Advertisement
ತಾಲೂಕಿನ ಹಾರನ ಹಳ್ಳಿ ಸುಕ್ಷೇತ್ರ ಕೋಡಿ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕಾರ್ತಿಕ ಮಾಸದ ಅಂಗವಾಗಿ ಏರ್ಪಡಿ ಸಿದ್ದ ಲಕ್ಷ ದೀಪೋತ್ಸವ ಸಮಾರಂಭದ ನೇತೃತ್ವ ವಹಿಸಿ ಶ್ರೀಗಳು ಆಶೀರ್ವಚನ ನೀಡಿ, ಆಧುನಿಕತೆ ಬೆಳೆದಂತೆ ಮನುಷ್ಯನಲ್ಲಿ ಸ್ವಾರ್ಥದ ಹೆಚ್ಚುತ್ತಿದ್ದು, ಸಮಾಜದಲ್ಲಿ ಮಾನವೀಯ ಮೌಲ್ಯಗಳು ಮಾಯವಾಗಿ, ಎಲ್ಲೆಡೆ ಅಶಾಂತಿ ವಾತವರಣ ಸೃಷ್ಟಿಯಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಆದಕಾರಣ ಮಠಮಾನ್ಯಗಳು ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮನುಷ್ಯನಲ್ಲಿನ ನಾನು ನನ್ನದು ಎನ್ನುವ ಅಜ್ಞಾನದ ಅಂಧಃಕಾರವನ್ನು ದೂರ ಮಾಡುವ ಮೂಲಕ ಸಮಾಜದಲ್ಲಿ ಸುಖ, ಶಾಂತಿ, ಸಮಾನತೆಯ ಸಹ ಬಾಳ್ವೆಯು ಎಲ್ಲರಲ್ಲಿ ಬೆಳೆಯಲು ಪ್ರೇರಕ ಶಕ್ತಿಯನ್ನು ನೀಡುವಂತಹ ಮಹತ್ಕಾರ್ಯ ಮಾಡುತ್ತಿರುವುದು ಅತ್ಯಂತ ಹರ್ಷದ ಸಂಗತಿಯಾಗಿದೆ ಎಂದು ಹೇಳಿದರು.
Related Articles
Advertisement
ವೇದಿಕೆಯಲ್ಲಿ ಶ್ರೀಗಳು, ಗಣ್ಯರ ಉಪಸ್ಥಿತಿ: ಧಾರ್ಮಿಕ ಸಮಾರಂಭದ ಸಾನ್ನಿಧ್ಯವನ್ನು ಕೊರಟಗೆರೆ ಸಿದ್ದರಬೆಟ್ಟದ ರಂಭಾಪುರಿ ಶಾಖಾ ಮಠದ ಶ್ರೀವೀರಭದ್ರ ಶಿವಾ ಚಾರ್ಯ ಶ್ರೀ ವಹಿಸಿದ್ದರು. ಸೊರಬ ಶ್ರೀ ಜಡೆಸಂಸ್ಥಾನ ಮಠದ ಡಾ.ಮಹಾಂತ ಶ್ರೀ, ಯಳನಡು ಸಂಸ್ಥಾನದ ಡಾ.ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಶ್ರೀ ಕೊಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಶ್ರೀ, ತಿಪಟೂರು ಷಡಾಕ್ಷರಿ ಮಠದ ರುದ್ರಮುನಿ ಶ್ರೀ, ಚಲನಚಿತ್ರ ನಟರಾದ ವಿಜಯ ರಾಘವೇಂದ್ರ ಮತ್ತು ಕೋಡಿಮಠದ ಉತ್ತರಾಧಿಕಾರಿಗಳಾದ ಚೇತನ್ ಮರಿದೇವರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಅನೇಕ ಗಣ್ಯಮಾನ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧರೆಗಿಳಿದ ಕೈಲಾಸ- ಶ್ರೀಮಠದ ಆವರಣದಲ್ಲಿನ ಗುಡಿ ಗೋಪುರಗಳ ಮೇಲೆ ಸಾಲುಸಾಲಾಗಿ ಬೆಳಗಿದ ಹಣತೆಗಳ ಝಗಮಗಿಸಿದ ಬೆಳಕು ಹಾಗೂ ಬಣ್ಣ-ಬಣ್ಣದ ವಿದ್ಯುತ್ ದೀಪಗಳ ವಿಶೇಷ ಅಲಂಕಾರದೊಂದಿಗೆ ಶನಿವಾರ ರಾತ್ರಿ ಧರೆಯ ಮೇಲಿನ ಕೈಲಾಸದಂತೆ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀಮಠ ಕಂಗೊಳಿಸುವ ಮೂಲಕ ಸಹಸ್ರಾರು ಭಕ್ತರಿಗೆ ಅತ್ಯಂತ ಸಂತಸ ಉಂಟು ಮಾಡಿತ್ತು.
ಶ್ರೀಗಳ ಆಶೀರ್ವಾದ ಪಡೆದಿದ್ದು ನನ್ನ ಪುಣ್ಯ: ಶ್ರೀ ಮಠದ ವತಿಯಿಂದ ಸನ್ಮಾನ ಸ್ವೀಕರಿಸಿದ ಚಲನಚಿತ್ರ ನಟರಾದ ವಿಜಯ ರಾಘವೇಂದ್ರ ಮಾತನಾಡಿ, ತಾವು 15 ವರ್ಷ ಗಳ ನಂತರ ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆ ಯುತ್ತಿರುವುದು ಸಂತಸವಾಗಿದೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಗವಂತ ನಲ್ಲಿ ಪ್ರಾರ್ಥಿಸಿ ಜ್ಯೋತಿಯನ್ನು ಬೆಳಗಿಸುವ ಇಂದಿನ ಶುಭ ದಿನದಂದು ಶ್ರೀಗಳ ಕೃಪಾಶೀರ್ವಾದ ದೊರೆತಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಭಾಗ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.