Advertisement

ಕೊಹ್ಲಿ ಪಡೆಗೆ ಡೇವಿಡ್‌ ಲೂಯಿಸ್‌ ಶುಭ ಹಾರೈಕೆ

12:26 AM May 28, 2019 | Team Udayavani |

ಲಂಡನ್‌: ಬ್ರಝಿಲ್‌ ಫ‌ುಟ್‌ಬಾಲ್‌ ತಂಡದ ಮಾಜಿ ನಾಯಕ, ಚೆಲ್ಸಿಯಾ ತಂಡದ ಡಿಫೆಂಡರ್‌ ಡೇವಿಡ್‌ ಲೂಯಿಸ್‌ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯಲಿರುವ ವಿರಾಟ್‌ ಕೊಹ್ಲಿ ಪಡೆಗೆ ಶುಭ ಹಾರೈಸಿದ್ದಾರೆ.

Advertisement

ಟ್ವಿಟರ್‌ನಲ್ಲಿ ವೀಡಿಯೊ ಸಂದೇಶ ವನ್ನು ಪೋಸ್ಟ್‌ ಮಾಡಿರುವ ಡೇವಿಡ್‌ ಲೂಯಿಸ್‌, ಮುಂಬರುವ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ತಾನುನ ಭಾರತ ತಂಡವನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.

“ಹಲೋ ವಿರಾಟ್‌ ಕೊಹ್ಲಿ! ಗುಡ್‌ ಲಕ್‌. ನಿಮಗೆ ಮತ್ತು ನಿಮ್ಮ ತಂಡಕ್ಕೆ ದೇವರು ಒಳ್ಳೆಯದು ಮಾಡಲಿ. ನಾನು ನಿಮ್ಮ ಬೆಂಬಲಕ್ಕಿದ್ದೇನೆ. ಶೀಘ್ರವೇ ನಿಮ್ಮನ್ನು ಕಾಣಲಿದ್ದೇನೆ’ ಎಂ ದು ವೀಡಿಯೋ ಸಂದೇ ಶದಲ್ಲಿ ಡೇವಿಡ್‌ ಲೂಯಿಸ್‌ ತಿಳಿಸಿದ್ದಾರೆ.

32ರ ಹರೆಯದ ಸೆಂಟರ್‌ ಬ್ಯಾಕ್‌ ಆಟಗಾರನಾಗಿರುವ ಲೂಯಿಸ್‌, ಈ ವಾರ ಆರ್ಸೆನಲ್‌ ತಂಡದ ವಿರುದ್ಧ ಯುರೋಪಾ ಲೀಗ್‌ ಫೈನಲ್‌ನಲ್ಲಿ ಆಡಲಿದ್ದಾರೆ. ಇದೇ ವೇಳೆ ಪಾಕಿಸ್ಥಾನ ತಂಡದ ಆಲ್‌ರೌಂಡರ್‌ ಇಮಾದ್‌ ವಾಸಿಮ್‌ ಅವರಿಗೂ ಗುಡ್‌ ಲಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next