Advertisement

ಗಡಿ ಭಾಗದ ಸರಹದ್ದಿನಲ್ಲಿ ಚೆಕ್‌ಪೋಸ್ಟ್‌ ತೆರೆಯಲು ಕ್ರಮ

06:00 PM Apr 08, 2020 | Naveen |

ಕೋಹಳ್ಳಿ: ಮಹಾರಾಷ್ಟ್ರದ ಯಾವುದೇ ವಾಹನಗಳು ನಮ್ಮ ವ್ಯಾಪ್ತಿಗೆ ಬರದ ಹಾಗೇ ಎಚ್ಚರಿಕೆ ವಹಿಸಬೇಕು. ಇಲ್ಲಿರುವ ಚೆಕ್‌ ಪೋಸ್ಟ್‌ಅನ್ನು ಬದಲಾಯಿಸಿ ಕರ್ನಾಟಕದ ಗಡಿಭಾಗದ ಸರಹದ್ದಿನಲ್ಲಿ ಹಾಕಿದರೆ ಅಕ್ರಮವಾಗಿ ಸಾಗಾಟವಾಗುವುದನ್ನು ತಡೆಗಟ್ಟಬಹುದು. ಸ್ಥಳ ಬದಲಾವಣೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸರಹದ್ದಿನಲ್ಲಿ ಚೆಕ್‌ ಪೋಸ್ಟ್‌ ಹಾಕಲು ಸೂಚಿಸಲಾಗುವುದು ಎಂದು ಅಥಣಿ ಗ್ರೇಡ್‌-2 ತಹಶೀಲ್ದಾರ್‌ ಆರ್‌.ಆರ್‌. ಬುರ್ಲಿ ಹೇಳಿದರು.

Advertisement

ಗ್ರಾಮದ ಹೊರವಲಯದ ಸಿಂಧೂರ ರಸ್ತೆಗೆ ಕೊರೊನಾ ತಪಾಸಣೆಗೆ ಹಾಕಿರುವ ಚೆಕ್‌ ಪೋಸ್ಟ್‌ ಕೇಂದ್ರಕ್ಕೆ ದಿಢೀರ್‌ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಮಹಾರಾಷ್ಟ್ರದ ಗಡಿ ಭಾಗವಾದ ಕೋಹಳ್ಳಿ ಗ್ರಾಮದಿಂದ ಕೇವಲ ಒಂದು ಕಿ.ಮೀ.ದಲ್ಲಿ ಚೆಕ್‌ ಪೋಸ್ಟ್‌ ಹಾಕಲಾಗಿದೆ. ಇದರಿಂದ ಗಡಿ ಭಾಗದ ಸರಹದ್ದಿನಿಂದ ಬೇರೆ-ಬೇರೆ ನಡುವಿನ ರಸ್ತೆಗಳ ಮೂಲಕ ವಾಹನಗಳು ಸಂಚರಿಸುತ್ತಿವೆ. ಆದ್ದರಿಂದ ಚೆಕ್‌ ಪೋಸ್ಟ್‌ ದಲ್ಲಿ ಕಡಿಮೆ ವಾಹನಗಳು ಹೋಗುತ್ತಿವೆ. ಇದೇ ಕಾರಣದಿಂದ ಈ ಚೆಕ್‌ ಪೋಸ್ಟ್‌ ಬದಲಾಯಿಸಿ ಕರ್ನಾಟಕ ಸರಹದ್ದಿನಲ್ಲಿ ನಿರ್ಮಿಸಿದರೆ ಮಹಾರಾಷ್ಟ್ರದಿಂದ ಬರುವ ಮತ್ತು ಹೋಗುವ ವಾಹನಗಳನ್ನು ಪರಿಶೀಲನೆ ಮಾಡಬಹುದು. ಇದರ ಬಗ್ಗೆ ಮೇಲಧಿ ಕಾರಿಗಳೊಂದಿಗೆ ಚರ್ಚಿಸಿ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತೆಲಸಂಗ ಕಂದಾಯ ನಿರೀಕ್ಷಕ ಬಸವರಾಜ ಹೋಸಕೇರಿ, ಗ್ರಾಪಂ ಪಿಡಿಒ ಈರಪ್ಪ ತಮದಡ್ಡಿ, ಕಿರಿಯ ಮಹಿಳಾ ಸಹಾಯಕಿ ಎಫ್‌.ಎಸ್‌.ಕೋಲಕಾರ, ಗ್ರಾಮ ಸಹಾಯಕ ಮಹಾಂತೇಶ ನಾಟೀಕಾರ, ಆಶಾ ಕಾರ್ಯಕರ್ತೆ, ಪೊಲೀಸ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next