Advertisement

“ವಿಸ್ಡನ್‌’ದಶಕದ ಟಿ20 ತಂಡದಲ್ಲಿ ಕೊಹ್ಲಿ, ಬುಮ್ರಾ

09:59 AM Dec 31, 2019 | Sriram |

ಲಂಡನ್‌: ಇಂಗ್ಲೆಂಡಿನ ಖ್ಯಾತ ಕ್ರಿಕೆಟ್‌ ಪತ್ರಿಕೆ “ವಿಸ್ಡನ್‌’ ದಶಕದ ಶ್ರೇಷ್ಠ ಟಿ20 ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬುಮ್ರಾ ಸ್ಥಾನ ಸಂಪಾದಿಸಿದ್ದಾರೆ. ಆದರೆ ಮಹೇಂದ್ರ ಸಿಂಗ್‌ ಧೋನಿಗೆ ಜಾಗ ಲಭಿಸಿಲ್ಲ.

Advertisement

ವಿಕೆಟ್‌ ಕೀಪರ್‌ ರೇಸ್‌ನಲ್ಲಿ ಧೋನಿ ಮತ್ತು ಜಾಸ್‌ ಬಟ್ಲರ್‌ ಇದ್ದರು. ಈ ಸಂದರ್ಭದಲ್ಲಿ ವಿಸ್ಡನ್‌ ಆಯ್ಕೆಗಾರರು ಇಬ್ಬರ ಸ್ಟ್ರೈಕ್‌ ರೇಟನ್ನು ಮಾನದಂಡವಾಗಿ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಟ್ಲರ್‌ ಅವರೇ ಮುಂದಿದ್ದರು (172). ಧೋನಿ 132ರ ಸ್ಟ್ರೈಕ್‌ರೇಟ್‌ ಹೊಂದಿದ್ದರು.

ಆರನ್‌ ಫಿಂಚ್‌ ನಾಯಕ
ಆರಂಭಕಾರ ಆರನ್‌ ಫಿಂಚ್‌ ನಾಯಕತ್ವದ ಈ ತಂಡದಲ್ಲಿ ಅಫ್ಘಾನಿಸ್ಥಾನದ ರಶೀದ್‌ ಖಾನ್‌ (84 ವಿಕೆಟ್‌) ಮತ್ತು ಮೊಹಮ್ಮದ್‌ ನಬಿ (1,316 ರನ್‌ ಮತ್ತು 69 ವಿಕೆಟ್‌) ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡಿನ ವೇಗಿ ಡೇವಿಡ್‌ ವಿಲ್ಲಿ (34 ವಿಕೆಟ್‌) ಅವರನ್ನು ಪವರ್‌ ಪ್ಲೇ ಸ್ಪೆಷಲಿಸ್ಟ್‌ ಎಂಬ ಕಾರಣಕ್ಕಾಗಿ ಆರಿಸಲಾಗಿದೆ. ಡೆತ್‌ ಬೌಲಿಂಗ್‌ನಲ್ಲಿ ಘಾತಕವಾಗಿ ಎರಗುವ ಸಾಮರ್ಥ್ಯ ಹೊಂದಿರುವ ಕಾರಣ ಬುಮ್ರಾ ಮತ್ತು ಮಾಲಿಂಗ ಆಯ್ಕೆಯಾಗಿದ್ದಾರೆ.

ಫಿಂಚ್‌ ಜತೆಗಾರನಾಗಿ ಕಾಣಿಸಿಕೊಂಡಿರುವ ಆರಂಭಕಾರ ಕಾಲಿನ್‌ ಮುನ್ರೊ. ವನ್‌ಡೌನ್‌ ಸ್ಥಾನ ಕೊಹ್ಲಿಗೆ ಮೀಸಲಾಗಿದೆ. ತಂಡದ ಏಕೈಕ ನಿವೃತ್ತ ಕ್ರಿಕೆಟಿಗನಾಗಿರುವ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ 4ನೇ, ಹಾರ್ಡ್‌ ಹಿಟ್ಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ 5ನೇ ಕ್ರಮಾಂಕದಲ್ಲಿದ್ದಾರೆ.

ಈ ತಂಡದಲ್ಲಿ ವೆಸ್ಟ್‌ ಇಂಡೀಸ್‌, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶದ ಯಾವುದೇ ಕ್ರಿಕೆಟಿಗರಿಲ್ಲ ಎಂಬುದನ್ನು ಗಮನಿಸಬೇಕು.

Advertisement

ವಿಸ್ಡನ್‌ ದಶಕದ ಟಿ20 ತಂಡ
ಆರನ್‌ ಫಿಂಚ್‌ (ನಾಯಕ), ಕಾಲಿನ್‌ ಮುನ್ರೊ, ವಿರಾಟ್‌ ಕೊಹ್ಲಿ, ಶೇನ್‌ ವಾಟ್ಸನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಜಾಸ್‌ ಬಟ್ಲರ್‌ (ವಿ.ಕೀ.), ಮೊಹಮ್ಮದ್‌ ನಬಿ, ಡೇವಿಡ್‌ ವಿಲ್ಲಿ, ರಶೀದ್‌ ಖಾನ್‌, ಜಸ್‌ಪ್ರೀತ್‌ ಬುಮ್ರಾ, ಲಸಿತ ಮಾಲಿಂಗ.

Advertisement

Udayavani is now on Telegram. Click here to join our channel and stay updated with the latest news.

Next