Advertisement

ಬಿ.ಜಿ.ಕೆರೆ ಪಬ್ಲಿಕ್‌ ಶಾಲೆಯಲ್ಲಿ 30 ಮಕ್ಕಳಿಗಿದೆ ಅವಕಾಶ

05:37 PM May 29, 2019 | Team Udayavani |

ಕೊಂಡ್ಲಹಳ್ಳಿ: ಮೊಳಕಾಲ್ಮೂರು ತಾಲೂಕಿನ ಬಿ.ಜಿ. ಕೆರೆ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ 2019-20ನೇ ಸಾಲಿನ ಪ್ರವೇಶ ಸಂಬಂಧ ಉಪ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಮನೆ ಮನೆಗೆ ತೆರಳಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯ, ವ್ಯವಸ್ಥೆಯ ಕುರಿತು ಪೋಷಕರಿಗೆ ಮನದಟ್ಟು ಮಾಡುತ್ತಿದ್ದಾರೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಉಪ ಪ್ರಾಂಶುಪಾಲ ಎಂ. ಮಲ್ಲಿಕಾರ್ಜುನ್‌, ಎಲ್ಕೆಜಿಗೆ ಉಚಿತ ಪ್ರವೇಶವಿದ್ದು, 30 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಕೆಜಿಗೆ ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತದೆ. ಒಂದನೇ ತರಗತಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಹಾಗೂ 1 ರಿಂದ 10 ನೇತರಗತಿಗೆ ಕನ್ನಡ ಮಾಧ್ಯಮದಲ್ಲಿ ಬೋಧಿಸಲಾಗುತ್ತದೆ ಎಂದರು.

ಒಂದರಿಂದ ಹತ್ತನೇತರಗತಿಯವರೆಗೆ ಒಂದೇ ಆವರಣದಲ್ಲಿ ತರಗತಿಗಳು ನಡೆಯಲಿದ್ದು, ಕೇಂದ್ರ ಸರ್ಕಾರದ ಯೋಜನೆಯಡಿ ಜಿಲ್ಲೆಯಲ್ಲಿ ಆಯ್ಕೆಯಾದ ಮೂರು ಅಟಲ್ ವಿಜ್ಞಾನ ಪ್ರಯೋಗಾಲಯಗಳಲ್ಲಿ ಬಿ.ಜಿ. ಕೆರೆ ಪಬ್ಲಿಕ್‌ ಶಾಲೆ ಕೂಡ ಒಂದಾಗಿದೆ. ನೆಹರು ವಿಜ್ಞಾನ ಕೇಂದ್ರ, ಪ್ರತಿಭಾವಂತರಿಗೆ ಎನ್‌ಎಂಎಂಎಸ್‌, ಎನ್‌ಟಿಎಸ್‌ಇ ಪರೀಕ್ಷೆಗೆ ನುರಿತ ಶಿಕ್ಷಕರಿಂದ ತರಬೇತಿ, ಸ್ಮಾರ್ಟ್‌ ಕ್ಲಾಸ್‌ ಮೂಲಕ ಬೋಧನೆ, ಧ್ಯಾನ, ಯೋಗ,ಕ್ರೀಡಾ ಚಟುವಟಿಕೆಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ವಿಶಾಲವಾದ ಆಟದ ಮೈದಾನವಿದೆ. ಎಸ್‌ಎಸ್‌ಎಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದು, 2018-19ನೇ ಸಾಲಿನಲ್ಲಿ ಎಸ್‌ಎಸ್‌ಎಲ್ಸಿಯಲ್ಲಿ ಶೇ. 96.29 ಫಲಿತಾಂಶ ದೊರೆತಿದೆ. ಗುಣಾತ್ಮಕ ಹಾಗೂ ಸ್ಪರ್ಧಾತ್ಮಕ ಕಲಿಕಾ ವಾತಾವರಣ ಇದ್ದು, ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next