Advertisement
ಅಡಿಲೇಡ್ ವೈಫಲ್ಯದಿಂದಾಗಿ ಕೊಹ್ಲಿ ಅವರ ಅಗ್ರಸ್ಥಾನಕ್ಕೆ ಸಣ್ಣ ಮಟ್ಟದಲ್ಲಿ ಅಪಾಯವೊಂದು ಎದು ರಾಗಿತ್ತು. ನ್ಯೂಜಿಲ್ಯಾಂಡಿನ ಕೇನ್ ವಿಲಿಯಮ್ಸನ್ ಬೆನ್ನಟ್ಟಿಕೊಂಡು ಬರುತ್ತಿದ್ದರು. ಸದ್ಯ ವಿಲಿಯಮ್ಸನ್ ಜೀವನಶ್ರೇಷ್ಠ 915 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಅಜಿಂಕ್ಯ ರಹಾನೆ 2 ಸ್ಥಾನ (15), ರಿಷಬ್ ಪಂತ್ 11 ಸ್ಥಾನ (ಜೀವನಶ್ರೇಷ್ಠ 48) ಮೇಲೇರಿದ್ದಾರೆ.
ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗಳಾದ ಉಸ್ಮಾನ್ ಖ್ವಾಜಾ, ಟಿಮ್ ಪೇನ್, ಟ್ರ್ಯಾವಿಸ್ ಹೆಡ್ ಕ್ರಮವಾಗಿ 12, 9 ಹಾಗೂ 16 ಸ್ಥಾನಗಳಿಂದ ಮೇಲೇರಿದ್ದಾರೆ. ಪರ್ತ್‌ನಲ್ಲಿ 8 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಸ್ಪಿನ್ನರ್ ನಥನ್ ಲಿಯೋನ್ ಒಂದು ವರ್ಷದ ಬಳಿಕ ಟೆಸ್ಟ್ ಬೌಲಿಂಗ್‌ನಲ್ಲಿ ಜೀವನಶ್ರೇಷ್ಠ 7ನೇ ರ್‍ಯಾಂಕಿಂಗ್ ಪಡೆದಿದ್ದಾರೆ. ಜೋಶ್ ಹ್ಯಾಝಲ್‌ವುಡ್, ಮಿಚೆಲ್ ಸ್ಟಾರ್ಕ್ ಕೂಡ ಸಣ್ಣ ಮಟ್ಟದ ಪ್ರಗತಿ ಕಂಡಿದ್ದಾರೆ. ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 264 ರನ್ ಬಾರಿಸಿದ ಟಾಮ್ ಲ್ಯಾಥಂ ಅವರಿಗೆ ನೂತನ ರ್‍ಯಾಂಕಿಂಗ್ ಯಾದಿಯಲ್ಲಿ 15 ಸ್ಥಾನಗಳ ಲಾಭವಾಗಿದೆ. ಅವರೀಗ ಜೀವನಶ್ರೇಷ್ಠ 22ನೇ ಸ್ಥಾನದಲ್ಲಿದ್ದಾರೆ.