Advertisement

ಅಯೋಧ್ಯೆಯಲ್ಲಿ ಅಕ್ಟೋಬರ್‌ 5ರಿಂದಶತಕೋಟಿ ರಾಮ ನಾಮ ಜಪ ಯಜ್ಞ

09:32 AM Sep 20, 2017 | |

ಬಳ್ಳಾರಿ: ಅಯೋಧ್ಯಾ ನಗರದಲ್ಲಿ ತಿರುಮಲ ತಿರುಪತಿ ದೇವಸ್ಥಾನಂ, ಉತ್ತರ ಪ್ರದೇಶ ಸರ್ಕಾರಗಳ ಸಹಯೋಗದಲ್ಲಿ ಅ.5ರಿಂದ ಅ.15ರವರೆಗೆ ಶತಕೋಟಿ ಶ್ರೀರಾಮ ನಾಮ ಜಪಯಜ್ಞ ಹಮ್ಮಿ ಕೊಳ್ಳಲಾಗಿದೆ ಎಂದು ಸ್ವರ್ಣ ಹಂಪಿ ಕ್ಷೇತ್ರದ ಶ್ರೀ ವೇದವ್ಯಾಸ ಆಶ್ರಮದ ಪೀಠಾಧಿಪತಿ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸ್ವರ್ಣ ಹಂಪಿಯಲ್ಲಿ ಪ್ರಸ್ತುತ ಸಾಲಿನ ಶರನ್ನವರಾತ್ರಿಯ ವಿಜಯದಶಮಿ ಉತ್ಸವ ಪೂರ್ಣಗೊಳಿಸಿದ ನಂತರ ಕಿಷ್ಕಿಂಧಾ ಕ್ಷೇತ್ರದಿಂದ ಶ್ರೀ ಹನುಮತ್ಸಮೇತ ಶ್ರೀ ಸೀತಾರಾಮ, ಲಕ್ಷ್ಮಣರ ಉತ್ಸವ ವಿಗ್ರಹಗಳನ್ನು ತಿರುಮಲ ತಿರುಪತಿ ದೇವಸ್ಥಾನ ರೂಪಿಸಿದ ವಿಶೇಷ ವಾಹನದಲ್ಲಿಟ್ಟು ದಿಗ್ವಿಜಯ ಯಾತ್ರೆಯನ್ನು ಸೆ.30ರಂದು ಆರಂಭಿಸಲಾಗುವುದು. ಈ ಯಾತ್ರೆ ಬಳ್ಳಾರಿ, ಹೈದ್ರಾಬಾದ್‌, ನಾಗಪುರ, ಜಬಲ್ಪುರ, ಪ್ರಯಾಗ ಮೂಲಕ ಅಯೋಧ್ಯಾಕ್ಕೆ ತಲುಪಲಿದೆ.

ಅಯೋಧ್ಯಾ ನಗರದಲ್ಲಿ ಅ. 5ರಿಂದ 11 ದಿನಗಳ ಕಾಲ 5000 ಜನರಿಂದ ದಿನಕ್ಕೆ ಎರಡು ಬಾರಿಯಂತೆ ನಿರಂತರವಾಗಿ ಶತ ಕೋಟಿ ಶ್ರೀರಾಮ ನಾಮ ಜಪಯಜ್ಞ ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next