Advertisement
ಶ್ರೀ ಅನಂತ ಪದ್ಮನಾಭ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಸಹಸ್ರಾನಾಮ ಅರ್ಚನೆ, ಅಮೃತಪಡಿ ನಂದಾದೀಪ, ಹಾಲು ಪಾಯಸ ವಿಶೇಷ ಸೇವೆಗಳು ನಡೆದು, ಮಧ್ಯಾಹ್ನ ಪಂಚಮಿ ವಿಶೇಷ ಮಹಾಪೂಜೆ ಜರಗಿತು. ಸುಮಾರು 15 ಸಹಸ್ರದಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಪಂಚಮಿಯ ತೈಲಾಭ್ಯಂಜನ ನಡೆದು ರಾತ್ರಿ ಶ್ರೀ ದೇವರ ಬಲಿ ಹೊರಟು ಕಟ್ಟೆ ಪೂಜೆ, ದೇಗುಲದ ಭದ್ರಾಸರಸ್ವತಿ ತೀರ್ಥ ಸರೋವರದಲ್ಲಿ ಶ್ರೀ ದೇವರ ತೆಪ್ಪೋತ್ಸವ, ಎರಡನೇ ಬಲಿ, ಚಂದ್ರಮಂಡಲೋತ್ಸವ, ಅಶ್ವವಾಹನೋತ್ಸವ, ಪಾಲಕಿ ಉತ್ಸವ ಜರಗಿತು.
ಇಂದು ಶ್ರೀ ಅನಂತ ಪದ್ಮನಾಭ ದೇವರಿಗೆ ವಿಶೇಷವಾದ ಅಭಿಷೇಕಾದಿ ಸೇವೆಗಳು ಜರಗಿ, ಅಮೃತ ಪಡಿ ನಂದಾದೀಪ ವಿಶೇಷ ಸೇವೆ, ಷಷ್ಠಿಯ ಮಹಾಪೂಜೆಯ ಬಳಿಕ ಮಧ್ಯಾಹ್ನ 1ಕ್ಕೆ ಶ್ರೀ ದೇವರ ಬಲಿ ಹೊರಟು ಬ್ರಹ್ಮರಥಾರೋಹಣ ಹಾಗೂ ರಾಜ ಬೀದಿಯಲ್ಲಿ ವೈಭವದ ಬ್ರಹ್ಮರಥೋತ್ಸವ, ಮಹಾ ಅನ್ನ ಸಂತರ್ಪಣೆ ಜರಗಲಿದೆ.