ಮಡಿಕೇರಿ: ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಮಾಳೇಟಿರ,ಮಲ್ಲಚ್ಚಿರ, ಇಟ್ಟಿàರ, ಮಾರ್ಚಂಡ, ಮಾಪಂಗಡ,ಬಿದ್ದಾಟಂಡ, ಕಾಳಿಮಡ, ಬಟ್ಟಿàರ, ಮೇಕೇರಿರ,ನಾಯಕಂಡ, ಕಲ್ಲೇಂಗಡ, ಕೊಕ್ಕಂಡ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದು ಕೊಂಡಿವೆ.
ಇಂದು ನಡೆದ ಮೊದಲ ಪಂದ್ಯಾಟದಲ್ಲಿ ಮಾಳೇಟಿರ(ಕೆದಮುಳ್ಳುರ್) ತಂಡವು ಅಜ್ಜೀನಂಡ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ಮುಂದಿನ ಪಂದ್ಯದಲ್ಲಿ ಮಲ್ಲಚ್ಚಿರ ತಂಡವು ಪಾಂಡಂಡ ತಂಡವನ್ನು 5-0 ಗೋಲಿನಿಂದ ಸುಲಭವಾಗಿ ಮಣಿಸಿತು.
ಇಟ್ಟಿàರ ತಂಡವು ಮಾದಂಡ ತಂಡವನ್ನು 1-0 ಗೋಲಿನಿಂದ ಮಣಿಸಿತು. ಮಾರ್ಚಂಡ ತಂಡವು ಅಪ್ಪಚ್ಚಂಡ ತಂಡವನ್ನು 4-0 ಗೋಲಿನಿಂದ ನಿರಾಯಾಸವಾಗಿ ಮಣಿಸಿತು. ಮೇಕೆರಿರ ತಂಡವು ಅಮ್ಮಣಿಚಂಡ ತಂಡವನ್ನು 5-1 ಗೋಲಿ ನಿಂದ ಮಣಿಸಿತು. ಕಲ್ಲೇಂಗಡ ತಂಡವು ಕರವಂಡ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆಯಿತು.
ನಾಯಕಂಡ ತಂಡವು 2-0 ಗೋಲುಗಳಿಂದ ಕುಂಚೇಟಿರವನ್ನು ಸೋಲಿಸಿತು. ತಡಿಯಂಗಡ ತಂಡವು ಮಾಪಂಗಡ ವಿರುದಟಛಿ 3-0 ಗೋಲುಗಳಿಂದ ಸೋಲನುಭವಿಸಿತು. ಬಿದ್ದಾಟಂಡ ತಂಡವು ಪರು ವಂಗಡ ತಂಡವನ್ನು 2-1 ಗೋಲುಗಳಿಂದ, ಕಾಳಿಮಾಡ ತಂಡವು ಮೊಣ್ಣಂಡ ತಂಡವನ್ನು 4-0 ಗೋಲುಗಳಿಂದ ಭರ್ಜರಿಯಾಗಿ ಮಣಿಸಿದವು. ಬಟ್ಟಿàರ ತಂಡವು ಬೊಳ್ಳಚೇಟ್ಟಿರವನ್ನು,ಕೊಕ್ಕಂಡ ತಂಡವು ಪಾಲಂದಿರವನ್ನು ಸೋಲಿಸಿತು.
– ಎಸ್.ಕೆ.ಲಕ್ಷ್ಮೀಶ