಮ್, ಜಿಲ್ಲಾ ಪಂಚಾಯತ್ ರಸ್ತೆಯಾಗಿದ್ದ ಈ ರಸ್ತೆ ಈಗ ಲೋಕೋಪಯೋಗಿ ಇಲಾಖೆ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಸದ್ರಿ ರಸ್ತೆಯಲ್ಲಿ ಗೋಳಿತೊಟ್ಟಿನಿಂದ 1.6 ಕಿ.ಮೀ.ರಸ್ತೆಯ ಕಾಂಕ್ರೀಟ್‌ಗೆ 2 ಕೋಟಿ ರೂಪಾಯಿಯ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಸಚಿವ ಎಸ್. ಅಂಗಾರ ಅವರ ಸೂಚನೆ ಮೇರೆಗೆ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದು ಹೇಳಿದರು.
ಗೋಳಿತ್ತೂಟ್ಟು-ಆಲಂತಾಯ ರಸ್ತೆ ಯಲ್ಲಿ ಗೋಳಿತೊಟ್ಟಿನಿಂದ 210 ಮೀ. ರಸ್ತೆ ಮರು ಡಾಮರು ಕಾಮಗಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ:ಹೊಸ ಶಾಲಾ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ರಸ್ತೆಯನ್ನು ಸಂಚಾರ ಯೋಗ್ಯ ಮಾಡ ದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸು ವುದಾಗಿಯೂ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಈ ರಸ್ತೆಯ ಅವ್ಯ ವಸ್ಥೆಯ ಕುರಿತು ಉದಯವಾಣಿ ಸುದಿನ ಪ್ರಕಟಿಸಿತ್ತು. ಪ್ರಮುಖರಾದ ಬಾಲಕೃಷ್ಣ ಬಾಣಜಾಲು, ಕುಶಾಲಪ್ಪ ಗೌಡ ಅನಿಲ, ತೇಜಸ್ವಿನಿ ಶೇಖರ ಗೌಡ ಕಟ್ಟುಪುಣಿ, ಜನಾರ್ದನ ಗೌಡ ಪಟೇರಿ, ಜೀವಿತಾ ಚಂದ್ರಶೇಖರ, ಬಾಬು ಪೂಜಾರಿ, ಬಾಲಕೃಷ್ಣ ಅಲೆಕ್ಕಿ, ಪ್ರಸಾದ್ ಕೆ.ಪಿ.ಸುಲ್ತಾಜೆ, ಕಮಲಾಕ್ಷ ಪಂಡಿತ್, ಗಣೇಶ್ ಬೊಟ್ಟಿಮಜಲು, ಚಂದ್ರಶೇಖರ ಪೆರಣ, ಬೈಜು ಮತ್ತಿತರರು ಉಪಸ್ಥಿತರಿದ್ದರು.