Advertisement
ತಂಡದಿಂದ ಎಡಗೈ ಲೆಗ್‌ಸ್ಪಿನ್ನರ್ ಕುಲದೀಪ್ ಯಾದವ್‌ರನ್ನೂ ಕೈಬಿಡಲಾಗಿದೆ. ಇದಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಆಫ್ರಿಕಾ ಪ್ರವಾಸದಲ್ಲಿ ಕಡೆಯೆರಡು ಟಿ20 ಪಂದ್ಯದಲ್ಲೂ ಕುಲದೀಪ್ ಆಡಿರಲಿಲ್ಲ. ಆದರೆ ಯಜುವೇಂದ್ರ ಚಹಲ್ ಮತ್ತೆ ಸ್ಥಾನ ಪಡೆದಿದ್ದಾರೆ. ವಿಶ್ರಾಂತಿಯ ಕಾರಣ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದಾರೆ. ಕನ್ನಡಿಗರಾದ ಕೆ.ಎಲ್.ರಾಹುಲ್, ಮನೀಶ್ ಪಾಂಡೆ ಸ್ಥಾನ ಪಡೆದಿದ್ದಾರೆ.
Related Articles
ಈ ಎಲ್ಲ ಆಯ್ಕೆ ವೇಳೆ ಬೇಸರಗೊಂಡ ಕ್ರಿಕೆಟಿಗನೆಂದರೆ ಕರ್ನಾಟಕದ ಮಾಯಾಂಕ್ ಅಗರ್ವಾಲ್. ಅವರು ಈ ಋತುವಿನಲ್ಲಿ ನಡೆದ ದೇಶೀಯ ಕ್ರಿಕೆಟ್‌ನಲ್ಲಿ 2000 ರನ್ ಗಳಿಸಿ ದೇಶದಲ್ಲೇ ಗರಿಷ್ಠ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ವಿಜಯ್ ಹಜಾರೆಯಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ಐಪಿಎಲ್‌ನಲ್ಲೂ ಟಿ20ಗೆ ಸೂಕ್ತ ಆಟಗಾರ ಎಂಬಂತೆ ಪ್ರದರ್ಶನ ನೀಡಿದ್ದರೂ ರಾಷ್ಟ್ರೀಯ ತಂಡದ ಕದ ತಟ್ಟಲು ಅವರು ವಿಫಲರಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕ್ರಿಕೆಟ್ ಸಮಿತಿ ಮೂಲಗಳು, ನಾವು ನಿರ್ದಿಷ್ಟ ಮಾದರಿ ಅನುಸರಿಸುತ್ತಿದ್ದೇವೆ. ಯಾವುದೇ ದೇಶೀಯ ಕ್ರಿಕೆಟಿಗ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮುನ್ನ ಭಾರತ ಎ ತಂಡದ ಪರ ಆಡಿರಬೇಕು ಎಂದು ಹೇಳಿವೆ.
Advertisement
ತಂಡ ಹೀಗಿದೆ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್ (ಉಪನಾಯಕ), ಕೆ.ಎಲ್.ರಾಹುಲ್, ಸುರೇಶ್ ರೈನಾ, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ವಿಜಯ್ ಶಂಕರ್, ಶಾದೂìಲ್ ಠಾಕೂರ್, ಜೈದೇವ್ ಉನಾಡ್ಕತ್, ಮೊಹಮ್ಮದ್ ಸಿರಾಜ್, ರಿಷಭ್ ಪಂತ್.