ಪುನರ್ಪುಳಿ/ಕೋಕಂ-5-6
ತೆಂಗಿನ ತುರಿ- ಅರ್ಧ ಕಪ್
ಹಸಿ ಮೆಣಸು 1 ಅಥವಾ 2
ಮಜ್ಜಿಗೆ- 2 ಕಪ್,
ಬೆಲ್ಲ-1 ಚಮಚ
ಜೀರಿಗೆ-1 ಚಮಚ
ಸಾಸಿವೆ-1 ಚಮಚ
ಎಣ್ಣೆ-1 ಚಮಚ
ಉಪ್ಪು -ರುಚಿಗೆ ತಕ್ಕಷ್ಟು
Advertisement
ಮಾಡುವ ವಿಧಾನಪುನರ್ಪುಳಿ (ಕೋಕಂ) ಅನ್ನು ನೀರಿನಲ್ಲಿ ಸುಮಾರು ಹತ್ತು ನಿಮಿಷ ಕಾಲ ನೆನೆಸಿ. ಇದನ್ನು ತೆಂಗಿನ ತುರಿ, ಹಸಿ ಮೆಣಸಿನ ಜತೆ ರುಬ್ಬಿ. ಇದಕ್ಕೆ ಎರಡು ಲೋಟ ಮಜ್ಜಿಗೆ, ಬೆಲ್ಲ, ಉಪ್ಪು ಹಾಕಿ ಕಲಸಿ. ಎಣ್ಣೆ, ಜೀರಿಗೆ, ಸಾಸಿವೆ ಹಾಕಿ ಒಗ್ಗರಣೆ ಕೊಡಿ. ಬಿಸಿಲಿನಿಂದ ತೀರಾ ದಣಿವಾಗಿದ್ದರೆ, ಅಥವಾ ಪಿತ್ತ ಶಮನಕ್ಕೆ, ಕರಿದ ಪದಾರ್ಥ ಸೇವಿಸಿ ಹೊಟ್ಟೆ ಕೆಟ್ಟಿದ್ದರೆ, ಈ ತಂಬುಳಿ ಪ್ರಯೋಜನಕಾರಿಯಾಗುತ್ತದೆ.
ನೆಲ್ಲಿಕಾಯಿ ತಂಬುಳಿ
ಬೇಕಾಗುವ ಸಾಮಗ್ರಿಗಳು:
ಒಣಗಿದ ನೆಲ್ಲಿಕಾಯಿ-7, 8
ಕಾಳು ಮೆಣಸು-8, 10
ಜೀರಿಗೆ-ಅರ್ಧ ಚಮಚ
ಸಾಸಿವೆ ಕಾಳು-ಅರ್ಧ ಚಮಚ
ತುಪ್ಪ-2 ಚಮಚ
ಮಜ್ಜಿಗೆ-1ಲೋಟ
ಬೆಲ್ಲ -ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು ಮಾಡುವ ವಿಧಾನ
ಒಣಗಿದ ನೆಲ್ಲಿಕಾಯಿಯನ್ನು 2-3 ಗಂಟೆ ಕಾಲ ನೀರಲ್ಲಿ ನೆನೆಸಿ ನಂತರ ನೆನೆದ ನೆಲ್ಲಿಕಾಯಿಗೆ ಜೀರಿಗೆ, ಕಾಳು ಮೆಣಸು ಸೇರಿಸಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ಹಾಕಿ 2 ಲೋಟ ನೀರು, ಒಂದು ಲೋಟ ಮಜ್ಜಿಗೆ, ಸ್ವಲ್ಪ ಬೆಲ್ಲ, ಬೇಕಾದಷ್ಟು ಉಪ್ಪು ಸೇರಿಸಿ. ತುಪ್ಪ, ಸಾಸಿವೆ ಕಾಳು ಹಾಕಿ ಒಗ್ಗರಣೆ ಮಾಡಿದರೆ ನೆಲ್ಲಿಕಾಯಿ ತಂಬುಳಿ ಸವಿಯಲು ಸಿದ್ಧ.
Related Articles
Advertisement