Advertisement

ಕೊಡವ ಭಾಷಿಕ ಸಮುದಾಯಗಳ ಕೂಟ  ಮನವಿ

01:00 AM Mar 08, 2019 | Harsha Rao |

ಮಡಿಕೇರಿ: ಕೊಡವ ಭಾಷೆ ಮಾತನಾಡುವ 20 ಭಾಷಿಕ ಸಮುದಾಯ ಬಾಂಧವರ ಅಭ್ಯುದಯಕ್ಕಾಗಿ ಪೂರ್ಣ ಪ್ರಮಾಣದ ತಜ್ಞರ ಸಮಿತಿಮತ್ತು ಸತ್ಯಶೋಧನಾ ಸಮಿತಿಯನ್ನು ರಚಿಸಿ ಅಗತ್ಯ ನೆರವನ್ನು ನೀಡಬೇಕೆಂದು ಒತ್ತಾಯಿಸಿ ಕೊಡವ ಭಾಷಿಕ ಸಮುದಾಯಗಳ ಕೂಟ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾ ಅವರಿಗೆ ಮನ ಸಲ್ಲಿಸಲಾಯಿತು.

Advertisement

ಇತ್ತೀಚೆಗೆ ಬಸವನಹಳ್ಳಿಗೆ ಮುಖ್ಯ ಮಂತ್ರಿಗಳು ಭೇಟಿ ನೀಡಿದ್ದ ಸಂದರ್ಭ ಕೂಟದ ಸಂಚಾಲಕ ಡಾ.ಮೇಚೀರ ಸುಭಾಷ್‌ ನಾಣಯ್ಯ ಹಾಗೂ ಪದಾಧಿಕಾರಿಗಳು ಕೊಡವ ಭಾಷೆ ಮಾತನಾಡುವ 20 ಭಾಷಿಕ ಸಮುದಾಯದ ಬೇಡಿಕೆಗಳ ಬಗ್ಗೆ ಚರ್ಚಿಸಿದರು.

ಕೊಡವ ಭಾಷಿಕ ಮೂಲನಿವಾಸಿಗಳು ಪೂರ್ವಿಕರ ಕಾಲದಿಂದಲೇ ಪಕೃತಿಯನ್ನು ಆರಾಧ್ಯದೈವವೆಂದು ನಂಬಿ ಅನಾನು ಭಾವ ಸಂಬಂಧ ಹೊಂದಿಕೊಂಡು ಬಂದಿ ರುವುದು ಇತಿಹಾಸದಿಂದ ತಿಳಿಯುತ್ತದೆ. ಈ ಭೂಪ್ರದೇಶವನ್ನು ಆಳಿದ ಅದೇಷ್ಟೋ ರಾಜಮಹಾರಾಜರು, ಬ್ರಿಟಿಷರು, ಕೃಷಿಗೆ ಒತ್ತು ಕೊಟ್ಟು ಇಲ್ಲಿನ ಜನಸಮುದಾಯಕ್ಕೆ ಜಮ್ಮ, ಉಂಬಳಿ ಜಾಗ, ಭೂಮಿ ಕೊಟ್ಟು ಜೀವನೋಪಾಯಕ್ಕೆ ನೆರವಾಗಿದ್ದರು. ಆದರೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಜೀವನ‌ಮಟ್ಟ ಸುಧಾರಣೆ ಕಾಣದಿರುವುದು ವಿಷಾದನೀಯ.

ಕೊಡಗು ವನಸಂಪತ್ತಿನಿಂದ ಕಂಗೊಳಿ  ಸುತ್ತಿದ್ದು, ಅದರ ಪೋಷಣೆ, ಪಾಲನೆ ಈ ನಾಡಿನ ಮೂಲ ನಿವಾಸಿಗಳಿಗೆ ಹೆಮ್ಮೆಯ ವಿಷಯ. 

ಆಧುನಿಕತೆಯ ಭರಾಟೆಯಲ್ಲಿ ಪರಕೀ ಯರ ಅನ್ಯಮನಸ್ಸಿನ  ವಿಕೃತ ಧಾಳಿಯಿಂದ ಅವೆಷ್ಟೋ ಭೂಪ್ರದೇಶ ಹಾನಿಗೊಂಡಿದೆ. 

Advertisement

ಆದರೂ ಇವೆಲ್ಲವನ್ನು ಸಹಿಸಿಕೊಂಡು ಕೊಡವ ಭಾಷೆ ಮಾತನಾಡುವ ಅಮ್ಮಕೊಡವ, ಹೆಗ್ಗಡೆ, ಐರಿ, ಕೊಯವ, ಕೆಂಬಟ್ಟಿ, ಕುಡಿಯ, ಪಣಿಕ, ನಾಂದ, ನಾಯರ್‌, ಕೋಲೆಯ, ಗೊಲ್ಲ, ಮಡಿವಾಳ, ಮಲಿಯ, ಕಣಿಯ, ಮೇದ, ಬಣ್ಣ, ಕಾಪಾಳ, ಬೂಣೆಬಟ್ಟ, ಬಾಣಿಯ, ಮಾರಂಗಿ ಸಮುದಾಯ ಕೊಡಗಿನಲ್ಲಿ ಜೀವನ ಸಾಗಿಸುತ್ತಿದೆ.

1974-75 ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಲ್‌.ಜಿ. ಹಾವನೂರು ಅವರ ಮುತುವರ್ಜಿಯಿಂದ ಪ್ರಪ್ರಥಮವಾಗಿ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು. ನಂತರ ಬಂದ ಯಾವುದೇ ಆಯೋಗ ಕೊಡಗಿನ ಅತೀ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ನಿರೀಕ್ಷಿತ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ನ್ಯಾಯ ಒದಗಿಸದೆ ಎಡವಿರುವುದು ವಿಷಾದನೀಯವೆಂದು ಸುಭಾಷ್‌ ನಾಣಯ್ಯ ಮುಖ್ಯಮಂತ್ರಿಗಳ ಗಮನ ಸೆಳೆದರು.

ಬೇಡಿಕೆಗಳು
ಸುಮಾರು 82 ಸಾವಿರ ಜನಸಂಖ್ಯೆಯಿರುವ ಸಮುದಾಯಕ್ಕೆ ಸಮುದಾಯ ಭವನವನ್ನು ಮಂಜೂರು ಮಾಡಿ ಕನಿಷ್ಠ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸಮುದಾಯದ ಅಭಿವೃದ್ಧಿಗಾಗಿ ಮೂಲಭೂತ ಸೌಲಭ್ಯ ನೀಡಬೇಕು, ಸರಕಾರದ ವತಿಯಿಂದ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿ ಪ್ರಕ್ರಿಯೆ ಆರಂಭಿಸಬೇಕು. 

ಶಿಷ್ಟ ಸಂಸ್ಕೃತಿ ಹೊಂದಿರುವ ಕೊಡವ ಭಾಷೆಯನ್ನು ಮಾತನಾಡುವ ಸಮುದಾಯಗಳನ್ನು (ಹಿಂದುಳಿದ ವರ್ಗ, ಪ.ಜಾ, ಪ.ಪಂಗಡ) ಭಾಷಾ ಅಲ್ಪಸಂಖ್ಯಾಕರೆಂದು ಘೋಷಿಸಬೇಕು, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಜವಾಹರ್‌ ನವೋದಯ ಶಾಲೆ ಮಾದರಿಯಲ್ಲಿ ವಸತಿ ಶಾಲೆಯನ್ನು ನಿರ್ಮಿಸಿ ಶಿಕ್ಷಣ ಸೌಲಭ್ಯ ಒದಗಿಸಬೇಂಕೆಬ ಬೇಡಿಕೆಯನ್ನು   ಕೊಡವ ಭಾಷಿಕ ಸಮುದಾಯಗಳ ಕೂಟ ಇಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next