Advertisement
ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ ನಂತರ ವಿರಾಟ್ ಕೊಹ್ಲಿ ಹೊಸ ನಾಯಕನ ಅಡಿಯಲ್ಲಿ ಆಡಲು ತಮ್ಮ ಅಹಂಕಾರ (ಇಗೋ) ವನ್ನು ಮರೆಯುವ ಅಗತ್ಯವಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
Related Articles
Advertisement
“ಸುನೀಲ್ ಗವಾಸ್ಕರ್ ಕೂಡ ನನ್ನ ನಾಯಕತ್ವದಡಿಯಲ್ಲಿ ಆಡಿದ್ದಾರೆ. ನಾನು ಕೆ ಶ್ರೀಕಾಂತ್ ಮತ್ತು ಮೊಹಮ್ಮದ್ ಅಜರುದ್ದೀನ್ ನಾಯಕತ್ವದಡಿಯಲ್ಲಿ ಆಡಿದ್ದೇನೆ. ನನಗೆ ಯಾವುದೇ ಅಹಂ ಇರಲಿಲ್ಲ” ಎಂದರು.
“ವಿರಾಟ್ ತನ್ನ ಇಗೋ ಬಿಟ್ಟು ಯುವ ಕ್ರಿಕೆಟಿಗನ ಅಡಿಯಲ್ಲಿ ಆಡಬೇಕಾಗುತ್ತದೆ. ಇದು ಆತನಿಗೆ ಮತ್ತು ಭಾರತೀಯ ಕ್ರಿಕೆಟ್ ಗೆ ಸಹಾಯ ಮಾಡುತ್ತದೆ. ವಿರಾಟ್ ಹೊಸ ನಾಯಕ, ಹೊಸ ಆಟಗಾರರಿಗೆ ಮಾರ್ಗದರ್ಶನ ನೀಡಬೇಕು. ನಾವು ವಿರಾಟ್ ಕೊಹ್ಲಿಯ ಬ್ಯಾಟ್ಸ್‌ಮನ್ ನನ್ನು ಕಳೆದುಕೊಳ್ಳಲು ಬಯಸುವುದಿಲ್ಲ” ಎಂದು ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಹೇಳಿದರು.