Advertisement

ನಾಣ್ಯಗಳ ಸುತ್ತ ಖೊಟ್ಟಿ ಪೈಸಾ…

05:12 PM Oct 04, 2018 | Team Udayavani |

ಉತ್ತರ ಕರ್ನಾಟಕದ ಸೊಗಡಿರುವ ಅನೇಕ ಸಿನಿಮಾಗಳು ಕನ್ನಡದಲ್ಲಿ ಬರುತ್ತಲೇ ಇವೆ. ಈ ಸಾಲಿಗೆ ಹೊಸ ಸೇರ್ಪಡೆ “ಖೊಟ್ಟಿ ಪೈಸೆ’. ಈ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು, ನಾಳೆ ಬಿಡುಗಡೆಯಾಗುತ್ತಿದೆ. ಕಿರಣ್‌ ಕೆ.ಆರ್‌. ಈ ಚಿತ್ರದ ನಿರ್ದೇಶಕರು. ವೀರಪ್ಪ ಶಿರಗಣ್ಣ ಈ ಚಿತ್ರದ ನಿರ್ಮಾಪಕರು. ನಾಣ್ಯಕ್ಕೂ,  ಮನುಷ್ಯನಿಗೂ ಇರುವಂತಹ  ಸಂಬಂಧವನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. 

Advertisement

ಚಿತ್ರದ ಬಗ್ಗೆ ಮಾತನಾಡುವ ಕಿರಣ್‌, “1998 ರಲ್ಲಿ 5, 10 ಹಾಗೂ 20 ಪೈಸೆ ನಾಣ್ಯಗಳನ್ನು ರದ್ದುಪಡಿಸಲಾಯಿತು. ಉತ್ತರ ಕರ್ನಾಟಕದ ಒಂದು ಕುಟುಂಬದ ಕಥೆಯನ್ನು  ಈ ನಾಣ್ಯಗಳು ರದ್ದಾದ ಹಿನ್ನೆಲೆಯಲ್ಲಿ ಹೇಳಿದ್ದೇನೆ. ಚಿತ್ರದಲ್ಲಿ ಕಮರ್ಷಿಯಲ್‌ ಅಂಶಗಳಿಗಿಂತ ಕಥೆಗೆ ಹೆಚ್ಚು ಒತ್ತು ಕೊಟ್ಟಿದ್ದೇನೆ. ಚಿತ್ರದಲ್ಲಿ ಆಗಿನ ಕಾಲದ ಭಾಷೆಯನ್ನೇ ಬಳಿಸಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಬಹುತೇಕ ಚಿತ್ರೀಕರಣ ನಡೆದಿದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು. ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ವೀರಪ್ಪ, ನಿರ್ದೇಶಕರು ಹೇಳಿದ ಬಜೆಟ್‌ನಲ್ಲೇ ಸಿನಿಮಾ ಮಾಡಿ ಮುಗಿಸಿದ್ದಾರೆ. ಉತ್ತರ ಕರ್ನಾಟಕ ಕಥೆಯಾಗಿರುವುದರಿಂದ ಚಿತ್ರ ಜನಕ್ಕೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ ಎಂದರು. ಚಿತ್ರದಲ್ಲಿ ರಾಮ್‌ ಚೇತನ್‌ ಹಾಗು ಸಹನ ನಾಯಕ-ನಾಯಕಿ.  ಉಳಿದಂತೆ ವೈಜನಾಥ್‌ ಬಿರಾದರ್‌ ಪ್ರಮುಖ ಪಾತ್ರ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next