Advertisement

ಕೋಡಿಮಠ ಸರ್ವ ಜನಾಂಗದ ಶಾಂತಿಯ ತೋಟ

06:35 PM May 21, 2022 | Team Udayavani |

ಅರಸೀಕೆರೆ: ಜಾತಿ ಮತ, ಧರ್ಮಗಳ ಭೇದಭಾವ ವಿಲ್ಲದೇ ಸರ್ವ ಜನಾಂಗದ ಶಾಂತಿಯ ತೋಟದಂತೆ ಸುಕ್ಷೇತ್ರ ಕೋಡಿಮಠವು ಎಲ್ಲರನ್ನು ಒಂದೆಡೆ ಸೇರಿಸಿ ಧಾರ್ಮಿಕ ಸಮಾರಂಭವನ್ನು ಆಚರಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಆನಂದಪುರಂ ಶ್ರೀಮುರುಘರಾಜೇಂದ್ರ ಮಹಾಸಂಸ್ಥಾನ ಬೆಕ್ಕಿನ ಕಲ್ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಗಳು ತಿಳಿಸಿದರು.

Advertisement

ತಾಲೂಕಿನ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಲಿಂಗೈಕ್ಯ ಶ್ರೀಶಿವಲಿಂಗ ಸ್ವಾಮಿಗಳ 135ನೇ ವರ್ಷದ ಸ್ಮರಣಾರಾಧನೆ ಅಂಗವಾಗಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಸುಕ್ಷೇತ್ರ ಕೋಡಿಮಠದ ಪೀಠಾಧ್ಯಕ್ಷ ರಾದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಲೋಕಾಕಲ್ಯಾಣಾರ್ಥವಾಗಿ ಕಾರ್ಯ ಕ್ರಮಗಳು ನಿರಂತರವಾಗಿ ಶ್ರೀ ಮಠದಲ್ಲಿ ನಡೆಸುತ್ತಾ ಬಂದಿದ್ದು ಜಾತಿ, ಮತ, ಧರ್ಮ ನೋಡದೆ ಸರ್ವ
ಜನಾಂಗದ ಶಾಂತಿಯ ತೋಟದಂತೆ ಎಲ್ಲರನ್ನು ಒಂದೆಡೆ ಸೇರಿಸಿ ಜಾತ್ರಾ ಮ ಹೋತ್ಸವ ಹಾಗೂ ಧಾರ್ಮಿಕ ಸಮಾರಂಭಗಳನ್ನು ವಿಶೇಷವಾಗಿ ಆಚರಿ ಸುವ ಮೂಲಕ ಕೋಡಿಮಠ ಧಾರ್ಮಿಕತೆ ಸಾಮರಸ್ಯ ವನ್ನು ಗಟ್ಟಿಗೊಳಿಸುವ ಸುಕ್ಷೇತ್ರ ವಾಗಿ ಬೆಳೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹನೀಯರ ತತ್ವ ಅಳವಡಿಸಿಕೊಳ್ಳಿ: ಕೋಡಿಮಠದ ಶಿವಲಿಂಗಜ್ಜಯ್ಯನವರು ನಡೆದಾಡಿದ ಈ ಪುಣ್ಯ ಭೂಮಿಯನ್ನು ಮೆಟ್ಟಿದ್ದು ನಮ್ಮ ಪೂರ್ವ ಜನ್ಮದ ಸುಕೃತ, ಇಂತಹ ಮಹಾಮಹಿಮರು ಜನಿಸಿದ ಈ ಪುಣ್ಯಭೂಮಿಯಲ್ಲಿ ಇರುವುದೇ ನಮ್ಮ, ನಿಮ್ಮೆಲ್ಲರ ಸೌಭಾಗ್ಯ. ಇಂತಹ ಮಹಾತ್ಮರ ತತ್ವ, ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊ ಳ್ಳುವ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘ
ರಾಜೇಂದ್ರ ಶ್ರೀ ನುಡಿದರು.

ಗುರುವಿನ ಅನುಗ್ರಹ ಮುಖ್ಯ: ಕೋಡಿಮಠದ ಪೀಠಾಧ್ಯಕ್ಷರಾದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಗುರು ಪರಂಪರೆಯ ಮೇಲೆ ನಂಬಿಕೆ ಇಟ್ಟು ಗುರುವಿನ ಮೂಲಕ ದೈವತ್ವ ಕಾಣುವ ನಮ್ಮ ಸಂಸ್ಕೃತಿ ಆಚಾರ ವಿಚಾರಗಳಿಗೆ ಅದರದ್ದೆ ಮಹತ್ವವಿದೆ. ಹರ ಮುನಿದರು ಗುರು ಕಾಯುವನು ಎಂಬ ನಂಬಿಕೆಯೇ ಶಿಷ್ಯ ಕುಲವನ್ನು ಕೈಹಿಡಿದು ನಡೆಸುತ್ತಿದ್ದು, ಗುರುವಿನ ಅನುಗ್ರಹ ಹಾಗೂ ಮಾರ್ಗದರ್ಶನವನ್ನು ಯಾರು ಹೊಂದಿರುತ್ತಾರೋ, ಅವರ ಬದುಕು ಇತರರಿಗೆ ಮಾದರಿಯಾಗಿರುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಶ್ರೀಮಠದ ಉತ್ತರಾಧಿಕಾರಿಗಳಾದ ಚೇತನ್‌ ಮರಿದೇ ವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠ ಡಾ. ಮಹಾಂತ ಸ್ವಾಮೀಜಿ, ಹೊಸನಗರ ಮೂಲೆಗದ್ದೆ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ತೊಗರ್ಸಿ ಪಂಚವನ್ನಿಗೆ ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಮಳೆ ಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಹಾರನಹಳ್ಳಿ ಚೌಕಿ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಯಳನಡು ಸಂಸ್ಥಾನದ ಶ್ರೀ ಜ್ಞಾನ ಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಗೋಣಿಬೀಡು ಮಠದ ಡಾ.ಸಿದ್ದ ಲಿಂಗ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮಾಡಾಳು
ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಕೊಳ ಗುಂದ ಕೇದಿಗೆ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಕೆ.ಬಿದರೆ ದೊಡ್ಡಮಟ್ಟದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಕತ್ರಿ ಘಟ್ಟ ಮಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಧಾರ್ಮಿಕ ಸಮಾರಂಭದ ನಂತರ ಭಕ್ತಾದಿಗಳಿಗೆ ಸಾಮೂಹಿಕ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next