Advertisement

ಶಾಸಕರು ರೆಸಾರ್ಟ್‌ಗೆ ಹೋದ್ರೆ ಸಗಣಿ ಬಳಿಯುತ್ತೇವೆ

01:29 AM Jan 25, 2019 | |

ರಾಯಚೂರು: ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಬಗ್ಗೆ ಚರ್ಚಿಸ ಲೆಂದೇ ವಿಧಾನಸೌಧದಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಅವರು ಮತ್ತೂಮ್ಮೆ ರೆಸಾರ್ಟ್‌ಗಳಿಗೆ ಹೋದರೆ ಕಾನೂನು ಭಂಗವಾದರೂ ಚಿಂತಿಸದೆ ರೈತ ಮಹಿಳೆಯರಿಂದ ಸಗಣಿ ಬಳಿದು ಪ್ರತಿಭಟಿಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಹೊಡೆದಾಟದಿಂದ ರಾಜ್ಯದ ಗೌರವ ಹರಾಜಾಗಿದೆ. ಇಂಥ ಶಾಸಕರ ಬಗ್ಗೆ ಜನ ಜಾಗೃತರಾಗಬೇಕು. ವಿಧಾನಸೌಧ ಬಿಟ್ಟು ಅವರನ್ನು ರೆಸಾರ್ಟ್‌ಗೆ ಏಕೆ ಕಳುಹಿಸಬೇಕಿತ್ತು. ಇದು ಹೀಗೆ ಸಾಗಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next