Advertisement

“ಸಚಿನ್‌ ದಾಖಲೆಗಳನ್ನೆಲ್ಲ ಕೊಹ್ಲಿ ಮುರಿಯಲಿದ್ದಾರೆ’

06:00 AM Mar 13, 2018 | Team Udayavani |

ನಾಗ್ಪುರ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಏರುವ ಎತ್ತರವನ್ನು ಕಾಣುವಾಗ ಎಂಥವರೂ ನಿಬ್ಬೆರಗಾಗಬೇಕು. ಅವರ ಒಂದೊಂದು ಇನ್ನಿಂಗೂ ಒಂದೊಂದು ದಾಖಲೆಯನ್ನು ಸೃಷ್ಟಿ ಸುತ್ತ ಹೋಗುತ್ತಿದೆ. 

Advertisement

ವಿರಾಟ್‌ ಕೊಹ್ಲಿ ಅವರ ಈ ನಾಗಾಲೋಟ ವನ್ನು ಗಮನಿಸಿದ ನಾಗ್ಪುರದ “ಕ್ರಿಕೆಟ್‌ ಜ್ಯೋತಿಷಿ’ ನರೇಂದ್ರ ಬುಂಢೆ ಭವಿಷ್ಯ ನುಡಿದಿದ್ದು, ತೆಂಡುಲ್ಕರ್‌ ದಾಖಲೆಗಳಿಗೆ ಕೊಹ್ಲಿ ಸಂಚಕಾರ ತರಲಿದ್ದಾರೆ ಎಂದು ಹೇಳಿದ್ದಾರೆ. 2025ರ ಒಳಗೆ ಸಚಿನ್‌ ಅವರ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯಲಿದ್ದಾರೆ; ಇದೇ ಅವಧಿಯೊಳಗಾಗಿ ಕೊಹ್ಲಿ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್‌ ಮತ್ತು ಏಕದಿನ ವಿಶ್ವಕಪ್‌ ಚಾಂಪಿಯನ್‌ ಆಗಲಿದೆ ಎಂದು ಹೇಳಿದ್ದಾರೆ.

ಭವಿಷ್ಯಗಳೆಲ್ಲ ನಿಜವಾಗಿವೆ 
“ನಾನು ನುಡಿದ ಹಿಂದಿನ ಎಲ್ಲ ಭವಿಷ್ಯಗಳೂ ನಿಜವಾಗಿವೆ. ತೆಂಡುಲ್ಕರ್‌ ದಾಖಲೆಗಳನ್ನು ಕೊಹ್ಲಿ ಹಿಂದಿಕ್ಕಲಿದ್ದಾರೆ ಎಂಬುದೂ ನಿಜವಾಗಲಿದೆ. 2025ರ ಒಳಗೆ ಕೊಹ್ಲಿ ದಾಖಲೆಗಳ ನೂತನ ಸರದಾರನಾಗಿ ಮೂಡಿಬರಲಿದ್ದಾರೆ. ಎರಡು ವಿಶ್ವಕಪ್‌ ಟ್ರೋಫಿಗಳೂ ಅವರ ನಾಯಕತ್ವದಲ್ಲಿ ಭಾರತಕ್ಕೆ ಒಲಿಯ ಲಿವೆ. ಇದು ಖಂಡಿತ…’ ಎಂದು ಬುಂಢೆ ಹೇಳಿದ್ದಾರೆ. ಇದೇ ವರ್ಷ ಕೊಹ್ಲಿ ಭಾರೀ ಮೊತ್ತದ ಹಣಕಾಸು ಒಪ್ಪಂದವೊಂದಕ್ಕೆ ಸಹಿ ಹಾಕಲಿದ್ದು, ಇದು ತೆಂಡುಲ್ಕರ್‌-ಮಾರ್ಕ್‌ ಮಸ್ಕರೇನಸ್‌ ನಡುವಿನ ವರ್ಲ್ಡ್ಟೆಲ್‌ ಒಪ್ಪಂದ ಕ್ಕಿಂತ ದೊಡ್ಡದು ಎಂದಿದ್ದಾರೆ.

“ಈಗ ವಿರಾಟ್‌ ಕೊಹ್ಲಿ ಅವರ ಗ್ರಹಗತಿ ಗಳೆಲ್ಲ ಚೆನ್ನಾಗಿರುವುದರಿಂದ ಅವರು ವಿದೇಶಗಳಲ್ಲೂ ಶ್ರೇಷ್ಠ ಮಟ್ಟದ ನಿರ್ವಹಣೆ ನೀಡು ತ್ತಿದ್ದಾರೆ. ಮುಂಬರುವ ಆಸ್ಟ್ರೇಲಿಯ ಪ್ರವಾಸಾ ವಧಿಯಲ್ಲೂ ಭಾರತ ಅತ್ಯುತ್ತಮ ಪ್ರದರ್ಶನ ನೀಡಲಿದೆ’ ಎಂದಿದ್ದಾರೆ ಕ್ರಿಕೆಟ್‌ ಜ್ಯೋತಿಷಿ ನರೇಂದ್ರ ಬುಂಢೆ. 

ವರ್ಷಾರಂಭದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಭಾರತ ಅಮೋಘ ಪ್ರದರ್ಶನ ನೀಡಲಿದೆ ಎಂದು ಬುಂಢೆ ಜ. 7ರಂದೇ ಭವಿಷ್ಯ ನುಡಿದಿ ದ್ದರು. ಧೋನಿ 2019ರ ವಿಶ್ವಕಪ್‌ ತನಕ ಆಡಲಿ ದ್ದಾರೆ ಎಂಬುದು ಅವರ ಮತ್ತೂಂದು ಭವಿಷ್ಯ. ತೆಂಡುಲ್ಕರ್‌ ಟೆನಿಸ್‌-ಎಲ್ಬೊ ಸಮಸ್ಯೆಗೆ ತುತ್ತಾಗಲಿದ್ದಾರೆ, ಅವರು ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಲಿದ್ದಾರೆ, ಸೌರವ್‌ ಗಂಗೂಲಿ-ಗ್ರೆಗ್‌ ಚಾಪೆಲ್‌ ನಡುವೆ ಮನಸ್ತಾಪ ತಲೆದೋರಲಿದೆ… ಎಂದೂ ಬುಂಢೆ ಭವಿಷ್ಯ ನುಡಿದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next