Advertisement

ಕರಾವಳಿಯ ನೀರುದೋಸೆ ಮೆಚ್ಚಿದ ಕೊಹ್ಲಿ !

04:04 AM Jul 09, 2020 | Sriram |

ಮಂಗಳೂರು: ಕರಾವಳಿ ಭಾಗದ ಖಾದ್ಯಗಳಲ್ಲಿ ನೀರುದೋಸೆ ಬಹಳ ಫೇಮಸ್‌. ಇಲ್ಲಿನ ಮನೆಗಳಲ್ಲಿ, ಹೊಟೇಲ್‌ಗ‌ಳಲ್ಲಿ ನೀರು ದೋಸೆ ತಪ್ಪಿಸುವುದಿಲ್ಲ. ಹೊರ ರಾಜ್ಯದವರೂ ಕರಾವಳಿಯ ಈ ಖಾದ್ಯವನ್ನು ಬಹಳ ಇಷ್ಟಪಡುತ್ತಾರೆ.

Advertisement

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಕೂಡ ಕರಾವಳಿಯ ನೀರುದೋಸೆಯನ್ನು ಮೆಚ್ಚಿ ಟ್ವೀಟ್‌ ಮಾಡಿರುವುದು ಬುಧವಾರದ ಬ್ರೇಕಿಂಗ್‌ ನ್ಯೂಸ್‌ ಆಗಿದೆ!

ಕೊಹ್ಲಿ ಅವರಿಗೆ ನೀರುದೋಸೆ ತಂದುಕೊಟ್ಟವರು ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌. ಇದನ್ನು ಮಾಡಿದವರು ಅವರ ತಾಯಿ ರೋಹಿಣಿ ಅಯ್ಯರ್‌. ಇವರು ಮಂಗಳೂರು ಮೂಲದವರು.

“ನನ್ನ ಮನೆಯ 500 ಮೀಟರ್‌ ದೂರದಲ್ಲಿರುವ ನೆರೆಮನೆಯವರು ನೀರು ದೋಸೆ ನೀಡಿ ನಮ್ಮನ್ನು ಖುಷಿಪಡಿಸಿದರು. ಇಂಥ ರುಚಿಕರವಾದ ದೋಸೆ ತಿನ್ನದೆ ಕೆಲವು ವರ್ಷಗಳೇ ಆದವು. ನಿಮ್ಮ ತಾಯಿಗೆ ಧನ್ಯವಾದಗಳು’ ಎಂದು ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

ವಿರಾಟ್‌ ಕೊಹ್ಲಿ ಇದಕ್ಕೆ ಪ್ರತಿಯಾಗಿ ಅಯ್ಯರ್‌ ಮನೆಗೆ ಮಶ್ರೂಮ್‌ ಬಿರಿಯಾನಿ ಕಳುಹಿಸಿ ಕೊಟ್ಟು, ಇದು ನಿಮಗೆ ಇಷ್ಟವಾಗುತ್ತದೆಂಬ ನಂಬಿಕೆ ಇದೆ ಎಂದಿದ್ದಾರೆ. ಕೊಹ್ಲಿ ಅವರ ನೀರುದೋಸೆ ಪ್ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next