Advertisement
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಆಸೀಸ್ ಟೆಸ್ಟ್ ಕಪ್ತಾನ ಟಿಮ್ ಪೇನ್, “ಕೊಹ್ಲಿ ಬಗ್ಗೆ ಅನೇಕರು ಅನೇಕ ರೀತಿಯ ಹೇಳಿಕೆ ನೀಡಬಹುದು. ಎದುರಾಳಿ ಆಟಗಾರರು ಅವರನ್ನು ದ್ವೇಷಿಸುವುದನ್ನೇ ಪ್ರೀತಿಸುತ್ತಾರೆ. ಅಭಿಮಾನಿಗಳು ಅವರ ಬ್ಯಾಟಿಂಗನ್ನು ಬಹಳಷ್ಟು ಮೆಚ್ಚುತ್ತಾರೆ. ಆದರೆ ನನ್ನ ಪಾಲಿಗೆ ಅವರೋರ್ವ ಎದುರಾಳಿ ಹಾಗೂ ಕೇವಲ ಮತ್ತೂಬ್ಬ ಕ್ರಿಕೆಟಿಗ, ಅಷ್ಟೇ…’ ಎಂದಿದ್ದಾರೆ.
Related Articles
Advertisement
ಟಿಮ್ ಪೇನ್ ಯಶಸ್ಸು
ಸ್ಮಿತ್ ನಿಷೇಧಕ್ಕೊಳಗಾದಾಗ ಟೆಸ್ಟ್ ತಂಡದ ನಾಯಕತ್ವ ಪಡೆದ ಪೇನ್ ಇದರಲ್ಲಿ ಸಾಕಷ್ಟು ಯಶಸ್ಸು ಕಂಡಿರುವ ಕಾರಣ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂಬುದನ್ನು ಹಾನ್ಸ್ ಪರೋಕ್ಷವಾಗಿ ಹೇಳಿದ್ದಾರೆ.
ಪೇನ್ ನಾಯಕತ್ವದಲ್ಲಿ ಆಸ್ಟ್ರೇಲಿಯ ತಂಡ 2019ರಲ್ಲಿ ಆ್ಯಶಸ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಜತೆಗೆ ಶ್ರೀಲಂಕಾ, ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಯನ್ನೂ ಜಯಿಸಿತ್ತು. ಸೋತದ್ದು ಪ್ರವಾಸಿ ಭಾರತದೆದುರಿನ ಸರಣಿಯಲ್ಲಿ ಮಾತ್ರ. ಇದಕ್ಕೆ ಸೇಡು ತೀರಿಸಿಕೊಳ್ಳಲು ಯಶಸ್ವಿಯಾದರೆ ಅವರ ನಾಯಕತ್ವ ಇನ್ನಷ್ಟು ಗಟ್ಟಿಗೊಳ್ಳಲಿದೆ.