Advertisement

ಏಪ್ರಿಲ್‌ನಲ್ಲಿ ಕೊಡೆ ಮುರುಗ: ಗಾಂಧಿನಗರದ ನೈಜ ಘಟನೆಗಳ ಸುತ್ತ..

11:06 AM Mar 22, 2021 | Team Udayavani |

“ಕೊಡೆಮುರುಗ’ ಎಂಬ ಸಿನಿಮಾ ಬಗ್ಗೆ ನೀವು ಕೇಳಿರಬಹುದು. ಈಗಾಗಲೇ ಟ್ರೇಲರ್‌ ಮೂಲಕ ಮೆಚ್ಚುಗೆ ಪಡೆದು ಗಾಂಧಿನಗರ ಒಂದು ಕಣ್ಣಿಟ್ಟಿರುವಂತೆ ಮಾಡಿರುವ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರವನ್ನು ಏಪ್ರಿಲ್‌ನಲ್ಲಿ ತೆರೆಗೆ ತರಲು ಚಿತ್ರತಂಡ ಯೋಚಿಸಿದೆ.

Advertisement

ಸುಬ್ರಮಣ್ಯ ಪ್ರಸಾದ್‌ ಈ ಚಿತ್ರದನಿರ್ದೇಶಕರು. ಈ ಹಿಂದೆ ಪ್ರಿಯಾಂಕಾ ಉಪೇಂದ್ರ ನಟನೆಯ “ಮಮ್ಮಿ’ ಸಿನಿಮಾವನ್ನು ನಿರ್ಮಿಸಿರುವ ರವಿಕುಮಾರ್‌ ಈ ಚಿತ್ರದ ನಿರ್ಮಾಪಕರು. ಈಗ ಮತ್ತೂಂದು ಹೊಸ ಬಗೆಯ ಸಿನಿಮಾ ಮಾಡಿದ್ದಾರೆ. ಈ ಚಿತ್ರವನ್ನು ಕೂಡಾ ಅದ್ಧೂರಿಯಾಗಿಯೇ ನಿರ್ಮಿಸಿದ್ದಾರೆ. ಕೆಆರ್‌ಕೆ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ಇವರಿಗೆ ಅಶೋಕ್‌ ಶಿರಾಲಿ ಸಾಥ್ ನೀಡಿ, ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ:‘ಕಣ್ಣು ಹೊಡೆಯಾಕ ಹಾಡು’ 2 ಕೋಟಿ ವೀಕ್ಷಣೆ: ಶ್ರೇಯಾ ಘೋಷಾಲ್‌ ಫುಲ್ ಖುಷ್‌

ಗಾಂಧಿನಗರದ ರೆಗ್ಯುಲರ್‌ ಕಾನ್ಸೆಪ್ಟ್ ಅನ್ನು ಬಿಟ್ಟು ಈ ಸಿನಿಮಾ ಮಾಡಲಾಗಿದ್ದು, ಪಾತ್ರದಲ್ಲಿ ಮುನಿಕೃಷ್ಣ ಹಾಗೂ ಸುಬ್ರಮಣ್ಯ ಪ್ರಸಾದ್‌ ಇದ್ದಾರೆ. ನಾಯಕಿಯಾಗಿ ಪಲ್ಲವಿಗೌಡ ಬಣ್ಣ ಹಚ್ಚಿದ್ದಾರೆ. ಈ ಹಿಂದೆ “ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಖಳನಟನಾಗಿ ಅಬ್ಬರಿಸಿದ್ದ ಮುನಿಕೃಷ್ಣ ಈ ಚಿತ್ರದಲ್ಲಿ ಕೊಡೆ ಮುರುಗನಾಗಿ ನಟಿಸಿದ್ದಾರೆ.

ಗಾಂಧಿನಗರದಲ್ಲಿನ ಕೆಲವು ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಮನರಂಜನೆಯ ಅಂಶವಾಗಿ ಪರಿವರ್ತಿಸಿ ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಮನರಂಜನೆಗೆ ಮೊದಲ ಆದ್ಯತೆ ನೀಡಿರುವುದರಿಂದ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು.

Advertisement

ಚಿತ್ರದಲ್ಲಿ ಅರವಿಂದ ರಾವ್‌, ರಾಕ್‌ಲೈನ್‌ ಸುಧಾಕರ್‌, ಕುರಿ ಪ್ರತಾಪ್‌, ಸ್ವಾತಿ ಗುರುದತ್‌, ಅಶೋಕ್‌, ಸ್ವಯಂವರ ಚಂದ್ರು, ತುಮಕೂರು ಮೋಹನ್‌, ಮೋಹನ್‌ ಜುನೇಜಾ ನಟಿಸಿದ್ದಾರೆ. ಇನ್ನು, ಚಿತ್ರದ ವಿಶೇಷ ಹಾಡೊಂದಕ್ಕೆ “ಲೂಸ್‌ ಮಾದ’ ಯೋಗಿ ಹೆಜ್ಜೆ ಹಾಕಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next