Advertisement
ಆಗ ಮೂಡಿಬರುವ ಹೆಸರುಗಳೆಂದರೆ ವಿರಾಟ್ ಕೊಹ್ಲಿ, ಟ್ರೆಂಟ್ ಬೌಲ್ಟ್ ಮತ್ತು ಆದಿಲ್ ರಶೀದ್. ಇವರು ಕ್ರಮವಾಗಿ ಬ್ಯಾಟಿಂಗ್, ವೇಗದ ಬೌಲಿಂಗ್ ಮತ್ತು ಸ್ಪಿನ್ ಬೌಲಿಂಗ್ ವಿಭಾಗಗಳಲ್ಲಿ ಉತ್ತಮ ನಿರ್ವಹಣೆ ಕಾಯ್ದುಕೊಂಡು ಬಂದಿದ್ದಾರೆ. ಉತ್ತಮ ಆಲ್‌ರೌಂಡರ್ ಎಂಬ ಹೆಗ್ಗಳಿಕೆ ಕೇದಾರ್ ಜಾಧವ್ ಅವರದು. ಈ ವಿಶ್ವಕಪ್‌ನಲ್ಲಿ ಇದೇ ಫಾರ್ಮ್ ಉಳಿಸಿಕೊಂಡು ಮಿಂಚುವ ಭರವಸೆ ಮೂಡಿಸಿದ್ದಾರೆ.
ಕೊಹ್ಲಿ 69 ಏಕದಿನ ಪಂದ್ಯಗಳಲ್ಲಿ 4,306 ರನ್ ಪೇರಿಸಿದ್ದಾರೆ. 19 ಶತಕ, 16 ಅರ್ಧ ಶತಕ ಕೊಹ್ಲಿ ಬ್ಯಾಟಿಂಗ್ ಪರಾಕ್ರಮಕ್ಕೆ ಸಾಕ್ಷಿ. ರನ್ ಗಳಿಕೆಯಲ್ಲಿ ಕೊಹ್ಲಿಯ ಹಿಂದೇ ಇರುವ ಆಟಗಾರನೆಂದರೆ ರೋಹಿತ್ ಶರ್ಮ ಅವರು ಟ್ರೆಂಟ್ ಬೌಲ್ಟ್
54 ಪಂದ್ಯ, 107 ವಿಕೆಟ್, 24.59 ಸರಾಸರಿ ವೇಗದ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್ ಮತ್ತು ಕಾಗಿಸೊ ರಬಾಡ ಅವರದು ಸಮಬಲದ ಸಾಧನೆ. ಇವರಿಬ್ಬರು ಕ್ರಮವಾಗಿ 107 ಮತ್ತು 106 ವಿಕೆಟ್ ಉರುಳಿಸಿ 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ. ಬೌಲ್ಟ್ 54 ಪಂದ್ಯ ಆಡಿದರೆ, ರಬಾಡ 66 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟಾಪ್-10 ಯಾದಿಯಲ್ಲಿರುವ ನ್ಯೂಜಿಲ್ಯಾಂಡಿನ ಏಕೈಕ ಬೌಲರ್ ಎಂಬುದು ಬೌಲ್ಟ್ ಹೆಗ್ಗಳಿಕೆ.
Related Articles
83 ಪಂದ್ಯ, 129 ವಿಕೆಟ್, 29.68 ಸರಾಸರಿ
ಕಳೆದ 4 ವರ್ಷಗಳಲ್ಲಿ ಬೌಲಿಂಗ್ ಯಶಸ್ಸು ಕಂಡವರಲ್ಲಿ ಸ್ಪಿನ್ನರ್‌ಗಳೇ ಅಗ್ರಸ್ಥಾ ನದಲ್ಲಿರುವುದು ಗಮನಾರ್ಹ. ಇಲ್ಲಿ ಇಂಗ್ಲೆಂಡಿನ ಆದಿಲ್ ರಶೀದ್ ಮತ್ತು ಅಫ್ಘಾನಿಸ್ಥಾನ ರಶೀದ್ ಖಾನ್ ನಡುವೆ ಉತ್ತಮ ಪೈಪೋಟಿ ಕಂಡುಬಂದಿದೆ. ಆದಿಲ್ ರಶೀದ್ 83 ಪಂದ್ಯಗಳಿಂದ 129 ವಿಕೆಟ್ ಉರುಳಿಸಿದರೆ, ರಶೀದ್ ಖಾನ್ 59 ಪಂದ್ಯಗಳನ್ನಾಡಿ 125 ವಿಕೆಟ್ ಸಂಪಾದಿಸಿದ್ದಾರೆ.
Advertisement
ಟಾಪ್-10ರಲ್ಲಿರುವ ಇತರ ಬೌಲರ್‌ಗಳೆಂದರೆ ಇಮ್ರಾನ್ ತಾಹಿರ್, ಕುದೀಪ್ ಯಾದವ್, ಬುಮ್ರಾ, ಲಿಯಮ್ ಪ್ಲಂಕೆಟ್, ಮುಸ್ತಫಿಜುರ್ ರೆಹಮಾನ್, ಹಸನ್ ಅಲಿ.
71 ಪಂದ್ಯಗಳಿಂದ 3,790 ರನ್ ರಾಶಿ ಹಾಕಿದ್ದಾರೆ. ಸಿಡಿಸಿದ್ದು 15 ಶತಕ ಹಾಗೂ 16 ಅರ್ಧ ಶತಕ. ಸಾರಸರಿ 61.72.ಟಾಪ್-10 ಯಾದಿಯಲ್ಲಿರುವ ಉಳಿದ ಬ್ಯಾಟ್ಸ್ ಮನ್ ಗಳೆಂದರೆ ಜೋ ರೂಟ್, ಇಯಾನ್ ಮಾರ್ಗನ್, ಕ್ವಿಂಟನ್ ಡಿ ಕಾಕ್, ಜಾಸನ್ ರಾಯ್, ರಾಸ್ ಟೇಲರ್, ಕೇನ್ ವಿಲಿಯಮ್ಸನ್, ಶಿಖರ್ ಧವನ್ ಮತ್ತು ಫಾ ಡು ಪ್ಲೆಸಿಸ್.
ಕೇದಾರ್ ಜಾಧವ್58 ಪಂದ್ಯ, 1,154 ರನ್, 27 ವಿಕೆಟ್
ಆಲ್‌ರೌಂಡ್ ಸಾಧಕರಲ್ಲಿ ಭಾರತದ ಕೇದಾರ್ ಜಾಧವ್ ಮುಂಚೂಣಿಯಲ್ಲಿ ದ್ದಾರೆ. 58 ಪಂದ್ಯ ಗಳಿಂದ 1,154 ರನ್ ಹಾಗೂ 27 ವಿಕೆಟ್ ಸಂಪಾದಿಸಿದ್ದು ಇವರ ಸಾಧನೆ. ಟಾಪ್-10 ಯಾದಿಯಲ್ಲಿರುವ ಉಳಿದ ಆಲ್‌ರೌಂಡರ್‌ಗಳೆಂದರೆ ರಶೀದ್ ಖಾನ್, ಕ್ರಿಸ್ ವೋಕ್ಸ್, ದೌಲತ್ ಜದ್ರಾನ್, ಶಕಿಬ್ ಅಲ್ ಹಸನ್, ಆ್ಯಂಡಿಲ್ ಫೆಲುಕ್ವಾಯೊ, ಮೊಹಮ್ಮದ್ ನಬಿ, ಶಾದಾಬ್ ಖಾನ್, ಬೆನ್ ಸ್ಟೋಕ್ಸ್, ಜಿಮ್ಮಿ ನೀಶಮ್.