Advertisement
ನಾಲ್ಕು ಹಂತಗಳಲ್ಲಿ ನಿರ್ಮಾಣಗೊಳ್ಳಲಿರುವ ಕಾಲೇಜಿನ ಪ್ರಥಮ ಹಂತದ ಕಾಮಗಾರಿಯು 136 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡು ಈಗಾಗಲೇ ಕಟ್ಟಡ ಉದ್ಘಾಟನೆಗೊಂಡಿದೆ. ಅದರಲ್ಲಿ ಕಾಲೇಜು ಕಟ್ಟಡ, ಬಾಲಕರ, ಬಾಲಕಿಯರ ಹಾಸ್ಟೆಲ್, ಅತಿಥಿ ಗೃಹ, ಪಶು ವೈದ್ಯಕೀಯ ಚಿಕಿತ್ಸಾ ಸಂಕೀರ್ಣ ಕಟ್ಟಡಗಳ ನಿರ್ಮಾಣವಾಗಿದೆ.
247 ಎಕರೆ ಪ್ರದೇಶದಲ್ಲಿ ಕಾರ್ಯಾಚರಿಸಲಿರುವ ಈ ಪಶು ವೈದ್ಯಕೀಯ ಕಾಲೇಜಿಗೆ ಎರಡನೇ ಹಂತದಲ್ಲಿ ಗ್ರಂಥಾಲಯ, ಸಭಾಂಗಣ, ಕಾಂಕ್ರಿಟ್ ರಸ್ತೆ, ಆವರಣ ಗೋಡೆ, ಸಿಬಂದಿ ವಸತಿಗೃಹ, ವಿದ್ಯಾರ್ಥಿ ಕಲಿಕಾ ಸಭಾಂಗಣ, ಹಾಸ್ಟೆಲ್‌ಗಳು, ಕುರಿ, ಮೇಕೆ , ಹಸು ಸಾಕಾಣಿಕೆಯ ಕಟ್ಟಡ ಮುಂತಾದವು ನಿರ್ಮಾಣಗೊಳ್ಳಲಿವೆ. ಉಪಕರಣ, ಪ್ರಯೋಗಾಲಯಗಳ ಸ್ಥಾಪನೆ ಮತ್ತು ಬೋಧಕರ ನೇಮಕಾತಿ ಮೂರು ಮತ್ತು ನಾಲ್ಕನೇ ಹಂತಗಳಲ್ಲಿ ನಡೆಯುತ್ತದೆ. ಅದಕ್ಕಾಗಿ 245 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸರಕಾರ ಮಟ್ಟದಲ್ಲಿ ಅನುಮೊದನೆಗೊಂಡು ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ. ಸಿಬಂದಿ ಹುದ್ದೆ ಮಂಜೂರು
ಕಾಲೇಜಿಗೆ ಬೋಧಕ ಹಾಗೂ ಬೋಧಕೇತರ ಸಿಬಂದಿಗಳ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿದ್ದು, ಒಟ್ಟು 175 ಹುದ್ದೆಗಳ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಆ ಪೈಕಿ ಪ್ರಥಮ ವರ್ಷದ ತರಗತಿಗಳನ್ನು ಆರಂಭಿಸಲು ಅನುಕೂಲವಾಗುವಂತೆ 25 ಮಂದಿ ಬೋಧಕರು, 15 ಮಂದಿ ಬೋಧಕೇತರರು ಹಾಗೂ 17 ಅಧಿಕಾರಿ ಹುದ್ದೆಗಳು ಸೇರಿ ಒಟ್ಟು 57 ಹುದ್ದೆಗಳನ್ನು ಸರಕಾರವು ಪ್ರಥಮ ಹಂತದಲ್ಲಿ ಮಂಜೂರುಗೊಳಿಸಿದೆ. ಹುದ್ದೆಗಳು ಭರ್ತಿಯಾದ ಬಳಿಕ ದಿಲ್ಲಿಯಲ್ಲಿರುವ ಭಾರತೀಯ ಪಶು ವೈದ್ಯಕೀಯ ಪರಿಷತ್ (ವಿಸಿಐ) ನಿಗದಿಪಡಿಸಿದ ಎಲ್ಲ ಅಗತ್ಯತೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಪಾಸಣೆ ನಡೆಸಿ ಖಚಿತ ಪಡಿಸಿಕೊಂಡ ಬಳಿಕವಷ್ಟೇ ಕಾಲೇಜಿಗೆ ಕೋರ್ಸ್‌ಗಳನ್ನು ನಡೆಸಲು ಹಾಗೂ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅನುಮತಿ ದೊರೆಯಲಿದೆ.
Related Articles
ಕೊಯಿಲದಲ್ಲಿ ಆರಂಭಗೊಳ್ಳಲಿರುವ ಕಾಲೇಜು ಕರ್ನಾಟಕದ ಏಳನೇ ಪಶು ವೈದ್ಯಕೀಯ ಕಾಲೇಜಾಗಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ 2012-13ರ ಬಜೆಟ್‌ನಲ್ಲಿ ಕಾಲೇಜನ್ನು ಘೋಷಿಸಿದ್ದರು. ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿಗೆ 2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ 2018ರ ವೇಳೆಗೆ ಪೂರ್ಣಗೊಳ್ಳಬೇಕಿದ್ದ ಮೊದಲ ಹಂತದ ಕಟ್ಟಡದ ಕಾಮಗಾರಿಯು 5 ವರ್ಷಗಳ ವಿಳಂಬದ ಬಳಿಕ 2023ರ ಎಪ್ರಿಲ್ ತಿಂಗಳಲ್ಲಿ ಪೂರ್ಣಗೊಂಡು ಉದ್ಘಾಟನೆಯಾಗಿತ್ತು.
Advertisement
ಕಳಪೆ ಕಾಮಗಾರಿಯ ಆರೋಪಮೊದಲ ಹಂತದ ಕಟ್ಟಡದ ಕಾಮಗಾರಿ ಕಳಪೆಯಾಗಿದೆ ಎನ್ನುವುದು ಸ್ಥಳೀಯರ ದೂರು. ಆಮೆಗತಿಯಲ್ಲಿ ಕಾಮಗಾರಿ ನಡೆದಿದ್ದು, ಕಾಂಕ್ರೀಟ್ ಕಾಮಗಾರಿಯ ಸಂದರ್ಭದಲ್ಲಿ ಅಗತ್ಯ ಅನುಷ್ಠಾನ ಕ್ರಮಗಳನ್ನು ಕೈಗೊಳ್ಳದೇ ಇದ್ದುದರಿಂದ ಕಾಂಕ್ರೀಟ್ ಛಾವಣಿಗಳು ಸೋರುತ್ತಿದ್ದವು. ಬಳಿಕ ಅದರ ಮೇಲೆ ಶೀಟ್ ಮಾದರಿಯ ಬೇರೊಂದು ಪದರ ಹಾಕಲಾಗಿದೆ. ಆದುದರಿಂದ ಕಟ್ಟಡವನ್ನು ಹಸ್ತಾಂತರ ಪಡೆಯುವುದಕ್ಕೆ ಮೊದಲು ಗುಣಮಟ್ಟದ ಪರೀಕ್ಷೆ ನಡೆಯಬೇಕು ಎಂದು ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದಾರೆ. ಭಾರತೀಯ ಪಶು ವೈದ್ಯಕೀಯ ಪರಿಷತ್ (ವಿಸಿಐ) ನ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪೂರ್ಣಗೊಳಿಸಿದ ಬಳಿಕಷವೆrà ಕಾಲೇಜು ಅನುಮತಿ ಪಡೆದು ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಿದೆ. ಪ್ರಥಮ ಹಂತದ ಕೆಲಸಗಳು ಪೂರ್ಣಗೊಂಡಿದ್ದು, ಮುಂದಿನ ಹಂತದ ಕೆಲಸ ಕಾರ್ಯಗಳು ಶೀಘ್ರ ಆರಂಭಗೊಳ್ಳಲಿವೆ. 2024ರ ಕೊನೆಯೊಳಗೆ ಎಲ್ಲ ಕೆಲಸಗಳು ಪೂರ್ಣಗೊಂಡು ವಿದ್ಯಾರ್ಥಿಗಳ ದಾಖಲಾತಿಗೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ.
-ಡಾ| ಎಲ್.ರಂಗನಾಥ್, ವಿಶೇಷ ಕರ್ತವ್ಯಾಧಿಕಾರಿ,
ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾನಿಲಯ -ನಾಗರಾಜ್ ಎನ್.ಕೆ.